ಟಿ.ನರಸೀಪುರಕ್ಕೆ ನಾವಿಬ್ಬರೂ ಆಕಾಂಕ್ಷಿ: ತಂದೆ-ಮಗ

First Published 21, Mar 2018, 8:12 AM IST
Who Is the Candidate Of T Narasipura
Highlights

ಲೋಕೋಪಯೋಗಿ ಇಲಾಖೆ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮತ್ತು ಅವರ ಪುತ್ರ ಸುನಿಲ್‌ ಬೋಸ್‌ ಅವರು ಇಬ್ಬರೂ ಆಕಾಂಕ್ಷಿಗಳು. ಹೌದು. ಖುದ್ದು ಸುನೀಲ್‌ ಬೋಸ್‌ ಹಾಗೂ ಮಹದೇವಪ್ಪ ಅವರೇ ಈ ವಿಷಯವನ್ನು ತಿಳಿಸಿದ್ದಾರೆ.

ಮೈಸೂರು : ಲೋಕೋಪಯೋಗಿ ಇಲಾಖೆ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮತ್ತು ಅವರ ಪುತ್ರ ಸುನಿಲ್‌ ಬೋಸ್‌ ಅವರು ಇಬ್ಬರೂ ಆಕಾಂಕ್ಷಿಗಳು. ಹೌದು. ಖುದ್ದು ಸುನೀಲ್‌ ಬೋಸ್‌ ಹಾಗೂ ಮಹದೇವಪ್ಪ ಅವರೇ ಈ ವಿಷಯವನ್ನು ತಿಳಿಸಿದ್ದಾರೆ.

ನಗರದಲ್ಲಿ ತಂದೆಯ ಸಂಗಡವೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುನಿಲ್‌ ಬೋಸ್‌, ‘ಟಿ.ನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಲು ನನ್ನ ಹಾಗೂ ತಂದೆಯ ಹೆಸರು ಹೈಕಮಾಂಡ್‌ಗೆ ಹೋಗಿದೆ. ಆದರೆ, ಅಂತಿಮವಾಗಿ ಒಬ್ಬರು ಮಾತ್ರವೇ ನಿಲ್ಲುವ ಸಂದರ್ಭ ಎದುರಾದರೆ, ತಂದೆಯವರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡುತ್ತೇನೆ. ಒಂದೊಮ್ಮೆ ತಂದೆ ಚುನಾವಣೆಗೆ ನಿಲ್ಲದಿದ್ದರೇ ನಾನು ಚುನಾವಣೆಗೆ ನಿಲ್ಲುವೆ’ ಎಂದು ಸ್ಪಷ್ಟಪಡಿಸಿದರು.

ಸಚಿವ ಮಹದೇವಪ್ಪ ಮಾತನಾಡಿ, ‘ಟಿ.ನರಸೀಪುರದಿಂದ ತಾನು ಹಾಗೂ ತನ್ನ ಪುತ್ರರಿಬ್ಬರೂ ಟಿಕೆಟ್‌ ಆಕಾಂಕ್ಷಿಗಳಾಗಿದ್ದು ಹೈಕಮಾಂಡ್‌ ಅಂತಿಮ ತೀರ್ಮಾನ ಕೈಗೊಳ್ಳಲಿದೆ’ ಎಂದು ತಿಳಿಸಿದರು.

ಇದೇವೇಳೆ ಅವರು ಸಿ.ವಿ.ರಾಮನ್‌ ನಗರದಿಂದ ಕಣಕ್ಕಿಳಿಯುತ್ತಾರೆಂಬ ಊಹಾಪೋಹಗಳಿಗೆ ಅವರು ತೆರ ಎಳೆದರು. ಮೈಸೂರಿನೊಂದಿಗೆ ತಮಗೆ ಅವಿನಾಭಾವ ಸಂಬಂಧವಿದ್ದು, ಟಿ.ನರಸೀಪುರ ಹಾಗೂ ನಂಜನಗೂಡಿನ ಜನ ಸೋತಾಗಲೂ ಕಾರು ಕೊಟ್ಟು ಓಡಾಡಿಸಿದ್ದಾರೆ. ಇಂತಹ ಜನರನ್ನು ಬಿಟ್ಟು ಬೇರೊಂದು ಕ್ಷೇತ್ರಕ್ಕೆ ಹೋಗಲು ಮನಸ್ಸಿಲ್ಲ ಎಂದರು.

ಈ ಬಾರಿಯ ವಿಧಾನಸಭಾ ಚುನಾವಣೆಯು ಕರ್ನಾಟಕ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಪ್ರಮುಖ ಚುನಾವಣೆಯಾಗಿದೆ. ಹೀಗಾಗಿ, ನನಗೆ ಅಧಿಕಾರದ ರಾಜಕಾರಣಕ್ಕಿಂತ, ಕೋಮುವಾದಿ ಶಕ್ತಿಗಳನ್ನು ಮಣಿಸುವ ರಾಜಕಾರಣ ಮಾಡಬೇಕೆನಿಸಿದೆ ಎಂದರು.

loader