ಜೆಡಿಎಸ್ ನಲ್ಲಿ ಯಾರಿಗೆ ಮಂತ್ರಿಗಿರಿ..?

Who Get PortFolio In JDS
Highlights

 ಸಿಗುವ 11ಸಚಿವ ಸ್ಥಾನಗಳ ಪೈಕಿ ಬುಧವಾರ ಮೊದಲ ಹಂತದಲ್ಲೇ ಎಲ್ಲವನ್ನೂ ಭರ್ತಿ ಮಾಡಬೇಕೋ ಅಥವಾ ಒಂದೆರಡನ್ನು ಖಾಲಿ ಉಳಿಸಿಕೊಳ್ಳಬೇಕೋ ಎಂಬ ಜಿಜ್ಞಾಸೆಯಲ್ಲಿ ಜೆಡಿಎಸ್ ನಾಯಕರಿದ್ದಾರೆ. 

ಬೆಂಗಳೂರು :  ಸಿಗುವ 11ಸಚಿವ ಸ್ಥಾನಗಳ ಪೈಕಿ ಬುಧವಾರ ಮೊದಲ ಹಂತದಲ್ಲೇ ಎಲ್ಲವನ್ನೂ ಭರ್ತಿ ಮಾಡಬೇಕೋ ಅಥವಾ ಒಂದೆರಡನ್ನು ಖಾಲಿ ಉಳಿಸಿಕೊಳ್ಳಬೇಕೋ ಎಂಬ ಜಿಜ್ಞಾಸೆಯಲ್ಲಿ ಜೆಡಿಎಸ್ ನಾಯಕರಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಸಚಿವ ಸ್ಥಾನಕ್ಕಾಗಿ ಬಂಡಾಯ ಏಳುವ ಪ್ರವೃತ್ತಿ ಪಕ್ಷದ ಶಾಸಕರಲ್ಲಿ ಕಂಡು ಬಂದಿಲ್ಲವಾದರೂ ಮುಂದೆ ಅಪಾಯ ಉದ್ಭವಿಸಬಹುದೇನೋ ಎಂಬ ಸಣ್ಣ ಆತಂಕವಂತೂ ಇದ್ದೇ ಇದೆ.

ಆದರೆ, ಕೇವಲ 11 ಸಚಿವ ಸ್ಥಾನ ಸಿಕ್ಕಿರು ವುದರಿಂದ ಅದರಲ್ಲೇ ಜಾತಿವಾರು ಸಮೀಕರಣ ಮತ್ತು ಪ್ರದೇಶವಾರು ಸಮತೋಲನ ಮಾಡಬೇಕಾಗಿದೆ. ಹೀಗಿರುವಾಗ ಒಂದೆರಡು ಸ್ಥಾನ ಖಾಲಿ ಉಳಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಯೂ ಎದುರಾಗಿದೆ. ಈ ಬಗ್ಗೆ ಸೋಮವಾರ ಅಥವಾ ಮಂಗಳವಾರ ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆಯಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಸಂಭವನೀಯ ಬಂಡಾಯ ನಿಯಂತ್ರಿಸುವ ಉದ್ದೇಶದಿಂದ ಒಂದು ಅಥವಾ ಎರಡು ಸಚಿವ ಸ್ಥಾನಗಳನ್ನು ಖಾಲಿ ಉಳಿಸಿಕೊಂಡು ಪ್ರಮುಖ ನಿಗಮ ಮಂಡಳಿಗಳ ನೇಮಕ ಪೂರ್ಣಗೊಂಡ ಬಳಿಕ ಭರ್ತಿ ಮಾಡುವುದು ಸೂಕ್ತವಾದೀತು ಎಂಬ ಅಭಿಪ್ರಾಯವೂ ಕೇಳಿಬಂದಿದೆ. ಆದರೆ, ಯಾವುದೂ ಅಂತಿಮ ನಿರ್ಧಾರವಾಗಿಲ್ಲ ಎನ್ನಲಾಗಿದೆ.

loader