ರಜನೀಕಾಂತ್ ಮೇಲೆ ರೇಗಾಡಿದ ಯುವಕ!

Who are you?’, youth asks Rajinikanth in Thoothukudi hospital
Highlights

ಸ್ಟರ್ಲೈಟ್ ಹಿಂಸಾಚಾರದಲ್ಲಿ ಗಾಯಗೊಂಡವರ ಭೇಟಿಗೆ ಆಗಮಿಸಿದ್ದ ನಟ ಕಂ ರಾಜಕಾರಣಿ ರಜನೀಕಾಂತ್ ಅವರನ್ನು ಗಾಯಾಳುವೊಬ್ಬ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಘಟನೆ ತೂತ್ತುಕುಡಿಯ ಆಸ್ಪತ್ರೆಯಲ್ಲಿ  ನಡೆದಿದೆ.  

ಚೆನ್ನೈ (ಮೇ. 31): ಸ್ಟರ್ಲೈಟ್ ಹಿಂಸಾಚಾರದಲ್ಲಿ ಗಾಯಗೊಂಡವರ ಭೇಟಿಗೆ ಆಗಮಿಸಿದ್ದ ನಟ ಕಂ ರಾಜಕಾರಣಿ ರಜನೀಕಾಂತ್ ಅವರನ್ನು ಗಾಯಾಳುವೊಬ್ಬ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಘಟನೆ ತೂತ್ತುಕುಡಿಯ ಆಸ್ಪತ್ರೆಯಲ್ಲಿ  ನಡೆದಿದೆ. 

ಗಾಯಾಳುಗಳ ಸ್ಥಿತಿಗತಿ ವಿಚಾರಣೆಗಾಗಿ ಆಸ್ಪತ್ರೆಗೆ ಆಗಮಿಸಿದ ರಜನೀಕಾಂತ್ ಅವರನ್ನು ತಡೆದ ಗಾಯಾಳು ಯುವಕನೋರ್ವ, ‘ನೀನ್ಯಾರು,’ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ರಜನಿ ಸೌಮ್ಯವಾಗಿಯೇ ‘ನಾನು ರಜನೀಕಾಂತ್ ಚೆನ್ನೈನಿಂದ ಬಂದಿದ್ದೇನೆ’ ಎಂದಿದ್ದಾರೆ. 

ಈ ಉತ್ತರಕ್ಕೂ ತಣ್ಣಗಾಗದ ಯುವಕ, ‘ನಮ್ಮ ಭೇಟಿಗೆ ಬರಲು ನಿಮಗೆ 100 ದಿನಗಳು ಬೇಕಾಯಿತೇ’ ಎಂದು ಕಿಡಿಕಾರಿದ್ದಾನೆ. ಈ ಮೂಲಕ 100 ದಿನಗಳಿಂದ ಸ್ಟರ್ಲೈಟ್ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದರೂ, ಅದಕ್ಕೆ ಸಹಕಾರ ನೀಡದ್ದಕ್ಕೆ

ರಜನೀಕಾಂತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಇದೇ ಔಏಳೆ ಸ್ಟರ್ಲೈಟ್ ಹಿಂಸಾಚಾರದಲ್ಲಿ ಸಾವನ್ನಪ್ಪಿದ 13 ಜನರ ಕುಟುಂಬ ಸದಸ್ಯರಿಗೆ ರಜನಿ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.  

loader