ಲೋಕಾಯುಕ್ತವನ್ನು ರಾಜ್ಯ ಸರ್ಕಾರ ಹಲ್ಲಿಲ್ಲದ ಹಾವು ಮಾಡಿದೆ -  ಶೇ. 21ಭ್ರಷ್ಟಾಚಾರ ಮುಚ್ಚಿಕೊಳ್ಳಲು ದುರ್ಬಲ ಮಾಡಿದ್ದರೂ ಮಾಡಿರಬಹುದು – ಶೇ.14ಖಂಡಿತಾ ಸಿದ್ದರಾಮಯ್ಯ ನೇತೃತ್ವದ ಸರ್ಕಾರ  ಈ ಕೆಲಸ ಮಾಡಿಲ್ಲ – ಶೇ. 18ಸ್ವಾರ್ಥಕ್ಕಾಗಿ ಲೋಕಾಯುಕ್ತವನ್ನು ಸರ್ಕಾರ ದುರ್ಬಲ ಮಾಡಿದೆಯೋ ಇಲ್ಲವೋ ಗೊತ್ತಿಲ್ಲ – ಶೇ. 19

ಬೆಂಗಳೂರು(ಡಿ.7): ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಕರ್ನಾಟಕ ಲೋಕಾಯುಕ್ತ ಸಂಸ್ಥೆ ದೇಶಾದ್ಯಂತ ಗಮನಸೆಳೆದಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಲು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಂಬ ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಿತು. ಇದು ಲೋಕಾಯುಕ್ತದ ಶಕ್ತಿ ಕುಂದಿಸುವ ಯತ್ನ ಎಂಬ ಟೀಕೆ, ಆಕ್ರೋಶ ಆ ವೇಳೆ ವ್ಯಕ್ತವಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜನಸಾಮಾನ್ಯರಲ್ಲಿ ಈಗಲೂ ಅದೇ ಭಾವನೆ ಇದೆ ಎಂಬ ಅಂಶ ಸಮೀಕ್ಷೆಯಿಂದ ತಿಳಿದುಬಂದಿದೆ. ಲೋಕಾ ಯುಕ್ತವನ್ನು ಸರ್ಕಾರ ದುರ್ಬಲಗೊಳಿಸಿದೆ,ದುರ್ಬಲ ಮಾಡಿರಬಹುದು ಎಂದು ಹೇಳಿದವರ ಸಂಖ್ಯೆ ಶೇ.50ಕ್ಕಿಂತ ಹೆಚ್ಚಿರುವುದು ಗಮನಾರ್ಹ. ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಈ ಭಾವನೆ ಹೆಚ್ಚಾಗಿದೆ. ವಿವಿಧ ಜಾತಿಗಳ ಪೈಕಿ ಲಿಂಗಾಯತರು, ವಿವಿಧ ಪ್ರಾಂತ್ಯಗಳ ಪೈಕಿ ಲಿಂಗಾಯತ ಬಾಹುಳ್ಯದ ಮುಂಬೈ ಕರ್ನಾಟಕದಲ್ಲಿ ಸರ್ಕಾರ ಲೋಕಾಯುಕ್ತವನ್ನು ದುರ್ಬಲ ಮಾಡಿರಬಹುದು ಎಂಬ ಅಭಿಪ್ರಾಯ ಗಟ್ಟಿಯಾಗಿ ಕೇಳಿಬಂದಿದೆ.