ಅಭಿವೃದ್ಧಿ ಹೊಂದಿದ ದೇಶವಾಗಲು ಭಾರತಕ್ಕೆ ಇನ್ನೊಂದೇ ದಶಕ ಬಾಕಿ

news | Thursday, June 14th, 2018
Suvarna Web Desk
Highlights

ಸದ್ಯ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಟ್ಟಿಯಲ್ಲಿ ಇರುವ ಭಾರತಕ್ಕೆ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರಲು ಇನ್ನು ದಶಕದ ಅವಧಿ ಮಾತ್ರ ಬಾಕಿ ಇದೆ. ಭಾರತ ಶಿಕ್ಷಣಕ್ಕೆ ಆದ್ಯತೆ ನೀಡಿದ್ದೇ ಆದಲ್ಲಿ ಅದು ಇನ್ನೊಂದು ದಶಕದಲ್ಲಿ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಲಿದೆ. 

ಮುಂಬೈ: ಸದ್ಯ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಟ್ಟಿಯಲ್ಲಿ ಇರುವ ಭಾರತಕ್ಕೆ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರಲು ಇನ್ನು ದಶಕದ ಅವಧಿ ಮಾತ್ರ ಬಾಕಿ ಇದೆ. ಭಾರತ ಶಿಕ್ಷಣಕ್ಕೆ ಆದ್ಯತೆ ನೀಡಿದ್ದೇ ಆದಲ್ಲಿ ಅದು ಇನ್ನೊಂದು ದಶಕದಲ್ಲಿ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಲಿದೆ. ಒಂದು ವೇಳೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡದೇ ಹೋದಲ್ಲಿ ಭಾರತ ಎಂದೆಂದೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲಿನಲ್ಲೇ ಉಳಿಯಬೇಕಾಗಿ ಬರಲಿದೆ ಎಂದು ವರದಿಯೊಂದು ಎಚ್ಚರಿಕೆ ನೀಡಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ)ದ ಸಂಶೋಧನಾ ವಿಭಾಗ ಸಿದ್ಧಪಡಿಸಿರುವ ವರದಿ ಅನ್ವಯ, ಭಾರತದ ಯುವಸಮೂಹದ ಬಗ್ಗೆ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕಿದೆ. ಅವರಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಿದೆ. ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರಗಳು ಹೆಚ್ಚಿನ ಬಂಡವಾಳ ಹೂಡಬೇಕು. ಹೀಗಾದಲ್ಲಿ ಜನಸಂಖ್ಯೆಯ ಲಾಭವು 2030ರ ವೇಳೆ ಭಾರತಕ್ಕೆ ಲಾಭ ಮಾಡಿಕೊಡಲಿದೆ. ಒಂದು ವೇಳೆ ಶಿಕ್ಷಣಕ್ಕೆ ಆದ್ಯತೆ ನೀಡದೇ ಹೋದಲ್ಲಿ ಇದೇ ಜನಸಂಖ್ಯೆಯ ವಿಷಯವೇ ದೇಶಕ್ಕೆ ಅನಾನುಕೂಲವಾಗಲಿದೆ ಎಂದು ವರದಿ ತಿಳಿಸಿದೆ.

ಇದೇ ವೇಳೆ ಕಳೆದ ಕೆಲವು ದಶಕಗಳಿಂದ ಜನಸಂಖ್ಯಾ ಬೆಳವಣಿಗೆ ದರದಲ್ಲಿ ಕುಸಿತ ದಾಖಲಿಸಿರುವ ಕರ್ನಾಟಕದಂತ ರಾಜ್ಯಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. 1971ರಲ್ಲಿ ಕರ್ನಾಟಕದಲ್ಲಿ 60 ವರ್ಷ ದಾಟಿದವರ ಸಂಖ್ಯೆ ಶೇ.6.1 ಇದ್ದಿದ್ದು, 2011ರಲ್ಲಿ ಶೆ.9.5ಕ್ಕೆ ಏರಿದೆ. ಹೀಗೆ ಜನಸಂಖ್ಯೆ ಕಡಿಮೆಯಾಗುತ್ತಿರುವುದು ಜನತೆ, ಮಕ್ಕಳ ಸಂಖ್ಯೆ ಕಡಿಮೆ ಮಾಡಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂಬುದು ಸುಳಿವು ಎಂದು ವರದಿ ಹೇಳೀದೆ. ಇದೇ ವೇಳೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುವುದಕ್ಕೆ ಕಾರಣವಾಗುವುದರಿಂದ, ಸರ್ಕಾರಗಳು ಶಾಲೆಗಳ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸುವ ತುರ್ತು ಅಗತ್ಯವಿದೆ. ಆರ್‌ಟಿಇಯಡಿ ಖಾಸಗಿ ಶಾಲೆಗಳಿಗೆ ಅನುದಾನ ಒದಗಿಸುವುದನ್ನೂ ನಿಲ್ಲಿಸಬೇಕಾಗಿದೆ, ಅದೇ ಹಣವನ್ನು ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯ ಹೆಚ್ಚಿಸಬೇಕಾಗಿದೆ ಎಂಬ ಸಲಹೆಗಳನ್ನು ವರದಿಯಲ್ಲಿ ನೀಡಲಾಗಿದೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Sujatha NR