ರಾಜ್ಯದಲ್ಲಿ ಆವರಿಸಿರುವ ಭೀಕರ ಬರಗಾಲದಿಂದ ಜನ ತತ್ತರಿಸಿದ್ದಾರೆ..ಜೀವನ ಹೇಗಪ್ಪಾ ಅಂತಾ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಶಾಸಕರಿಗೆ ಈ ಚಿಂತೆಯೇ ಇಲ್ಲ. ಅವರಿಗೇನಿದ್ದರೂ ಮೋಜು ಮಸ್ತಿಯ ಚಿಂತೆ. ರಾಜ್ಯದಲ್ಲಿ ಬರ ಆವರಿಸಿದೆ. ಹನಿ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಮುಂದೇನು ಅಂತ ಅನ್ನದಾತ ತಲೆಮೇಲೆ ಕೈ ಹೊತ್ತು ಕುಳಿತಿದ್ದಾನೆ. ಇಂತಹ ಸಂಕಷ್ಟದಲ್ಲಿ ಅನ್ನದಾತನ ನೆರವಿಗೆ ಬರಬೇಕಾದ ಶಾಸಕರು, ಮೋಜು ಮಸ್ತಿ ಮಾಡಲು ಕ್ಲಬ್ ನಿರ್ಮಾಣಕ್ಕೆ  ಬಿಗಿಪಟ್ಟು ಹಿಡಿದಿದ್ದಾರೆ.

ಬೆಂಗಳೂರು(ನ.23): ರಾಜ್ಯದಲ್ಲಿ ಆವರಿಸಿರುವ ಭೀಕರ ಬರಗಾಲದಿಂದ ಜನ ತತ್ತರಿಸಿದ್ದಾರೆ..ಜೀವನ ಹೇಗಪ್ಪಾ ಅಂತಾ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಶಾಸಕರಿಗೆ ಈ ಚಿಂತೆಯೇ ಇಲ್ಲ. ಅವರಿಗೇನಿದ್ದರೂ ಮೋಜು ಮಸ್ತಿಯ ಚಿಂತೆ.

ರಾಜ್ಯದಲ್ಲಿ ಬರ ಆವರಿಸಿದೆ. ಹನಿ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಮುಂದೇನು ಅಂತ ಅನ್ನದಾತ ತಲೆಮೇಲೆ ಕೈ ಹೊತ್ತು ಕುಳಿತಿದ್ದಾನೆ. ಇಂತಹ ಸಂಕಷ್ಟದಲ್ಲಿ ಅನ್ನದಾತನ ನೆರವಿಗೆ ಬರಬೇಕಾದ ಶಾಸಕರು, ಮೋಜು ಮಸ್ತಿ ಮಾಡಲು ಕ್ಲಬ್ ನಿರ್ಮಾಣಕ್ಕೆ ಬಿಗಿಪಟ್ಟು ಹಿಡಿದಿದ್ದಾರೆ.

ವಸತಿ ವ್ಯವಸ್ಥೆ ಇರುವಾಗ ಶಾಸಕರಿಗೆ ಕ್ಲಬ್ ಬೇಕಾ?

ಹೌದು ಬರದ ಮಧ್ಯ ಶಾಸಕರಿಗೆ ಇದೆಲ್ಲಾ ಬೇಕಾ. ಈಗಾಗಲೇ ವಸತಿ ವ್ಯವಸ್ಥೆ ಇರುವಾಗ ಮೋಜು ಮಸ್ತಿಗಾಗಿ ಕ್ಲಬ್ ಬೇಕಾ? ಸದನಾ ನಿಯಮಾವಳಿ ತಿಪ್ಪುಪಡಿ ಮಸೂದೆಗೆ ಒಪ್ಪದವರಿಗೆ, ಕ್ಲಬ್ ಬೇಕಾ ಎಂಬ ಪ್ರಶ್ನೆಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

ಶಾಸಕರ ಕ್ಲಬ್​ ನಿರ್ಮಾಣಕ್ಕೆ ಬಿಗಿಪಟ್ಟು: ಸಿಎಂಗೆ ಸಭಾಪತಿಗಳಿಂದ ಲೆಟರ್

ಸಿಐಡಿ ಪ್ರಧಾನ ಕಚೇರಿ ಇರುವ ‘ಕಾರ್ಲಟನ್ ಹೌಸ್’ ಕಟ್ಟಡ ಮತ್ತು ಸುತ್ತಮುತ್ತಲಿನ ಜಾಗದಲ್ಲಿಯೇ ಶಾಸಕರ ಕ್ಲಬ್ ನಿರ್ಮಾಣ ಸಂಬಂಧ ಕ್ಯಾಬಿನೆಟ್'ನಲ್ಲಿ ಮಂಡಿಸಿ, ಅನುಮೋದನೆ ಕೊಡಿಸಬೇಕು ಎಂದು ವಿಧಾನಮಂಡಲ ಸಂಸ್ಥೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದೆ. ವಿಧಾನಸಭೆ ಸ್ಪೀಕರ್ ಕೋಳಿವಾಡ್ ಮತ್ತು ಪರಿಷತ್‌'ನ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಸಿಎಂ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ.

ಸಂಸ್ಥೆ 2009ರಲ್ಲಿ ಆರಂಭಗೊಂಡಿದ್ದರೂ ಇದುವರೆಗೆ ಕಟ್ಟಡಕ್ಕೆ ಸ್ಥಳ ಇಲ್ಲ. ಹೀಗಾಗಿ ಕ್ಲಬ್'ನ ಸದಸ್ಯರು, ಶಾಸಕರ ಹಿತಾದೃಷ್ಟಿಯಿಂದ ಕಾರ್ಲಟನ್ ಹೌಸ್ ಕಟ್ಟಡ ಮತ್ತು ಸುತ್ತಮುತ್ತಲಿನಯಲ್ಲಿಯೇ ಜಾಗ ನೀಡಲು ಸಂಬಂಧಪಟ್ಟವರಿಗೆ ಸೂಚಿಸಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಕುಮಾರಕೃಪಾ ಅತಿಥಿಗೃಹದಲ್ಲಿ ಜಾಗ ನೀಡಲು ನಿರಾಕರಣೆ: 2 ಎಕರೆಯಲ್ಲಿದೆ 40 ವಸತಿ ಗೃಹಗಳು ಕಾರ್ಲಟನ್ ಹೌಸ್ ಹಾಗೂ ಅದರ ಸುತ್ತಮುತ್ತ ಜಾಗ ನೀಡಲು ನಿರಾಕರಿಸಿದ್ದ ಸಚಿವಾಲಯ ಕುಮಾರಕೃಪಾ ಅತಿಥಿ ಗೃಹದಲ್ಲಿನ ವಸತಿ ಗೃಹಗಳನ್ನು ತೆರವುಗೊಳಿಸಿ ಜಾಗ ನೀಡಲು ನಿರ್ಧರಿಸಿತ್ತು. ಆದ್ರೀಗ ಶಾಸಕರ ಕ್ಲಬ್‌ಗೆ ಪ್ರಸ್ತಾಪಿಸಿರುವ 2 ಎಕರೆಯಲ್ಲಿ 40 ವಸತಿ ಗೃಹಗಳು, ಲೋಕೋಪಯೋಗಿ ಇಲಾಖೆಗೆ ಸೇಕಿದ 5 ಗೋಡೌನ್‌ಗಳಿವೆ. ಹೀಗಾಗಿ ಕುಮಾರಕೃಪಾ ಅತಿಥಿ ಗೃಹದ ವಸತಿಗೃಹಗಳ ಮಾಲೀಕತ್ವನ್ನು ಕರ್ನಾಟಕ ವಿಧಾನಮಂಡಲ ಸಂಸ್ಥೆಗೆ ಹಸ್ತಾಂತರಿಸುವುದು ಸೂಕ್ತವಲ್ಲ ಎಂದು ರಾಜ್ಯ ಶಿಷ್ಟಾಚಾರ ಇಲಾಖೆ ಅಭಿಪ್ರಾಯ ನೀಡಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ಭೀಕರ ಬರಗಾಲಕ್ಕೆ ಸಿಲುಕಿ ಅನ್ನದಾತ ಸಿಲುಕಿ ಒದ್ದಾಡುತ್ತಿದ್ದಾರೆ, ಸಮಸ್ಯೆ ಬಗೆಹರಿಸಬೇಕಾದ ಜನಪ್ರತಿನಿಧಿಗಲು, ಮೋಜು ಮಸ್ತಿಗಾಗಿ ಕ್ಲಬ್ ನಿರ್ಮಾಣ ಬೇಕೆ ಬೇಕು ಅಂತಾ ಬಿಗಿಪಟ್ಟು ಹಿಡಿದಿರೋದು ವಿಪರ್ಯಾಸವೇ ಸರಿ.