Asianet Suvarna News Asianet Suvarna News

ಲಂಡನ್'ನಲ್ಲಿ ಸುಧಾ ಮೂರ್ತಿಗೆ ‘ಕ್ಯಾಟಲ್ ಕ್ಲಾಸ್’ ಎಂದು ಅವಮಾನ!

ಲಂಡನ್‌'ನ ಹೀಥ್ರೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ, ಲೇಖಕಿ ಸುಧಾ ಮೂರ್ತಿ ಅವರಿಗೆ ಹೈಹೀಲ್ಡ್ ಚಪ್ಪಲಿ ಧರಿಸಿ, ಐಷಾರಾಮಿ ವ್ಯಾನಿಟಿ ಬ್ಯಾಗ್ ಹಿಡಿದಿದ್ದ ಗಾಗಲ್ ಧಾರಿಣಿಯೊಬ್ಬಳು ಅವಮಾನ ಮಾಡಿದ್ದಳಂತೆ. ಬಹುಶಃ ಸುಧಾ ಅವರು ಸಾದಾ ಚೂಡಿದಾರ್ ಧರಿಸಿದ್ದು ಇದಕ್ಕೆ ಕಾರಣವಾಗಿತ್ತು.

when sudha murthy was humiliated by saying cattle class to her

ನವದೆಹಲಿ: ‘ಹೋಗಿ.. ಈ ಸರದಿ ಸಾಲು ನಿಮ್ಮದಲ್ಲ.. ಎಕಾನಮಿ ಕ್ಲಾಸ್ ಕ್ಯೂನಲ್ಲಿ ನಿಲ್ಲಿ. ಇದು ಬಿಸಿನೆಸ್ ಕ್ಲಾಸ್ ಪ್ರಯಾಣಿಕರಿಗೆ ಮಾತ್ರ’.

- ಹೀಗಂತ ಲಂಡನ್‌'ನ ಹೀಥ್ರೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ, ಲೇಖಕಿ ಸುಧಾ ಮೂರ್ತಿ ಅವರಿಗೆ ಹೈಹೀಲ್ಡ್ ಚಪ್ಪಲಿ ಧರಿಸಿ, ಐಷಾರಾಮಿ ವ್ಯಾನಿಟಿ ಬ್ಯಾಗ್ ಹಿಡಿದಿದ್ದ ಗಾಗಲ್ ಧಾರಿಣಿಯೊಬ್ಬಳು ಅವಮಾನ ಮಾಡಿದ್ದಳಂತೆ. ಬಹುಶಃ ಸುಧಾ ಅವರು ಸಾದಾ ಚೂಡಿದಾರ್ ಧರಿಸಿದ್ದು ಇದಕ್ಕೆ ಕಾರಣವಾಗಿತ್ತು.

ತಮ್ಮ ಜೀವನದಲ್ಲಿ ನಡೆದ ಹಲವು ಮರೆಯಲಾರದ ಘಟನೆಗಳನ್ನು ಹೆಕ್ಕಿ, ಸುಧಾಮೂರ್ತಿ ಅವರು ‘ತ್ರೀ ಥೌಸಂಡ್ ಸ್ಟಿಚಸ್’ ಪುಸ್ತಕವನ್ನು ಬರೆದಿದ್ದು, ಅದರಲ್ಲಿ ಈ ವಿಷಯವಿದೆ.

‘ನನಗೆ ಹೀಗೆ ಅವಮಾನ ಮಾಡಿದಾಗ, ನಾನು ನನ್ನ ಟಿಕೆಟ್ ತೋರಿಸಿ ಆ ಮಹಿಳೆಗೆ ಉತ್ತರಿಸಬಹುದಾಗಿತ್ತು. ಆದರೆ ಬೇಡ ಎಂದು ಸುಮ್ಮನಿದ್ದೆ. ಆದರೆ ಕಾಕತಾಳೀಯವೆಂಬಂತೆ ಮರುದಿನ ಅದೇ ಮಹಿಳೆ ತನ್ನ ಹೈಹೀಲ್ಡ್ ಚಪ್ಪಲಿ, ಗಾಗಲ್, ಐಷಾರಾಮಿ ವ್ಯಾನಿಟಿ ಬ್ಯಾಗ್ ತೊರೆದು ಸಾದಾ ಖಾದಿ ಸೀರೆ ಉಟ್ಟು ನಮ್ಮ ಇನ್ಫೋಸಿಸ್ ಪ್ರತಿಷ್ಠಾನದ ಸಭೆಗೆ ಆಗಮಿಸಿದರು. ಆಗ ನಾನೂ ಆ ಸಭೆಯಲ್ಲಿದ್ದೆ. ನನ್ನನ್ನು ನೋಡಿ ಅವರು ಅವಾಕ್ಕಾದರು.’

ಹೀಗೆ ಕುತೂಹಲಕಾರಿ ಸಂಗತಿಯನ್ನು ಸುಧಾ ಅವರು ಬರೆದಿದ್ದಾರೆ. ‘ಯಾವತ್ತೂ ಮನುಷ್ಯನನ್ನು ಉಡುಪು ಹಾಗು ದುಡ್ಡು ನೋಡಿ ಅಳೆಯಬಾರದು’ ಎಂದು ಅವರು ಈ ಮೂಲಕ ಕಿವಿಮಾತು ಹೇಳಿದ್ದಾರೆ.

epaperkannadaprabha.com

Follow Us:
Download App:
  • android
  • ios