ಪ್ರಧಾನಿ ನರೇಂದ್ರ ಮೋದಿ ಭದ್ರತಾ ಪ್ರೋಟೋಕಾಲ್ ಮುರಿದು ಆಗಾಗ ಅಚ್ಚರಿ ನೀಡುತ್ತಿರುತ್ತಾರೆ. ಇಂದಿನಿಂದ 2 ದಿನಗಳ ಕಾಲ ಗುಜರಾತ್ ಗೆ ಭೇಟಿ ಕೈಗೊಂಡಿದ್ದಾರೆ. ಸೂರತ್ ನಲ್ಲಿರುವ ಕಿರಣ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭಕ್ಕೆ ತೆರಳುತ್ತಿದ್ದಾಗ ಮಾರ್ಗಮಧ್ಯ ಕಾರನ್ನು ನಿಲ್ಲಿಸಿ 4 ವರ್ಷದ ಕಂದಮ್ಮನನ್ನು ಎತ್ತಿಕೊಂಡು ಆಲಂಗಿಸಿದ್ದಾರೆ.
ನವದೆಹಲಿ (ಏ.17): ಪ್ರಧಾನಿ ನರೇಂದ್ರ ಮೋದಿ ಭದ್ರತಾ ಪ್ರೋಟೋಕಾಲ್ ಮುರಿದು ಆಗಾಗ ಅಚ್ಚರಿ ನೀಡುತ್ತಿರುತ್ತಾರೆ. ಇಂದಿನಿಂದ 2 ದಿನಗಳ ಕಾಲ ಗುಜರಾತ್ ಗೆ ಭೇಟಿ ಕೈಗೊಂಡಿದ್ದಾರೆ. ಸೂರತ್ ನಲ್ಲಿರುವ ಕಿರಣ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭಕ್ಕೆ ತೆರಳುತ್ತಿದ್ದಾಗ ಮಾರ್ಗಮಧ್ಯ ಕಾರನ್ನು ನಿಲ್ಲಿಸಿ 4 ವರ್ಷದ ಕಂದಮ್ಮನನ್ನು ಎತ್ತಿಕೊಂಡು ಆಲಂಗಿಸಿದ್ದಾರೆ.
ಮೋದಿಯವರು ಸೂರತ್ ಗೆ ತೆರಳುತ್ತಿದ್ದಾಗ ನ್ಯಾನ್ಸಿ ಗೋಂಡಾಲಿಯ ಎನ್ನುವ ನಾಲ್ಕು ವರ್ಷದ ಬಾಲಕಿ ಅವರ ಕವಲ್ಕೇಡೆ ಕಾರಿನ ಕಡೆ ಓಡಿ ಬಂದಿದ್ದಾಳೆ. ಎಸ್ಪಿಜಿ ಕಮಾಂಡೋಗಳು ಈಕೆಯನ್ನು ತಡೆದಾಗ ಮೋದಿಯವರು ತಮ್ಮ ಬಳಿ ಕರೆದುಕೊಂಡು ಬರಲು ಕಮಾಂಡೋಗಳಿಗೆ ಸೂಚಿಸಿದ್ದಾರೆ. ಕಾರಿನ ಬಾಗಿಲನ್ನು ತೆಗೆದು ಮಗುವನ್ನು ಕೂರಿಸಿಕೊಂಡು ಕೆನ್ನೆ ಸವರುತ್ತಾ, ನಿನ್ನ ಕೈಯಲ್ಲಿ ಕಟ್ಟಿಕೊಂಡಿರುದೇನು? ಎಂದು ಪ್ರೀತಿಯಿಂದ ಕೇಳಿದಾಗ ಮಗು ತೊದಲುತ್ತಾ, ವಾಚ್ ಎಂದು ಹೇಳಿದೆ. ವಾಚನ್ನು ತೋರಿಸುತ್ತಾ ಟೈಮ್ ಎಷ್ಟಾಗಿದೆ ಹೇಳು ಎಂದು ಕೇಳಿದ್ದಾರೆ. ಇದನ್ನು ನೋಡುತ್ತಾ ಸುತ್ತ ನೆರೆದಿದ್ದ ಜನರು ಹೊರಗಡೆ ಮೋದಿ, ಮೋದಿ ಎಂದು ಘೋಷಣೆ ಕೂಗಿದ್ದಾರೆ.
