ರಾಹುಲ್ ತಾವೇ 10 ರೂ ತೆತ್ತು ಕ್ಯಾಂಟೀನ್'ನಲ್ಲಿ ಊಟ ಕೂಡ ಮಾಡಿದ್ದಾರೆ. ಆದರೆ, ಹಣ ಕೊಡಲು ತಮ್ಮ ಜೇಬು ತಡಕಿದಾಗ ಅವರಲ್ಲಿ 10 ರೂ. ಇರಲಿಲ್ಲ. ಕೆಜೆ ಜಾರ್ಜ್ ಅವರು ಹಣ ಕೊಡಲು ಮುಂದಾದಾಗ ನಿರಾಕರಿಸಿದ ರಾಹುಲ್ ಗಾಂಧಿಯವರು ಅಲ್ಲೇ ಇದ್ದ ಡಾ. ಜಿ.ಪರಮೇಶ್ವರ್ ಬಳಿ 10 ರೂ ಪಡೆದರು. ಬಳಿಕ, ಆ ಹಣವನ್ನು ಕ್ಯಾಂಟೀನ್'ನವರಿಗೆ ಕೊಟ್ಟು ಊಟ ಪಡೆದರು.
ಬೆಂಗಳೂರು(ಆ. 16): ಉದ್ಯಾನನಗರಿಯಲ್ಲಿ ಬಡವರಿಗೆಂದು 101 ಕ್ಯಾಂಟೀನ್'ಗಳು ಇಂದಿನಿಂದ ಶುರುವಾಗಿವೆ. ಎಲ್ಲಾ ವಾರ್ಡ್'ಗಳಲ್ಲೂ ಕ್ಯಾಂಟೀನ್'ಗಳನ್ನು ಆರಂಭಿಸಲಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರೇ ಇಂದಿರಾ ಕ್ಯಾಂಟೀನ್'ನ ಉದ್ಘಾಟನೆ ಮಾಡಿದ್ದಾರೆ. ರಾಹುಲ್ ತಾವೇ 10 ರೂ ತೆತ್ತು ಕ್ಯಾಂಟೀನ್'ನಲ್ಲಿ ಊಟ ಕೂಡ ಮಾಡಿದ್ದಾರೆ. ಆದರೆ, ಹಣ ಕೊಡಲು ತಮ್ಮ ಜೇಬು ತಡಕಿದಾಗ ಅವರಲ್ಲಿ 10 ರೂ. ಇರಲಿಲ್ಲ. ಕೆಜೆ ಜಾರ್ಜ್ ಅವರು ಹಣ ಕೊಡಲು ಮುಂದಾದಾಗ ನಿರಾಕರಿಸಿದ ರಾಹುಲ್ ಗಾಂಧಿಯವರು ಅಲ್ಲೇ ಇದ್ದ ಡಾ. ಜಿ.ಪರಮೇಶ್ವರ್ ಬಳಿ 10 ರೂ ಪಡೆದರು. ಬಳಿಕ, ಆ ಹಣವನ್ನು ಕ್ಯಾಂಟೀನ್'ನವರಿಗೆ ಕೊಟ್ಟು ಊಟ ಪಡೆದರು.
ಬೆಂಗಳೂರಿನಲ್ಲಿ 101 ಕಡೆ ಇಂದಿರಾ ಕ್ಯಾಂಟೀನ್'ಗಳನ್ನು ಇಂದಿನಿಂದ ನಡೆಸಲಾಗುತ್ತಿದೆ. ಕೇವಲ 5 ಮತ್ತು 10 ರೂಪಾಯಿಗೆ ತಿಂಡಿ ಮತ್ತು ಊಟ ಇಲ್ಲಿ ಸಿಗುತ್ತದೆ. ನಗರದ ಪ್ರತೀ ವಾರ್ಡ್'ಗಳಲ್ಲೂ ಕ್ಯಾಂಟೀನ್ ಆರಂಭಿಸಲಾಗಿದೆ. ಯಾರೂ ಕೂಡ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಸರಕಾರ ಈ ಯೋಜನೆ ರೂಪಿಸಿದೆ.
