ಚಿದು ಗೃಹ ಸಚಿವರಾಗಿದ್ದಾಗ ಅಮಿತ್ ಬಂಧನ: ಈಗ ಶಾ ಹೋಂ ಮಿನಿಸ್ಟರ್!

ಚಿದಂಬರಂ ಗೃಹ ಸಚಿವರಾಗಿದ್ದಾಗ ಅಮಿತ್‌ ಶಾ ಬಂಧನವಾಗಿತ್ತು, ಈಗ ಶಾ ಗೃಹ ಸಚಿವ| ಎಲ್ರೂ ಕಾಲೆಳಿತದೇ ಕಾಲ!|  ಚಿದು ಎತ್ತಂಗಡಿ ಮಾಡಿಸಿದ್ದ ಅಧಿಕಾರಿಯೇ ಈಗ ಜಾರಿ ನಿರ್ದೇಶನಾಲಯಕ್ಕೆ ಬಾಸ್‌| ಎಲ್ಲವೂ ಕಾಕತಾಳೀಯ!

When Chidambaram was home minister and CBI went after Amit Shah

ನವದೆಹಲಿ[ಆ.22]: ಐಎನ್‌ಎಕ್ಸ್‌ ಮಾಧ್ಯಮ ಸಂಸ್ಥೆ ಅವ್ಯವಹಾರ ಸಂಬಂಧ ಬುಧವಾರ ರಾತ್ರಿ ಬಂಧನಕ್ಕೆ ಒಳಗಾಗಿರುವ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರಿಗೆ 2 ಹಳೆಯ ಮುಖಗಳು ಕಾಡುವಂತಾಗಿದೆ. ಒಂದು, ಹಾಲಿ ಗೃಹ ಸಚಿವರಾಗಿರುವ ಅಮಿತ್‌ ಶಾ ಅವರದ್ದಾಗಿದ್ದರೆ; ಮತ್ತೊಂದು, ಒಂದು ಕಾಲದಲ್ಲಿ ಚಿದು ಅಧೀನದಲ್ಲೇ ಕೆಲಸ ಮಾಡಿ ಮನಸ್ತಾಪ ತೋರಿದ ಕಾರಣಕ್ಕೆ ಎತ್ತಂಗಡಿಯಾಗಿದ್ದ ಹಾಲಿ ಜಾರಿ ನಿರ್ದೇಶನಾಲಯದ ಮುಖ್ಯಸ್ಥ ಎಸ್‌.ಕೆ. ಮಿಶ್ರಾ.

"

ಯುಪಿಎ ಸರ್ಕಾರದಲ್ಲಿ ಚಿದಂಬರಂ ಪ್ರಭಾವಿ ಮಂತ್ರಿಯಾಗಿದ್ದರು. ಸೊಹ್ರಾಬುದ್ದೀನ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಅಂದಿನ ಗುಜರಾತ್‌ ಗೃಹ ಸಚಿವ ಅಮಿತ್‌ ಶಾ ಬಂಧನವಾದಾಗ ಚಿದು ಗೃಹ ಮಂತ್ರಿಯಾಗಿದ್ದರು. ಕಾಕತಾಳೀಯವೆಂಬಂತೆ, ಚಿದು ಬಂಧನವಾದಾಗ ಅಮಿತ್‌ ಶಾ ಕೇಂದ್ರ ಗೃಹ ಸಚಿವರಾಗಿದ್ದಾರೆ!

ಮತ್ತೊಂದೆಡೆ, ಚಿದಂಬರಂ ಅವರು ಗೃಹ ಸಚಿವರಾಗಿದ್ದಾಗ ಎಸ್‌.ಕೆ ಮಿಶ್ರಾ ಎಂಬ ಅಧಿಕಾರಿ ಗೃಹ ಇಲಾಖೆಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಚಿದು ಜತೆಗಿನ ವೈಮನಸ್ಯದಿಂದ ಮಿಶ್ರಾ ಅವರನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಅದೇ ಮಿಶ್ರಾ ಈಗ ಐಎನ್‌ಎಕ್ಸ್‌ ಮಾಧ್ಯಮ ಸಂಸ್ಥೆ ಅವ್ಯವಹಾರ ಕುರಿತು ತನಿಖೆ ನಡೆಸುತ್ತಿರುವ ಹಾಗೂ ಚಿದಂಬರಂ ಅವರನ್ನು ಬಂಧಿಸಿದ ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿದ್ದಾರೆ.

ಮಾಜಿ ಗೃಹ ಸಚಿವ ಪಿ. ಚಿದಂಬರಂ ಬಂಧನ!: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೋದಿ ಅವಧಿಯಲ್ಲಿ ಬಂಧನ ಆದ ಮೊದಲ ಹಿರಿಯ ಕಾಂಗ್ರೆಸ್ಸಿಗ

2​014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಂಧನವಾದ ಮೊದಲ ಹಿರಿಯ ಕಾಂಗ್ರೆಸ್ಸಿಗ ಚಿದಂಬರಂ ಅವರಾಗಿದ್ದಾರೆ.

2004ರಿಂದ 2014ರವರೆಗೆ ಅಧಿಕಾರ ನಡೆಸಿದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ 2ಜಿ, ಕಲ್ಲಿದ್ದಲು ಹಗರಣ ನಡೆಸಿದೆ ಎಂದು ಬಿಜೆಪಿ ಆರೋಪಿಸಿ ಅಧಿಕಾರಕ್ಕೇರಿತ್ತು. ಆದರೆ ಕಾಂಗ್ರೆಸ್ಸಿನ ಯಾವೊಬ್ಬ ನಾಯಕರನ್ನೂ ಬಂಧಿಸಲು ಆಗಿರಲಿಲ್ಲ. ಆದರೆ ಚಿದಂಬರಂ ಅವರು ಇದೀಗ ಯುಪಿಎ ಕಾಲದ ಹಗರಣವೊಂದರ ಸಂಬಂಧ ಬಂಧನಕ್ಕೆ ಒಳಗಾಗಿದ್ದಾರೆ. ತನ್ಮೂಲಕ ಮೋದಿ ಅವಧಿಯಲ್ಲಿ ಬಂಧಿತರಾದ ಮೊದಲ ಹಿರಿಯ ಕಾಂಗ್ರೆಸ್ಸಿಗರಾಗಿದ್ದಾರೆ.

2ಜಿ ಹಗರಣದಲ್ಲಿ ಆರೋಪಿಗಳಾಗಿ ಡಿಎಂಕೆಯ ಎ. ರಾಜಾ ಹಾಗೂ ಕನಿಮೋಳಿ ಅವರು ಜೈಲು ಸೇರಿದ್ದರು. ಯುಪಿಎ ಅವಧಿಯಲ್ಲೇ ಅವರ ಬಂಧನವಾಗಿತ್ತು. 2017ರಲ್ಲಿ ಅವರು ದೆಹಲಿ ಹೈಕೋರ್ಟ್‌ನಿಂದ ಖುಲಾಸೆಯಾಗಿದ್ದರು.

Latest Videos
Follow Us:
Download App:
  • android
  • ios