ವಾಟ್ಸ್‌ಆ್ಯಪ್ ಗ್ರೂಪ್‌ನ ಅಡ್ಮಿನ್‌ಗಳಿಗಿದು ಎಚ್ಚರಿಕೆಯ ಸುದ್ದಿ! ವಾಟ್ಸ್‌ಆ್ಯಪ್ ಮೆಸೇಜ್‌ವೊಂದರ ಫಲವಾಗಿ ಇತ್ತಂಡಗಳ ನಡುವೆ ಜಗಳ ಸಂಭವಿಸಿ ಕಾರ್ಕಳದಲ್ಲಿ ಗ್ರೂಪ್ ಅಡ್ಮಿನ್ ಮೇಲೆ ಹಲ್ಲೆ ನಡೆದಿದೆ.
ಕಾರ್ಕಳ: ವಾಟ್ಸ್ಆ್ಯಪ್ ಗ್ರೂಪ್ನ ಅಡ್ಮಿನ್ಗಳಿಗಿದು ಎಚ್ಚರಿಕೆಯ ಸುದ್ದಿ! ವಾಟ್ಸ್ಆ್ಯಪ್ ಮೆಸೇಜ್ವೊಂದರ ಫಲವಾಗಿ ಇತ್ತಂಡಗಳ ನಡುವೆ ಜಗಳ ಸಂಭವಿಸಿ ಕಾರ್ಕಳದಲ್ಲಿ ಗ್ರೂಪ್ ಅಡ್ಮಿನ್ ಮೇಲೆ ಹಲ್ಲೆ ನಡೆದಿದೆ.
ಅಜೆಕಾರು ನಿವಾಸಿ ಅಮೃತೇಶ್ ಶೆಟ್ಟಿ ಹಲ್ಲೆಗೆ ಒಳಗಾದವರು. ಅಮೃತೇಶ್ ಶೆಟ್ಟಿ ಅಡ್ಮಿನ್ ಆಗಿದ್ದ ಗ್ರೂಪ್ನಲ್ಲಿ ಕೃಷ್ಣ ಶೆಟ್ಟಿ ಮತ್ತು ವಿಖ್ಯಾತ್ ಶೆಟ್ಟಿ ಎಂಬುವರು ಸದಸ್ಯರಾಗಿದ್ದಾರೆ.
ವೈಯಕ್ತಿಕ ವಿಚಾರಗಳ ಸಂದೇಶ ರವಾನೆಯಾಗುತ್ತಿದೆ ಎನ್ನುವ ಆರೋಪದಡಿ ಅವರ ನಡುವೆ ಜಗಳವಾಗಿದೆ. ಬಳಿಕ ಈ ವಿಚಾರವನ್ನು ಇತ್ಯರ್ಥಪಡಿಸಲು ಅಮೃತೇಶ್ ಶೆಟ್ಟಿ ಕಾರ್ಕಳಕ್ಕೆ ಆಗಮಿಸಿದ್ದಾರೆ.
ಆಗ ಅವರ ಕಾರು ಅಡ್ಡಗಟ್ಟಿ ವಿಜಯ ಸಫಳಿಗ, ಮಹೇಶ್ ಶೆಣೈ ಮತ್ತು ದೀಪು ಎಂಬುವರು ಹಲ್ಲೆ ನಡೆಸಿರುವುದಾಗಿ ಕೇಸು ದಾಖಲಾಗಿದೆ.
