ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಗುಜರಾತಿನಲ್ಲಿ ಐಸಿಸ್ ಉಗ್ರಗಾಮಿ ಸಂಘಟನೆ ಜತೆ ನಂಟು ಹೊಂದಿರುವ ಶಂಕೆಯ ಮೇರೆಗೆ ಇಬ್ಬರು ಯುವಕರನ್ನು ‘ಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಬಂ‘ನ ಮಾಡಿರುವುದು ಈಗ ಭರ್ಜರಿ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ.

ಗಾಂಧಿನಗರ/ನವದೆಹಲಿ(ಅ.29): ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಗುಜರಾತಿನಲ್ಲಿ ಐಸಿಸ್ ಉಗ್ರಗಾಮಿ ಸಂಘಟನೆ ಜತೆ ನಂಟು ಹೊಂದಿರುವ ಶಂಕೆಯ ಮೇರೆಗೆ ಇಬ್ಬರು ಯುವಕರನ್ನು ‘ಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಬಂ‘ನ ಮಾಡಿರುವುದು ಈಗ ಭರ್ಜರಿ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ.

ಬಂಧಿತರ ಪೈಕಿ ಒಬ್ಬಾತ ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಅಹಮದ್ ಪಟೇಲ್ ಅವರು ‘ನಿರ್ವಹಿಸುತ್ತಿರುವ’ ಆಸ್ಪತ್ರೆಯಲ್ಲಿ ನೌಕರನಾಗಿದ್ದ. ಬಂಧನಕ್ಕೆ ಒಂದು ದಿನ ಮೊದಲಷ್ಟೇ ಹುದ್ದೆಗೆ ರಾಜೀನಾಮೆ ನೀಡಿದ್ದ ಎಂದು ಆಪಾದಿಸಿರುವ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಆತನನ್ನು ನೇಮಕಾತಿ ಮಾಡಿಕೊಂಡ ಬಗ್ಗೆ ಅಹಮದ್ ಪಟೇಲ್ ವಿವರಣೆ ನೀಡಬೇಕು ಹಾಗೂ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಉಬೇದ್ ಮಿರ್ಜಾ ಎಂಬ ವಕೀಲ ಹಾಗೂ ಕಾಸಿಂ ಸ್ಟೀಮರ್‌'ವಾಲಾ ಎಂಬ ಇಬ್ಬರನ್ನು ಎಟಿಎಸ್ ಬಂ‘ನ ಮಾಡಿದೆ. ಈ ಪೈಕಿ ಕಾಸಿಂ ಕೆಲಸ ಮಾಡುತ್ತಿದ್ದ ‘ರೂಚ್‌ನ ಸರ್ದಾರ್ ಪಟೇಲ್ ಆಸ್ಪತ್ರೆಗೆ ಈ ಹಿಂದೆ ಅಹಮದ್ ಪಟೇಲ್ ಟ್ರಸ್ಟಿಯಾಗಿದ್ದರು ಎಂದು ರೂಪಾನಿ ಹೇಳಿದ್ದಾರೆ. ಇನ್ನು ಪ್ರಕರಣ ಕುರಿತು ಪಕ್ಷದ ಅ‘ಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಜನರಿಗೆ ಉತ್ತರ ನೀಡಬೇಕು ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಒತ್ತಾಯಿಸಿದ್ದಾರೆ.

1979ರಿಂದಲೂ ಪಟೇಲ್‌ಗೆ ಆಸ್ಪತ್ರೆ ಜೊತೆ ನಂಟಿದೆ. ಉಗ್ರನ ನಂಟಿರುವ ಆಸ್ಪತ್ರೆ ಜೊತೆಗೆ ಅಹಮದ್ ಪಟೇಲ್ ನಂಟಿರುವುದು ಆಕಸ್ಮಿಕವಾಗಿರುವ ಯಾವುದೇ ಸಾಧ್ಯತೆ ಇಲ್ಲ ಎಂದಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ಭರೂಚ್‌'ನ ಸರ್ದಾರ್ ವಲ್ಲಭಭಾಯ್ ಪಟೇಲ್ ಆಸ್ಪತ್ರೆ, ತಮ್ಮ ಆಸ್ಪತ್ರೆಯಲ್ಲಿ ಕಾಸೀಂ ಲ್ಯಾಬ್ ಟೆಕ್ನಿಶಿಯನ್ ಆಗಿದ್ದ. ಅ.೪ರಂದು ಆತ ರಾಜೀನಾಮೆ ನೀಡಿದ್ದ. 24ರಂದು ಸೇವೆಯಿಂದ ವಿಮುಕ್ತಿಗೊಳಿಸಲಾಗಿದೆ. ಆತನ ವೈಯಕ್ತಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದೆ. ರೂಪಾನಿ ಆಗ್ರಹಕ್ಕೆ ಪ್ರತಿಕ್ರಿಯಿಸಿರುವ ಅಹಮದ್ ಪಟೇಲ್, ಚುನಾವಣೆಗಳನ್ನು ಗಮನದಲ್ಲಿಟ್ಟು ಕೊಂಡು ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಬಂಧಿತರ ವಿರುದ್ಧ ತನಿಖಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರೂಪಾನಿ ಆರೋಪ ಸುಳ್ಳು ಎಂದಿದ್ದಾರೆ.

ಇನ್ನು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಪ್ರತಿಕ್ರಿಯೆ ನೀಡಿ, 2015ರಲ್ಲೇ ಪಟೇಲ್ ಆಸ್ಪತ್ರೆಯ ಟ್ರಸ್ಟಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹೀಗಿದ್ದೂ ಅವರ ರಾಜೀನಾಮೆಗೆ ಬಿಜೆಪಿ ಒತ್ತಾಯಿಸುತ್ತಿರುವುದು ಅತಿರೇಕದ ವರ್ತನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.