ಬೆಂಗಳೂರು(ಸೆ.29): ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ಅವರೊಂದಿಗೆ ಇಂದು ನಡೆದ ಸಂಧಾನ ವಿಫಲವಾಗಿದೆ. ತಮಿಳುನಾಡಿಗೆ ನೀರು ಹರಿಸಲ್ಲ ಅಂತಾ ರಾಜ್ಯ ಸರ್ಕಾರ ಈಗಾಗಲೇ ನಿರ್ಧಾರ ಮಾಡಿದೆ. ಸೆಪ್ಪಂಬರ್ 20ರಂದು ನೀಡಿದ್ದ ಆದೇಶ ಮತ್ತು ಸೆಪ್ಬಂಬರ್ 27ರಂದು ನೀಡಿದ್ದ ಆದೇಶವನ್ನು ಕರ್ನಾಟಕ ಪಾಲಿಸಿಲ್ಲ.ಆದರೆ ಸದ್ಯದ ಮಟ್ಟಿಗೆ ರಾಜ್ಯ ಸರ್ಕಾರ ಮುಂದೇನು ಮಾಡಬಹುದು. ಏನಾಗಬಹುದು. ಕೆಲವು ಸಾಧ್ಯತೆಗಳು ಇಲ್ಲಿವೆ

  • ಸುಪ್ರೀಂಕೋರ್ಟ್ ಆದೇಶದಂತೆ ನೀರು ಬಿಡಬಹುದು
  • ತಮಿಳುನಾಡಿಗೆ ನೀರು ಹರಿಸದೆ ವಿಧಾನಸಭೆ ನಿರ್ಣಯಕ್ಕೆ ಬದ್ಧವಾಗಬಹುದು
  • ಸುಪ್ರೀಂಕೋರ್ಟ್​ಗೆ ಮತ್ತೊಂದು ಮೇಲ್ಮನವಿ ಸಲ್ಲಿಸಬಹುದು
  • ಎರಡೂ ರಾಜ್ಯಗಳಿಗೆ ಅಧ್ಯಯನ ತಂಡ ಕಳುಹಿಸಲು ಮನವಿ ಮಾಡಬಹುದು
  • ನ್ಯಾಯಾಂಗ ನಿಂದನೆಗೆ ರಾಜ್ಯ ಸರ್ಕಾರ ಒಳಗಾಗಬಹುದು
  • ವಿವಾದ ಬಗೆಹರಿಯದೇ ಗೊಂದಲಕ್ಕೆ ಒಳಗಾಗಬಹುದು