Asianet Suvarna News Asianet Suvarna News

ನಮ್ಮ ಪ್ರಧಾನಿಯನ್ನು ಹತ್ಯೆ ಮಾಡುವುದು ಸಾಧ್ಯವೇ ಇಲ್ಲ:ಮೋದಿ ಭದ್ರತೆ ಹೇಗಿದೆ ಗೊತ್ತಾ ?

  • ಭಾರತ ದೇಶದ ಪ್ರಧಾನಿಯೊಬ್ಬರನ್ನು ಹತ್ಯೆ ಮಾಡುವುದು ಸಾಧ್ಯವೇ ಇಲ್ಲ
  • 4 ಹಂತದ ಭದ್ರತಾಪಡೆಯನ್ನು ಭೇದಿಸುವುದು ಖಂಡಿತಾ ಸಾಧ್ಯವಿಲ್ಲ
What type of security Arrangements are given to the PM of India

ಮೋದಿ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಸುದ್ದಿ ಬಂದಿದ್ದರೂ ನಮ್ಮ ದೇಶದಲ್ಲಿ ಈಗ ಪ್ರಧಾನಿಯೊಬ್ಬರನ್ನು ಹತ್ಯೆ ಮಾಡುವುದು ಸಾಧ್ಯವೇ ಇಲ್ಲ ಎನ್ನುತ್ತಾರೆ ಭದ್ರತಾ ವಿಶ್ಲೇಷಕರು. ಏಕೆಂದರೆ, ಪ್ರಧಾನಿಗಿರುವ ಭದ್ರತೆಯೇ ಅಷ್ಟು ಬಿಗಿಯಾಗಿರುತ್ತದೆ. ಮುಖ್ಯವಾಗಿ ಪ್ರಧಾನಿಗೆ 4 ಹಂತದ ಭದ್ರತೆಯಿರುತ್ತದೆ. 

  • ಪ್ರಧಾನಿ ಮೋದಿಯವರನ್ನು ಸದಾ ಕಾಲ  ಉನ್ನತ ಮಟ್ಟದ ತರಬೇತಿ ಪಡೆದಿರುವ ವಿಶೇಷ ರಕ್ಷಣಾ ದಳ ಸುತ್ತುವರೆದಿರುತ್ತದೆ. ಸಾರ್ವಜನಿಕ ಸಮಾರಂಭಗಳಲ್ಲಿ ಪರಿಶೀಲಿಸದೇ ಕುಟುಂಬದ ಸದಸ್ಯರನ್ನೂ ಹತ್ತಿರಕ್ಕೆ ಬಿಡುವುದಿಲ್ಲ.
  • 2ನೇ ಹಂತದಲ್ಲಿಯೂ ಉನ್ನತ ತರಬೇತಿ ಪಡೆದ ಭದ್ರತಾ ಪಡೆ ಸುತ್ತುವರೆದಿದ್ದು, ಪ್ರತಿಯೊಂದು ಚಲನವಲನಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. 
  • ಮೂರನೇ ಹಂತದಲ್ಲಿಯೂ ರಾಷ್ಟ್ರೀಯ ಭದ್ರತಾ ಪಡೆಯ ಕಾವಲಿರುತ್ತದೆ
  • ನಾಲ್ಕನೆ ಹಂತದಲ್ಲಿ ಅರೆಸೈನಿಕ ಪಡೆಗಳಿಂದ ಭದ್ರತೆಯಿರುತ್ತದೆ. ಪ್ರಧಾನಿ ಬೇರೆ ರಾಜ್ಯಗಳಿಗೆ ತೆರಳಿದ ಸಂದರ್ಭದಲ್ಲಿ ಅವರಿಗೆ ಭದ್ರತೆ ಒದಗಿಸುವುದು ಆ ರಾಜ್ಯದ ಜವಾಬ್ದಾರಿ ಯಾಗಿದ್ದರೂ, ಕೇಂದ್ರದ ಭದ್ರತೆ ಕೂಡ ಇರುತ್ತದೆ.
  • ಕೇವಲ ಭದ್ರತಾ ಪಡೆಗಳ ಕಣ್ಗಾವಲು ಮಾತ್ರವಲ್ಲದೆ  ಪ್ರಧಾನಿ ಕಾರ್ಯಕ್ರಮದ ಸುತ್ತಲೂ ಡ್ರೋನ್‌ಗಳು ಹಾಗೂ ವಿಮಾನಗಳ ಕಣ್ಗಾವಲಿರುತ್ತದೆ.
Follow Us:
Download App:
  • android
  • ios