ಇಮ್ರಾನ್ ಪ್ರಮಾಣವಚನ ಸ್ವೀಕಾರ ಸಮಾರಂಭ! ಪಾಕ್‌ಗೆ ತೆರಳಿ ಕಂಗೆಣ್ಣಿಗೆ ಗುರಿಯಾದ ಸಿಧು !ಪಾಕ್ ಸೇನಾ ಮುಖ್ಯಸ್ಥರ ಜೊತೆಗಿನ ಆಲಿಂಗನ! ಸಿಧು, ಬಜ್ವಾ ಮಾತಾಡಿದ್ದೇನು ಗೊತ್ತಾ?! ಕ್ರಿಕೆಟರ್ ಆಗಬೇಕೆಂದುಕೊಂಡಿದ್ದ ಬಜ್ವಾ
ನವದೆಹಲಿ(ಆ.18): ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಪ್ರಮಾಣವಚನ ಸಮಾರಂಭಕ್ಕೆ ಹೋಗಿ ಹಲವರ ಕೆಂಗಣ್ಣಿಗೆ ಗುರಿಯಾಗಿರುವ ಮಾಜಿ ಕ್ರಿಕೆಟಿಗ, ಸಚಿವ ನವಜೋತ್ ಸಿಂಗ್ ಸಿಧು, ಪಾಕಿಸ್ತಾನದ ಸೇನಾ ಮುಖ್ಯಸ್ಥರ ಜೊತೆಗಿನ ತಮ್ಮ ಮಾತುಕತೆಯ ವಿವರವನ್ನು ಬಹಿರಂಗಗೊಳಿಸಿದ್ದಾರೆ.
ಪಾಕಿಸ್ತಾನದ ನೂತನ ಪ್ರಧಾನಿಯಾಗಿ ನಿನ್ನೆ ಮಾಜಿ ಕ್ರಿಕೆಟಿಗ ಹಾಗೂ ಪಿಟಿಐ ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕರಿಸಿದರು. ಈ ಕಾರ್ಯಕ್ರಮಕ್ಕೆ ಭಾರತದಿಂದ ಕಪಿಲ್ ದೇವ್, ಸುನಿಲ್ ಗವಾಸ್ಕರ್ ಮತ್ತು ನವಜೋತ್ ಸಿಂಗ್ ಸಿಧು ಅವರಿಗೆ ಅಹ್ವಾನ ನೀಡಲಾಗಿತ್ತು. ಈ ಮೂವರ ಪೈಕಿ ಸಿಧು ಮಾತ್ರ ಕಾರ್ಯಕ್ರಮಕ್ಕೆ ತೆರಳಿದ್ದರು.
ಪ್ರಮಾಣವಚನ ಕಾರ್ಯಕ್ರಮಕ್ಕೆ ತೆರಳಿದ್ದ ಸಿಧು ಅವರನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಬಜ್ವಾ ಸ್ವಾಗತಿಸಿದ್ದರು. ಅಲ್ಲದೆ ಸಿಧು ಅವರನ್ನು ಆಲಂಗಿಸಿಕೊಂಡು ಆತ್ಮೀಯವಾಗಿ ಬರ ಮಾಡಿಕೊಂಡಿದ್ದರು. ಈ ವೇಳೆ ಸಿಧು ಮತ್ತು ಬಜ್ವಾ ಕೆಲ ಕ್ಷಣಗಳ ಕಾಲ ಮಾತನಾಡಿದ್ದು, ಇವರಿಬ್ಬರು ಏನು ಮಾತನಾಡಿದರು ಎಂಬ ಕುತೂಹಲ ಸುದ್ದಿಗೆ ಗ್ರಾಸವಾಗಿತ್ತು.
ಇದೀಗ ಈ ಕುತೂಹಲಕ್ಕೆ ಸ್ವತಃ ಸಿಧು ತೆರೆ ಎಳೆದಿದ್ದು, ಬಜ್ವಾ ಹೇಳಿದ್ದೇನು ಎಂಬುದನ್ನು ವಿವರಿಸಿದ್ದಾರೆ. ಕಾರ್ಯಕ್ರಮಕ್ಕೆ ತೆರಳಿದ ತಮ್ಮನ್ನು ಆತ್ಮೀಯವಾಗಿ ಬರ ಮಾಡಿಕೊಂಡ ಬಜ್ವಾ, ತಾವೂ ಕೂಡ ಕ್ರಿಕೆಟರ್ ಆಗಬೇಕೆಂದು ಕನಸು ಕಂಡಿದ್ದಾಗಿ ಬಜ್ವಾ ತಿಳಿಸಿದ್ದಾಗಿ ಸಿಧು ಹೇಳಿದ್ದಾರೆ.
ಅಲ್ಲದೆ ನಮಗೆ ಭಾರತದೊಂದಿಗೆ ದ್ವಂದ್ವವಲ್ಲ ಶಾಂತಿ ಬೇಕು ಎಂದು ಬಜ್ವಾ ತಮ್ಮೊಡನೆ ಮಾತನಾಡುವಾಗ ಹೇಳಿದರು ಎಂದು ಸಿಧು ಹೇಳಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮಕ್ಕಾಗಿ ಪಾಕಿಸ್ತಾನಕ್ಕೆ ತೆರಳಿದ್ದು ತಮ್ಮ ಜೀವನದಲ್ಲಿ ಮರೆಯಲಾಗದ ಘಟನೆ ಎಂದು ಸಿಧು ಬಣ್ಣಿಸಿದ್ದಾರೆ.
