ಕಟ್ಟಪ್ಪ ಕನ್ನಡಿಗರ ಬಗ್ಗೆ ಅವಹೇಳನಾಕಾರಿಯಾಗಿ ಏನು ಮಾತನಾಡಿದ್ದಾರೆ ಅಂತ ನೀವೇ ಒಮ್ಮೆ ನೋಡಿ...

ಬೆಂಗಳೂರು(ಏ.20): ಬಾಹುಬಲಿ-2 ಸದ್ಯಕ್ಕೆ ಕರ್ನಾಟಕದಾದ್ಯಂತ ಸಾಕಷ್ಟು ವಿವಾದಕ್ಕೆ ಒಳಗಾದ ಚಿತ್ರ. ಎಸ್.ಎಸ್ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಬಾಹುಬಲಿ-2 ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ಕನ್ನಡಿಗರು ಹಾಗೂ ಕನ್ನಡಪರ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಹುಬಲಿ-2 ಬಿಡುಗಡೆಗೆ ವಿರೋಧ ವ್ಯಕ್ತವಾಗಲು ಕಾರಣ, ಚಿತ್ರದ ಸಹನಟ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನುವುದು. ಹಾಗಾಗಿ ಕನ್ನಡಪರ ಸಂಘಟನೆಗಳು ಕಟ್ಟಪ್ಪ ಕ್ಷಮೆಯಾಚಿಸಬೇಕು ಎಂದು ಪಟ್ಟುಹಿಡಿದಿವೆ.

ಅಷ್ಟಕ್ಕೂ ಕಟ್ಟಪ್ಪ ಕನ್ನಡಿಗರ ಬಗ್ಗೆ ಅವಹೇಳನಾಕಾರಿಯಾಗಿ ಏನು ಮಾತನಾಡಿದ್ದಾರೆ ಅಂತ ನೀವೇ ಒಮ್ಮೆ ನೋಡಿ...