ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್  ತಮ್ಮ ಉಡುಗೆ-ತೊಡುಗೆಯನ್ನು ಟೀಕಿಸಿದ್ದವರಿಗೆ ತಕ್ಕ ತಿರುಗೇಟು ನೀಡಿದ್ದಾರೆ.

ಗ್ಲಾಮರ್ ಲೋಕದ ವಿಚಾರಗಳ ಬಗ್ಗೆಯೂ ಮಯಾಂತಿ ಮಾತನಾಡಿದ್ದಾರೆ. ನಿರೂಪಕಿಯಾಗಿ ಕ್ರೀಡಾ ಲೋಕದಲ್ಲಿ ಬೆಳೆದು ಬಂದ ದಾರಿಯನ್ನು ನೆನಪಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ಆಟಗಾರ ಸುರೇಶ್ ರೈನಾರನ್ನು ಸಂದರ್ಶನ ಮಾಡುವಾಗ, ಯಾರೋ ನನ್ನ ಸ್ಕ್ರೀನ್ ಶಾಟ್ ತೆಗೆದು, ಪತಿ ಸ್ಟುವರ್ಟ್​ ಬಿನ್ನಿಗೆ ಕಳುಹಿಸಿದ್ದರು. ಅಲ್ಲದೆ ನಾನು ಧರಿಸಿದ್ದ ಉಡುಪಿನ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದರು.  ನಾನು ಧರಿಸುವ ಚಪ್ಪಲಿಯ ಬಗ್ಗೆಯೂ ಕಮೆಂಟ್ ಮಾಡಿದ್ದರು ಎಂದು ಘಟನೆಯನ್ನು ಉಲ್ಲೇಖ ಮಾಡಿದ್ದಾರೆ.

ನಾಚಿಕೆಯಾಗಬೇಕು... ಅಮೀಶಾ ಪ್ರೈವೇಟ್ ಪಾರ್ಟ್ಸ್ ಬಗ್ಗೆ ಹೀಗಾ ಬರೆಯೋದು!

ಇಂಥದ್ದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಪತಿ ಸಹ ನೊಂದುಕೊಳ್ಳುವುದಿಲ್ಲ. ಉಡುಪು ಮತ್ತು ವೇಷ ಭೂಷಣ ನನ್ನ ಆಯ್ಕೆಯಾಗಿದೆ. ನನಗೆ ಸರಿ ಎನ್ನಿಸುವುದನ್ನು ಧರಿಸುತ್ತೇನೆ. ಯಾರಿಂದಲೂ ಪಾಠ ಕಲಿಯಬೇಕಾಗಿಲ್ಲ  ಎಂದು ಹೇಳಿದ್ದಾರೆ.