ನವದೆಹಲಿ(ಸೆ.29): ಉರಿ ಸೇನಾ ನೆಲೆಯ ಮೇಲೆ ಪಾಕ್ ಪ್ರಚೋದಿತ ಉಗ್ರರು ದಾಳಿ ನಡೆಸಿ 19 ಯೋಧರನ್ನು ಹತ್ಯೆಗೈದ ಘಟನೆಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಭಾರತ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ಸೇನಾ ನೆಲೆಗಳ ಮೇಲೆ ಬುಧವಾರ ರಾತ್ರಿ ಸರ್ಜಿಕಲ್ ಅಟ್ಯಾಕ್ ಮೂಲಕ ಕ್ಷಿಪ್ರ ಕಾರ್ಯಾಚರಣೆ ಸುಮಾರು 40 ಉಗ್ರರನ್ನು ಹತ್ಯೆಗೈದಿದ್ದಾರೆ.
ಹಾಗಾದರೆ ಸರ್ಜಿಕಲ್ ದಾಳಿ ಎಂದರೆ ಏನು ಅದರ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ
1) ಭಾರತದ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳಲ್ಲಿ ಪ್ರತ್ಯೇಕ ತಂಡವೇ ಇರುತ್ತೆ
2) ಎಲ್ಲಿ ದಾಳಿ ಮಾಡಬೇಕು..? ಎಲ್ಲೆಲ್ಲಿ ಏನೇನಿದೆ..? ಎಷ್ಟು ಜನ ದಾಳಿ ಮಾಡಬೇಕು..? ಎಲ್ಲವೂ ನಿರ್ಧಾರವಾಗಿರುತ್ತೆ
3) ಎಷ್ಟು ಹೊತ್ತಿನಲ್ಲಿ ದಾಳಿ ಮುಗಿಸಬೇಕು ಅನ್ನೋದು ನಿರ್ಧಾರವಾಗಿರುತ್ತೆ. ನಿಮಿಷವೂ ವ್ಯತ್ಯಾಸವಾಗುವಂತಿಲ್ಲ
4) 30 ನಿಮಿಷದಲ್ಲಿ ದಾಳಿ ಮುಗಿಸಬೇಕು ಎಂದರೆ, 30 ನಿಮಿಷ ಅಷ್ಟೆ. 31ನೇ ನಿಮಿಷಕ್ಕೆ ದಾಳಿ ವಿಸ್ತರಣೆ ಆಗಲ್ಲ
5) ಈ ತಂಡಕ್ಕೆ, ಐಬಿ, ರಾ ಸೇರಿದಂತೆ ಗುಪ್ತಚರ ಇಲಾಖೆ ಮಾಹಿತಿಗಳು ರವಾನೆಯಾಗುತ್ತಲೇ ಇರುತ್ತವೆ
6) ಮೂರೂ ಪಡೆಗಳು ಒಟ್ಟಾಗಿ ದಾಳಿ ಮಾಡಬೇಕೆಂದರೆ, ಮೊದಲೇ ಪ್ಲಾನ್ ಆಗುತ್ತೆ
7) ದಾಳಿ ಮಾಡಬೇಕಾದ ಸ್ಥಳಕ್ಕೆ ಹೆಲಿಕಾಪ್ಟರ್ನಲ್ಲಿ ಶಸ್ತ್ರಸಜ್ಜಿತ ಕಮಾಂಡೋಗಳನ್ನು ಬಿಡಲಾಗುತ್ತೆ
8) ಯೋಜನೆ ಸರಿಯಾಗಿದ್ದರೆ, ದಾಳಿ ಮಾಡಿದ ತಂಡದಲ್ಲಿ ಪ್ರಾಣಹಾನಿಯಾಗುವುದಿಲ್ಲ
9) ಇಂದಿನ ದಾಳಿ ಎಷ್ಟು ಯೋಜಿತವಾಗಿತ್ತು ಎಂದರೆ, ನಮ್ಮ ಒಬ್ಬ ಸೈನಿಕರೂ ಕೂಡಾ ಗಾಯಾಳುವಾಗಿಲ್ಲ
10) ಈ ತಂಡದ ಕಾರ್ಯಾಚರಣೆ, ತಂಡದಲ್ಲಿ ಯಾರಿರುತ್ತಾರೆ ಎಲ್ಲವೂ ಮುಖ್ಯಸ್ಥರಿಗಷ್ಟೇ ಗೊತ್ತಿರುತ್ತೆ
11) ಕಾರ್ಯಾಚರಣೆ ಎಷ್ಟು ನಿಗೂಢವಾಗಿರುತ್ತೆ ಎಂದರೆ, ಬೇರೆಯವರಿಗೆ ಮುಗಿಯುವವರೆಗೂ ಗೊತ್ತಾಗುವುದಿಲ್ಲ
12) ಹೀಗಾಗಿಯೇ ಇಂದಿನ ದಾಳಿಯ ವಿವರ ಅಧಿಕಾರಿಗಳು ಪ್ರೆಸ್ಮೀಟ್ ಮಾಡುವವರೆಗೆ ಗೊತ್ತಾಗಲಿಲ್ಲ
--
ಸರ್ಜಿಕಲ್ ಅಟ್ಯಾಕ್
1) ದಾಳಿ ಸ್ಥಳಕ್ಕೆ ಹೆಲಿಕಾಪ್ಟರ್ನಲ್ಲಿ ಶಸ್ತ್ರಸಜ್ಜಿತ ಕಮಾಂಡೋಗಳನ್ನು ಬಿಡಲಾಗುತ್ತೆ
2) ಯೋಜನೆ ಸರಿಯಾಗಿದ್ದರೆ, ದಾಳಿ ಮಾಡಿದ ತಂಡದಲ್ಲಿ ಪ್ರಾಣಹಾನಿಯಾಗುವುದಿಲ್ಲ
3) ಈ ದಾಳಿ ಎಷ್ಟು ಯೋಜಿತವಾಗಿತ್ತು ಅಂದರೆ ನಮ್ಮ ಸೈನಿಕರಿಗೆ ಗಾಯವಾಗಿಲ್ಲ
4) ಇದರ ಕಾರ್ಯಾಚರಣೆ, ತಂಡದಲ್ಲಿ ಯಾರಿರುತ್ತಾರೆ ಎಲ್ಲವೂ ಮುಖ್ಯಸ್ಥರಿಗಷ್ಟೇ ಗೊತ್ತಿರುತ್ತೆ
5) ಹೀಗಾಗಿಯೇ ದಾಳಿಯ ವಿವರ ಪ್ರೆಸ್ಮೀಟ್ ಮಾಡುವವರೆಗೆ ಗೊತ್ತಾಗಲಿಲ್ಲ
ಹೇಗಿತ್ತು ಗೊತ್ತಾ ಆಪರೇಷನ್?
- ಆಕ್ರಮಿತ ಕಾಶ್ಮೀರದ ಒಳಗೆ ಬುಧವಾರ ಮಧ್ಯರಾತ್ರಿ ಭಾರತೀಯ ಸೇನೆ ದಾಳಿ
- 4.30ರವರೆಗೆ ದಾಳಿ ನಡೆದಿದ್ದು, ಡ್ರೋಣ್ ಕ್ಯಾಮರಾದಲ್ಲಿ ದಾಳಿಯ ಚಿತ್ರೀಕರಣ
- ನೆಲದ 500 ಮೀಟರ್ ನಿಂದ ಸುಮಾರು 3 ಕಿಲೋ ಮೀಟರ್ ನುಗ್ಗಿ ದಾಳಿ
- ಕ್ಯಾಂಪ್ ಮೇಲೆ ಕಮಾಂಡೋ ದಾಳಿ. 9 ಮಂದಿ ಪಾಕ್ ಸೈನಿಕರೂ ಬಲಿ
- ಮಾಹಿತಿ ಪ್ರಕಾರ 40 ಉಗ್ರರು ಸತ್ತಿದ್ದಾರೆ ಅಂತ ಶಂಕಿಸಲಾಗಿದೆ
---
ಸಂಚು ರೂಪಿಸಿದ್ದ ಉಗ್ರರು
- ಉಗ್ರರು ಕಾಶ್ಮೀರದ ಹಲವೆಡೆ ದಾಳಿ ನಡೆಸಲು ಸಂಚು ರೂಪಿಸಿದ್ದರು
- ಉಗ್ರರ ಶಿಬಿರದ ಮೇಲೆ ಕಳೆದ ಒಂದು ವಾರದಿಂದ ನಿಗಾ ಇಡಲಾಗಿತ್ತು
- ವೇಳೆ ಲೈನ್ ಆಫ್ ಕಂಟ್ರೋಲ್ನಲ್ಲಿ ಸೇನಾ ಪಡೆಯಿಂದ ಹೈಅಲರ್ಟ್
- ಕ್ರಮವಾಗಿ ಗಡಿಯಲ್ಲಿ ಗ್ರಾಮಗಳ ಜನರನ್ನು ಸ್ಥಳಾಂತರಿಸಲಾಗಿತ್ತು
- ಸೇನಾ ನೆಲೆಯಲ್ಲಿ ಉಗ್ರರ ಅಟ್ಟಹಾಸಕ್ಕೆ ತಕ್ಕ ಉತ್ತರ ಕೊಟ್ಟ ಭಾರತೀಯ ಸೇನೆ
ಆಪರೇಷನ್ ಹೈಲೈಟ್ಸ್!
- ಪಾಕಿಸ್ತಾನದಲ್ಲಿ ಇಂಥಾದ್ದೊಂದು ದಾಳಿ ನಡೆಸಿರುವುದು ಇದೇ ಮೊದಲು!
- ಪ್ರದೇಶಕ್ಕೆ ನುಗ್ಗಲು ನೆರವಾಗಿದ್ದು HAL ಧ್ರುವ್ ಹೆಲಿಕಾಪ್ಟರ್ಗಳು
- ದೃಶ್ಯಗಳನ್ನೂ ಸೈನ್ಯ, ಡ್ರೋಣ್ ಕ್ಯಾಮೆರಾದಲ್ಲಿ ಶೂಟಿಂಗ್ ಮಾಡಲಾಗಿದೆ
- ದಾಳಿಯನ್ನು ಮಾನಿಟರ್ ಮಾಡಿದ್ದು ಸಚಿವ ಮನೋಹರ್ ಪರಿಕ್ಕರ್
- ಕಾರ್ಯದರ್ಶಿ ಅಜಿತ್ ದೋವೆಲ್, ಆರ್ಮಿ ಜನರಲ್ ಡಿಎಸ್ ಸುಹಾಗ್
- ಕಾರ್ಯಾಚರಣೆಯ ಕ್ಷಣ ಕ್ಷಣದ ವಿವರ ಪ್ರಧಾನಿ, ರಾಷ್ಟ್ರಪತಿಗೆ ರವಾನೆ
- ಪುರ್ನ ನಾರ್ಥರ್ನ್ ಕಮಾಂಡೋ ಪಡೆ ನಡೆಸಿದ ಕಾರ್ಯಾಚರಣೆ
- ಕ್ಯಾಂಪ್ಗಳನ್ನಷ್ಟೇ ಭಾರತೀಯ ಸೈನಿಕರು ಟಾರ್ಗೆಟ್ ಮಾಡಿದರು
- ವಾರದಿಂದಲೂ ಕಾರ್ಯಾಚರಣೆಯ ರಿಹರ್ಸಲ್ ನಡೆಸಲಾಗುತ್ತಿತ್ತು
- ಸೈನಿಕರ ರಿಹರ್ಸಲ್ನಲ್ಲಿ ಸೈನ್ಯದ ಮೂರೂ ಪಡೆಗಳು ಭಾಗವಹಿಸಿದ್ದವು
ಇಂಥಾ ದಾಳಿ.. ಇದೇ ಮೊದಲು..!
- ಉಗ್ರರಿಗೆ, ಉಗ್ರರ ಪೋಷಕರಿಗೆ ನಮ್ಮ ಶಕ್ತಿ ತೋರಿಸಲು ನಡೆಸಿದ ದಾಳಿ
- ಆಕ್ರಮಿತ ಕಾಶ್ಮೀರದಲ್ಲಿ ನಡೆದಿರುವ ದಾಳಿ, ಸ್ಯಾಂಪಲ್ ಅಷ್ಟೆ
- ಇದೇ ಮೊದಲ ಬಾರಿಗೆ ಇಂಥಾದ್ದೊಂದು ದಾಳಿ ನಡೆಸಿದೆ
- ಮುನ್ನ ಭಾರತ ಹಲವು ಬಾರಿ ವಿಶ್ವಸಂಸ್ಥೆಗೆ ದೂರು ನೀಡಿತ್ತು
- ನಡೆಸುವ ಅವಕಾಶ ಭಾರತೀಯ ಸೈನಿಕರಿಗೆ ಸಿಕ್ಕಿದ್ದು ಅಪರೂಪ
