ಕೊನೆಗೂ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ಪತ್ತೆ..!

First Published 12, Feb 2018, 10:00 AM IST
What Is the Reson Of Congress Loss Madhya Pradesh Election
Highlights

ಕಳೆದ 14 ವರ್ಷಗಳಿಂದ ಅಧಿಕಾರ ವಂಚಿತವಾಗಿ ಕೈ ಕೈ ಹಿಸುಕಿಕೊಳ್ಳುತ್ತಿರುವ ಮಧ್ಯಪ್ರದೇಶದ ಕಾಂಗ್ರೆಸ್ ಘಟಕ, ಕೊನೆಗೂ ಇದಕ್ಕೆ ಕಾರಣವನ್ನು ಹುಡುಕಿ, ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಪಕ್ಷದ ನಾಯಕರಿಗೀಗ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಆತ್ಮವಿಶ್ವಾಸ ತುಂಬಿ ತುಳುಕುತ್ತಿದೆ.

ಭೋಪಾಲ್: ಕಳೆದ 14 ವರ್ಷಗಳಿಂದ ಅಧಿಕಾರ ವಂಚಿತವಾಗಿ ಕೈ ಕೈ ಹಿಸುಕಿಕೊಳ್ಳುತ್ತಿರುವ ಮಧ್ಯಪ್ರದೇಶದ ಕಾಂಗ್ರೆಸ್ ಘಟಕ, ಕೊನೆಗೂ ಇದಕ್ಕೆ ಕಾರಣವನ್ನು ಹುಡುಕಿ, ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಪಕ್ಷದ ನಾಯಕರಿಗೀಗ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಆತ್ಮವಿಶ್ವಾಸ ತುಂಬಿ ತುಳುಕುತ್ತಿದೆ.

ಕೆಲ ದಿನಗಳ ಹಿಂದೆ, ಪಕ್ಷದ ಕಳಪೆ ಸಾಧನೆ ಬಗ್ಗೆ ವಾಸ್ತುತಜ್ಞರನ್ನು ಕರೆಸಿ, ಕಟ್ಟಡವನ್ನು ತೋರಿಸಿದಾಗ, ಕಟ್ಟಡದ ನೆಲಮಹಡಿಯಲ್ಲಿರುವ ಪಕ್ಷದ ವಕ್ತಾರರು ಕೂರುವ ಕೊಠಡಿಯ ಪಕ್ಕದಲ್ಲೇ ಮೂರು ಶೌಚಾಲಯಗಳಿದ್ದು, ಇವು ಪಕ್ಷಕ್ಕೆ ಕಂಟಕವಾಗಿದೆ ಎಂದಿದ್ದರು. ಹೀಗಾಗಿ ಇದೀಗ ಆ ಮೂರೂ ಶೌಚಾಲಯಗಳನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸುವ ಮೂಲಕ ಪಕ್ಷಕ್ಕೆ ಅಂಟಿದ್ದ ಶಾಪ ವಿಮೋಚನೆ ಮಾಡುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ.

loader