ಪಟನಾ: ವಿವಾಹವಾದ 6 ತಿಂಗಳೊಳಗೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ರ ಪುತ್ರ ತೇಜ್‌ಪ್ರತಾಪ್, ತಮ್ಮ ಸಂಬಂಧದ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ‘ನನಗೆ ಈ ಮದುವೆಯೇ ಇಷ್ಟ ಇಲ್ಲ ಎಂದು ಪೋಷಕರಿಗೆ ತಿಳಿಸಿದ್ದೆ.

ಆದರೆ ಕೊನೆಗೆ ಅವರ ಒತ್ತಾಯಕ್ಕೆ ಮದುವೆಯಾಗಿದ್ದೆ. ಆದರೆ ನಾನು ಉತ್ತರವಾದರೆ, ನನ್ನ ಪತ್ನಿ ದಕ್ಷಿಣ ಎನ್ನುವಂಥ ಸ್ಥಿತಿ ಆಗಿತ್ತು. ಪತಿ- ಪತ್ನಿ ನಡುವೆ ನಿತ್ಯ ಜಗಳ ನಡೆಯುತ್ತಿತ್ತು. ಪೋಷಕರ ಎದುರೇ ಗಲಾಟೆ ಸಾಮಾನ್ಯವಾಗಿತ್ತು. ನಾನೋರ್ವ ಸಾಮಾನ್ಯ. ಆಕೆಯೋ ದೆಹಲಿಯಂಥ ನಗರದಲ್ಲಿ ಶಿಕ್ಷಣ ಪಡೆದಾಕೆ. 

ನಮ್ಮಿಬ್ಬರ ನಡುವೆ ಯಾವುದೇ ವಿಷಯದಲ್ಲೂ ಹೊಂದಾಣಿಕೆ ಏರ್ಪಡಲೇ ಇಲ್ಲ. ಹೀಗೆ ಒಲ್ಲದ ಸಂಬಂಧದಲ್ಲಿ ಮುಂದುವರೆಯುವುದಕ್ಕಿಂತ ಬೇರಾಗುವುದೇ ಲೇಸು ಎನ್ನುವ ಕಾರಣಕ್ಕೆ ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ’ ಎಂದು ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ.