ಸಿದ್ದು ಭ್ರಷ್ಟಾಚಾರಕ್ಕೆ ಬಿಜೆಪಿ ಬಳಿ ಪ್ರೂಫ್‌ ಏನಿದೆ?: ಪರಂ

news/india | Friday, April 27th, 2018
Suvarna Web Desk
Highlights

ಕಳೆದ ಬಾರಿ ತಾವು ಸೋತಿದ್ದ ಕೊರಟಗೆರೆ ಕ್ಷೇತ್ರದ ಮೇಲೆ ಕಣ್ಣಿಟ್ಟೇ ಕೆಪಿಸಿಸಿ ಅಧ್ಯಕ್ಷ ಡಾ ಜಿ.ಪರಮೇಶ್ವರ್‌ ರಾಜ್ಯಾದ್ಯಂತ ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕನ್ನಡಪ್ರಭದ ಎಸ್‌.ಗಿರೀಶ್‌ ಬಾಬುಗೆ ನೀಡಿದ ಸಂದರ್ಶನದಲ್ಲಿ ಅವರು ಭ್ರಷ್ಟಾಚಾರ, ಟಿಕೆಟ್‌, ವಯೋಮಿತಿ ಮತ್ತಿತರ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಎಸ್. ಗಿರೀಶ್‌ಬಾಬು

ಬೆಂಗಳೂರು : ಕಳೆದ ಬಾರಿ ತಾವು ಸೋತಿದ್ದ ಕೊರಟಗೆರೆ ಕ್ಷೇತ್ರದ ಮೇಲೆ ಕಣ್ಣಿಟ್ಟೇ ಕೆಪಿಸಿಸಿ ಅಧ್ಯಕ್ಷ ಡಾ ಜಿ.ಪರಮೇಶ್ವರ್‌ ರಾಜ್ಯಾದ್ಯಂತ ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕನ್ನಡಪ್ರಭದ ಎಸ್‌.ಗಿರೀಶ್‌ ಬಾಬುಗೆ ನೀಡಿದ ಸಂದರ್ಶನದಲ್ಲಿ ಅವರು ಭ್ರಷ್ಟಾಚಾರ, ಟಿಕೆಟ್‌, ವಯೋಮಿತಿ ಮತ್ತಿತರ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಗಣಿ ಹಗರಣದ ಬಗ್ಗೆ ಹೋರಾಟ ಮಾಡಿದ ಕಾಂಗ್ರೆಸ್‌ ಅದರ ಪಾತ್ರಧಾರಿಗಳಿಗೆ ಟಿಕೆಟ್‌ ನೀಡಿದೆ?

ಆನಂದ್‌ಸಿಂಗ್‌ ಅವರು ಸ್ಪರ್ಧಿಸಿದಂತಹ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಳೆದ 35- 40 ವರ್ಷಗಳಿಂದ ಗೆದ್ದಿಲ್ಲ. ಅಂತಹ ಕ್ಷೇತ್ರದಿಂದ ಕೆಲವರು ಬಂದು ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದಾಗಿ ಹೇಳಿದಾಗ ನಾವು ಓಕೆ ಅಂದೆವು. ಹೀಗೆ ಬರುವವರು ಹೊರೆ ಇಟ್ಟುಕೊಂಡಿದ್ದರೆ (ಭ್ರಷ್ಟಾಚಾರ, ಹಗರಣದಂತಹ ಹೊರೆಗಳು) ಅದು ಅವರಿಗೆ ಸಂಬಂಧಿಸಿದ್ದು. ಪಕ್ಷ ಅದರಿಂದ ದೂರ ಉಳಿಯುತ್ತದೆ.


? ಭಾರಿ ಸರ್ಕಸ್ ನಡೆಸಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ಮಾಡಿತು. ಬಂಡಾಯ ತಡೆಯಲು ಆಗಲಿಲ್ಲ, ಏಕೆ?

ಒಂದು ಕ್ಷೇತ್ರಕ್ಕೆ ೧೦ ಮಂದಿ ಅರ್ಜಿ ಹಾಕುತ್ತಾರೆ. ಎಲ್ಲರಿಗೂ ಟಿಕೆಟ್ ಕೊಡಲಾಗುವುದಿಲ್ಲ. ಹೀಗಾಗಿ, ಉಳಿದವರಿಗೆ ಸಹಜವಾಗಿ ಬೇಸರವಾಗುತ್ತದೆ. ಅಂತಹವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದೇವೆ. ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ. ಆಗ ಅವಕಾಶ ಕೊಡುತ್ತೇವೆ ಎಂದು ಸಮಾಧಾನಿಸಿದ್ದೇವೆ.  

ಎಲ್ಲಿ ಸಮಾಧಾನಗೊಂಡಿದ್ದಾರೆ? 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳಿದ್ದಾರಲ್ಲ?
ಇಲ್ಲ, ಅಷ್ಟಿಲ್ಲ. ನಾಮಪತ್ರ ಹಿಂಪಡೆಯುವವರು ಇರುತ್ತಾರೆ. ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಬಂಡಾಯ ಅಷ್ಟೇನೂ ಇಲ್ಲ.

? ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ನೋಡಿದರೆ ಟಿಕೆಟ್ ನೀಡಲು ಅನುಸರಿಸಿದ ಮಾನದಂಡ ಯಾವುದು ಎಂಬುದೇ ಅರ್ಥವಾಗುವುದಿಲ್ಲ?
ಗೆಲುವು. ಇದೇ ಅಭ್ಯರ್ಥಿ ಆಯ್ಕೆಯ ಮಾನದಂಡ. ನಿಜ, ಶೇ.೫ರಷ್ಟು ಸೀಟುಗಳಲ್ಲಿ ನಾವು ಕಾಂಪ್ರಮೈಸ್ ಮಾಡಿಕೊಂಡಿದ್ದೇವೆ. ಮಾನದಂಡವನ್ನು ಮೀರಿ ಕೆಲವರಿಗೆ ಟಿಕೆಟ್ ನೀಡಿದ್ದೇವೆ. ಜೆಡಿಎಸ್ ನಿಂದ ಕರೆತಂದು ಅವರಿಗೆ ಟಿಕೆಟ್ ನೀಡಿದ್ದೇವೆ. ಆನಂದಸಿಂಗ್
ರಂತಹ ಕೆಲ ಕ್ಷೇತ್ರಗಳಲ್ಲಿ ಟಿಕೆಟ್ ನೀಡಿದ್ದೇವೆ. 

? ಹೌದು, ಗಣಿ ಹಗರಣದ ಬಗ್ಗೆ ಹೋರಾಟ ಮಾಡಿದ ಕಾಂಗ್ರೆಸ್ ಅದರ ಪಾತ್ರಧಾರಿಗಳಿಗೆ ಟಿಕೆಟ್ ನೀಡಿದೆ?
ಆನಂದ್‌ಸಿಂಗ್ ಅವರು ಸ್ಪರ್ಧಿಸಿದಂತಹ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಳೆದ 35- 40 ವರ್ಷಗಳಿಂದ ಗೆದ್ದಿಲ್ಲ. ಅಂತಹ ಕ್ಷೇತ್ರದಿಂದ ಕೆಲವರು ಬಂದು ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದಾಗಿ ಹೇಳಿದಾಗ ನಾವು ಓಕೆ ಅಂದೆವು. ಹೀಗೆ ಬರುವವರು ಹೊರೆ ಇಟ್ಟುಕೊಂಡಿದ್ದರೆ (ಭ್ರಷ್ಟಾಚಾರ, ಹಗರಣದಂತಹ ಹೊರೆಗಳು) ಅದು ಅವರಿಗೆ ಸಂಬಂಧಿಸಿದ್ದು. ಪಕ್ಷ ಅದರಿಂದ ದೂರ ಉಳಿಯುತ್ತದೆ.


? ಅಭ್ಯರ್ಥಿ ಕಾಂಗ್ರೆಸ್ಸಿನವರು, ಆದರೆ ಅವರ ಹೊರೆ ಮಾತ್ರ ಪಕ್ಷದ್ದಲ್ಲ. ಅದು ಹೇಗೆ?
ಇಂತಹ ಅಭ್ಯರ್ಥಿಗಳ ವಿರುದ್ಧವಿರುವ ಪ್ರಕರಣಗಳನ್ನು ನಾವು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಆ ಪ್ರಕರಣಗಳ ಗಾಂಭೀರ್ಯತೆ
ಎಷ್ಟಿದೆ ಎಂಬುದನ್ನು ಅರಿತ ನಂತರವೇ ಅಭ್ಯರ್ಥಿ ಮಾಡಿಕೊಳ್ಳಲು ಮುಂದಾಗಿದ್ದೇವೆ. ಜತೆಗೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ
ನಂತರ ಕೇಸ್ ಇತ್ಯರ್ಥಕ್ಕೆ ಸರ್ಕಾರ ಸಹಾಯ ಮಾಡುವುದಿಲ್ಲ. ನಿಮ್ಮ ಪ್ರಕರಣಗಳನ್ನು ನೀವೇ ನಿಭಾಯಿಸಬೇಕು ಎಂದು ಸ್ಪಷ್ಟವಾಗಿ
ಹೇಳಿದ್ದೇವೆ. ಇದೆಲ್ಲಕ್ಕಿಂತ ಮುಖ್ಯವಾಗಿ ಜನರು ಇಂತಹವರನ್ನು ಒಪ್ಪಿಕೊಂಡ ಮೇಲೆ ಯಾರು ಏನು ಮಾಡಲು ಸಾಧ್ಯ?
ಪ್ರಜಾಪ್ರಭುತ್ವದಲ್ಲಿ ಜನಾದೇಶ ಅಂತಿಮ. ಈಗ ಆನಂದ್ ಸಿಂಗ್ ಗೆದ್ದೇ ಗೆಲ್ಲುತ್ತಾರೆ ಎಂದೇ ನಮ್ಮ ಎಲ್ಲಾ ಸಮೀಕ್ಷೆಗಳು ಹೇಳುತ್ತವೆ.
ಗಣಿ ಪ್ರಕರಣದಲ್ಲಿ ಪಾತ್ರಧಾರಿ ಎಂದು ನೀವು ಹೇಳಿದ ನಂತರವೂ ಜನರು ಅವರನ್ನು ಒಪ್ಪಿಕೊಂಡು ಎರಡು- ಮೂರು ಬಾರಿ ಆಯ್ಕೆ
ಮಾಡಿದ ಮೇಲೆ ಇನ್ನೇನಿದೆ?

? ಜನರು ಜೈಲಿನಲ್ಲಿದ್ದವರನ್ನು ಆಯ್ಕೆ ಮಾಡಿದ್ದಾರೆ. ರಾಜಕೀಯ ಪಕ್ಷಕ್ಕೆ ಬದ್ಧತೆ, ವಿವೇಚನೆ ಬೇಡವೇ? 
ಪ್ರಜಾಪ್ರಭುತ್ವ ಎಂದರೆ ಅಂತಿಮವಾಗಿ ಜನಾದೇಶ ಅಲ್ಲವೆ? 
ಆಯ್ತು, ನೀವು ಹೇಳುವುದು ಸತ್ಯ ಎಂದಾದರೆ, ಅಂತಹ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವೇ ನೀಡಬಾರದು. 
ಜೈಲಿನಲ್ಲಿದ್ದವರು ಗೆದ್ದ ಉದಾಹರಣೆಗಳು ಬೇರೆ ರಾಜ್ಯಗಳಲ್ಲಿ ಇವೆ. ಅಂತಹವರು ವಿಧಾನಸೌಧಕ್ಕೆ ಬಂದಾಗ ಬೇಡ ಎಂದು ಅವರನ್ನು
ತಡೆಯಲು ಆಗುತ್ತದೆಯೇ?

? ಸಚಿವ ಸಂಪುಟ ಪುನಾರಚನೆ ವೇಳೆ ವಯಸ್ಸು ಹಾಗೂ ಅನಾರೋಗ್ಯ ಕಾರಣ ನೀಡಿ ಹಲವರನ್ನು ಕೈಬಿಟ್ಟಿರಿ. ಈಗ ಅಭ್ಯರ್ಥಿ ಪಟ್ಟಿಯಲ್ಲಿ ೮೫ ವರ್ಷ, 86 ವರ್ಷದವರು ಇದ್ದಾರಲ್ಲ?
ಹೌದು, ಇದ್ದಾರೆ. ಆದರೆ, ಅಂತಹವರನ್ನು ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಚಿವ ಸಂಪುಟಕ್ಕೆ ಅವರನ್ನು ಪರಿಗಣಿಸದೆ ಇರ
ಬಹುದು. ಈಗ ನಂಬರ್ ಬೇಕು. ಮತ್ತೆ ನಾನು ಅದೇ ಜನರ ಆಯ್ಕೆ ವಿಚಾರಕ್ಕೆ ಹಿಂತಿರುಗುತ್ತೇನೆ. ಜನರು ೮೫ ವರ್ಷ ಆಗಿದೆ, ಅವರನ್ನು
ತೆಗೆದು ಬಿಸಾಕೋಣ ಎಂದರೆ ಆಯ್ತಪ್ಪಾ ಎನ್ನಬಹುದಿತ್ತು. ಆದರೆ, ಜನರು ಇಲ್ಲ, ಸಾಯೋತನಕ ಎಲೆಕ್ಟ್ ಮಾಡುತ್ತಲೇ ಇರುತ್ತೇವೆ
ಎಂದರೆ... ಹಿಂದೆ ಲೋಕಸಭೆಯಲ್ಲಿ ರಂಗಾ ಅಂತ ಒಬ್ಬರಿದ್ದರು.ಅವರು ೯೩ನೇ ವಯಸ್ಸಿನಲ್ಲೂ ಲೋಕಸಭೆಗೆ ಬಂದಿದ್ದರು.


ಶಾಮನೂರು ಶಿವಶಂಕರಪ್ಪ ಹಾಗೂ ಕಾಗೋಡು ತಿಮ್ಮಪ್ಪ ಅಂತಹವರು 85 ದಾಟಿದ್ದಾರೆ. ?
ಹೌದು, ಜನರು ಅವರನ್ನು ಇಷ್ಟ ಪಡುತ್ತಾರೆ.

? ಬಿಜೆಪಿ ಇತ್ತೀಚೆಗೆ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರಿ ಎಂಬ ನೆಗೆಟಿವ್ ತಂತ್ರ ಅನುಸರಿಸುತ್ತಿದೆ. ಕಾಂಗ್ರೆಸ್‌ನ ಉತ್ತರವೇನು?
ನಾವು ಪಾಸಿಟಿವ್ ಪ್ರಚಾರ ತಂತ್ರ ಅನುಸರಿಸುತ್ತಿದ್ದೇವೆ. ನೆಗೆಟಿವ್ ಪ್ರಚಾರ ಮಾಡುತ್ತಿಲ್ಲ. ಕಳೆದ ಚುನಾವಣೆಯಲ್ಲಿ ನಾವು ನೆಗೆಟಿವ್
ಪ್ರಚಾರ ತಂತ್ರ ಅನುಸರಿಸಿದ್ದೆವು. ಏಕೆಂದರೆ, ಬಿಜೆಪಿ ಸರ್ಕಾರ ಕೆಟ್ಟ ಆಡಳಿತ ನೀಡಿತ್ತು. ಅದನ್ನು ಜನರ ಮುಂದೆ ಹೇಳಬೇಕಿತ್ತು. ಈಗ
ಕಾಂಗ್ರೆಸ್ ಸರ್ಕಾರವಿದೆ. ಸಾಕಷ್ಟು ಸಾಧನೆ ಮಾಡಿದೆ. ಅದನ್ನು ಜನರ ಮುಂದಿಡುತ್ತೇವೆ. ನಮಗೆ ನೆಗೆಟಿವ್ ಪ್ರಚಾರದ ಅವಶ್ಯಕತೆಯಿಲ್ಲ.

? ಬಿಜೆಪಿಯ ನೆಗೆಟಿವ್ ಪ್ರಚಾರ ತಂತ್ರ ಪ್ರಭಾವಶಾಲಿಯಾಗಿದೆ. ಜನ ನಂಬಿದರೆ?
ಜನರು ನಂಬಬೇಕು ಎಂದರೆ ಸಾಕ್ಷ್ಯಾಧಾರ ಬೇಕು. ಬಿಜೆಪಿ ಕೇವಲ ಆರೋಪ ಮಾಡುತ್ತಿದೆ. ಭ್ರಷ್ಟಾಚಾರ ಮಾಡಿದೆ ಎಂದು ಹೇಳಿದ
ಕೂಡಲೇ ಜನರು ನಂಬುವುದಿಲ್ಲ. ಸಾಕ್ಷಾಧಾರ ಏನಿದೆ ಎಂದು ಯೋಚಿಸುತ್ತಾರೆ.

? ನಿಜಕ್ಕೂ ಜನ ಅಷ್ಟು ಯೋಚಿಸುತ್ತಾರಾ?
ಖಂಡಿತಾ ಯೋಚಿಸುತ್ತಾರೆ. ಮುಖ್ಯಮಂತ್ರಿಯವರು ೪೫ ಲಕ್ಷ ರು. ವಾಚ್ ಕಟ್ಟಿಕೊಂಡರು ಎಂಬುದು ಇಶ್ಯೂನಾ? ಸಿಎಂ 45 ಲಕ್ಷ ರು.
ವಾಚ್ ಕಟ್ಟೋದರಿಂದ ಒಬ್ಬ ಸಾಮಾನ್ಯನಿಗೆ ಏನು ತೊಂದರೆ ಎಂದು ಜನ ಯೋಚಿಸುತ್ತಾರೆ. ಚೀಪ್ ಆರೋಪಗಳನ್ನು ಮಾಡಿದ ಕೂಡಲೇ ಜನರು ನಂಬುವುದಿಲ್ಲ. ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಸಾಕಷ್ಟು ಆರೋಪ ಮಾಡಿದರು. ಆದರೆ, ಯಾವುದನ್ನು ಸಾಬೀತುಪಡಿಲು ಅವರಿಂದ ಸಾಧ್ಯವಾಯಿತು. ? ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವ ಬಿಜೆಪಿ ಅದಕ್ಕೆ ಪ್ರೂಫ್ ನೀಡಿದೆಯಾ? ಜನರು ಬರೇ ಕಟ್ಟುಕಥೆಗಳನ್ನು ನಂಬುವುದಿಲ್ಲ.

? ಕಲ್ಯಾಣ ಕಾರ್ಯಕ್ರಮಗಳು ಈ ಬಾರಿ ಚುನಾವಣೆ ವಿಷಯವಾಗಬೇಕಿತ್ತು. ಆದರೆ, ಸಿಎಂ ಎರಡು ಕಡೆ ಸ್ಪರ್ಧೆ ಮಾಡುವುದು ಚುನಾವಣಾ ವಿಷಯವಾಗಿದೆ?
ಇದು ಮಾಧ್ಯಮಗಳ ಸೃಷ್ಟಿ. ಮಾಧ್ಯಮಗಳಿಗೆ ಗ್ರೌಂಡ್ ರಿಯಾಲಿಟಿ ಅರ್ಥವಾಗುತ್ತಿಲ್ಲ. ಮುಖ್ಯಮಂತ್ರಿಯವರ ಎರಡು ಕ್ಷೇತ್ರಗಳ
ಸ್ಪರ್ಧೆಯಂತಹ ವಿಚಾರಗಳನ್ನು ಮಾತ್ರ ಎತ್ತಿಕೊಳ್ಳುತ್ತಿವೆ. ಆದರೆ, ನೀವು ನೆಲಮಟ್ಟಕ್ಕೆ ಇಳಿದು ನೋಡಿದಾಗ ಈ ಬಾರಿ ಅಭಿವೃದ್ಧಿ
ಹಾಗೂ ಕಲ್ಯಾಣ ಕಾರ್ಯಕ್ರಮಗಳು ಜನರ ಪಾಲಿಗೆ ಚುನಾವಣೆ ವಿಷಯವಾಗಿವೆ ಎಂಬುದು ಕಾಣಿಸುತ್ತದೆ.

? ನೀವೂ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದಿರಿ?
ನಾನು ನನ್ನ ಕ್ಷೇತ್ರವನ್ನು ಬದಲಾಯಿಸಬೇಕು ಎಂದುಕೊಂಡಿದ್ದೆ. ಆದರೆ, ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ಯೋಚಿಸಿರಲಿಲ್ಲ.
ಅಂತಹ ಉದ್ದೇಶವೇ ನನಗಿರಲಿಲ್ಲ. ಅಯ್ಯೋ... ನಮಗೆ ಒಂದು ಕ್ಷೇತ್ರ ಸಂಭಾಳಿಸುವುದೇ ಕಷ್ಟ. ಅಂತಹದ್ದರಲ್ಲಿ (ನಗು).

? ನಿಮ್ಮ ಕ್ಷೇತ್ರದಲ್ಲಿ ಜನರ ಸ್ಪಂದನೆ ಹೇಗಿದೆ?
ತುಂಬಾ ಚೆನ್ನಾಗಿದೆ. ಕಳೆದ ಬಾರಿ ಸೋಲಿಸಿದ್ದಕ್ಕೆ ಅವರಿಗೆ ಬೇಸರವಿದೆ. ನನ್ನ ಬಗ್ಗೆ ಅನುಕಂಪವಿದೆ. ಜೆಡಿಎಸ್‌ನವರ ಮಾತು ಕೇಳಿ ತಪ್ಪು
ಮಾಡಿದೆವು ಎಂದು ಜನರು ರಿಯಲೈಸ್ ಮಾಡಿಕೊಂಡಿದ್ದಾರೆ. 

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk