ಧಾರವಾಡದಲ್ಲಿ ಗುಪ್ತ ಸಭೆಯೊಂದು ನಡೆದಿದ್ದು, ಬಿಜೆಪಿ ವಿರುದ್ಧ ಲಿಂಗಾಯತ ಹೋರಾಟವನ್ನು ರೂಪಿಸುವ ಬಗ್ಗೆ ಪ್ಲಾನ್ ಮಾಡಲಾಗಿದೆ ಎನ್ನಲಾಗಿದೆ.
ಧಾರವಾಡ(ಡಿ.1): ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕುಲಕರ್ಣಿ ತಲೆದಂಡ ತಪ್ಪಿಸಲು ಹೊಸ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ಈ ಬಗ್ಗೆ ಧಾರವಾಡದಲ್ಲಿ ಗುಪ್ತ ಸಭೆಯೊಂದು ನಡೆದಿದ್ದು, ಬಿಜೆಪಿ ವಿರುದ್ಧ ಲಿಂಗಾಯತ ಹೋರಾಟವನ್ನು ರೂಪಿಸುವ ಬಗ್ಗೆ ಪ್ಲಾನ್ ಮಾಡಲಾಗಿದೆ ಎನ್ನಲಾಗಿದೆ.
ಧಾರವಾಡದ ನೌಕರರ ಭವನದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯಾದ್ಯಂತ ಕುಲಕರ್ಣಿ ರಾಜೀನಾಮೆಗೆ ಆಗ್ರಹಿಸಿ ಕಳೆದ 4 ದಿನಗಳ ಹಿಂದೆ ಬಿಜೆಪಿ ಪ್ರತಿಭಟನೆ ನಡೆಸಿದ್ದು, ಇದರಿಂದ ಬಿಜೆಪಿ ವಿರುದ್ಧ ಹೊಸ ಅಸ್ತ್ರ ಬಳಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
