ವಿದೇಶಕ್ಕೆ ಅಡುಗೆ ಭಟ್ಟರ ಒಯ್ಯುವುದಿಲ್ಲ: ಮೋದಿ

What is Narendra Modis daily schedule
Highlights

ತಾವು ವಿದೇಶಕ್ಕೆ ತೆರಳುವಾಗ ತಮ್ಮೊಂದಿಗೆ ಅಡುಗೆಭಟ್ಟನನ್ನು ಕರೆದೊಯ್ಯುವುದಿಲ್ಲ. ಆತಿಥೇಯರು ಏನು ನೀಡುತ್ತಾರೋ ಅದನ್ನೇ ಸ್ವೀಕರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 4 ದೇಶಗಳ ಪ್ರವಾಸಕ್ಕೂ ಮುನ್ನ ಗಲ್ಫ್ ನ್ಯೂಸ್‌ ಎಕ್ಸ್ಪ್ರೆಸ್‌ ಪತ್ರಿಕೆಗೆ ಇ-ಮೇಲ್‌ ಮೂಲಕ ನೀಡಿರುವ ಸಂದರ್ಶನದಲ್ಲಿ ಈ ಸಂಗತಿ ಹಂಚಿಕೊಂಡಿದ್ದಾರೆ.

ನವದೆಹಲಿ: ತಾವು ವಿದೇಶಕ್ಕೆ ತೆರಳುವಾಗ ತಮ್ಮೊಂದಿಗೆ ಅಡುಗೆಭಟ್ಟನನ್ನು ಕರೆದೊಯ್ಯುವುದಿಲ್ಲ. ಆತಿಥೇಯರು ಏನು ನೀಡುತ್ತಾರೋ ಅದನ್ನೇ ಸ್ವೀಕರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 4 ದೇಶಗಳ ಪ್ರವಾಸಕ್ಕೂ ಮುನ್ನ ಗಲ್ಫ್ ನ್ಯೂಸ್‌ ಎಕ್ಸ್ಪ್ರೆಸ್‌ ಪತ್ರಿಕೆಗೆ ಇ-ಮೇಲ್‌ ಮೂಲಕ ನೀಡಿರುವ ಸಂದರ್ಶನದಲ್ಲಿ ಈ ಸಂಗತಿ ಹಂಚಿಕೊಂಡಿದ್ದಾರೆ.

ರಜೆ ಪಡೆದಾಗ ಅದನ್ನು ಹೇಗೆ ಸಂಭ್ರಮಿಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ, ನಾನು ಮುಖ್ಯಮಂತ್ರಿಯಾಗಿದ್ದಾಗ ಅಥವಾ ಪ್ರಧಾನಿಯಾಗಿ ಒಂದು ದಿನವೂ ರಜೆ ಪಡೆದಿಲ್ಲ. ಭಾರತದೆಲ್ಲೆಡೆ ಸುತ್ತಾಡಿ ಜನರ ಕಷ್ಟ- ಸುಖ ಮತ್ತು ಅವರ ಆಕಾಂಕ್ಷೆಗಳನ್ನು ತಿಳಿಯುವುದೇ ನನ್ನ ಕೆಲಸ. ಇದು ನನ್ನಲ್ಲಿ ನವೋಲ್ಲಾಸ ತುಂಬುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ, ‘ನಾನು ದಿನವನ್ನು ಯೋಗದ ಮೂಲಕ ಆರಂಭಿಸುತ್ತೇನೆ. ಸುದ್ದಿ ಪತ್ರಿಕೆಗಳನ್ನು ಓದುತ್ತೇನೆ. ನರೇಂದ್ರ ಮೋದಿ ಆ್ಯಪ್‌ ಮೂಲಕ ಜನರು ಹಂಚಿಕೊಂಡಿರುವ ಪ್ರತಿಕ್ರಿಯೆಗಳನ್ನು ಓದುತ್ತೇನೆ. ರಾತ್ರಿ ಮಲಗುವುದಕ್ಕೂ ಮುನ್ನ ಆ ದಿನ ನನಗೆ ಕಳುಹಿಸಿದ ಕಡತಗಳನ್ನು ಓದುತ್ತೇನೆ. ನಾಳಿನ ಕಾರ್ಯಕ್ರಮಗಳು ಮತ್ತು ಸಭೆಗಳಿಗೆ ಪೂರ್ವತಯಾರಿ ಮಾಡಿಕೊಳ್ಳುತ್ತೇನೆ’ ಎಂದು ತಮ್ಮ ದಿನಚರಿಯನ್ನು ವಿವರಿಸಿದ್ದಾರೆ.

ಮಲಗಿದ ಕೆಲವೇ ನಿಮಿಷದಲ್ಲೇ ನಿದ್ದೆ:  ‘ಹಾಸಿಗೆಯ ಮೇಲೆ ಮಲಗಿದ ಕೆಲವೇ ನಿಮಿಷದಲ್ಲೇ ನಾನು ನಿದ್ದೆಗೆ ಜಾರುತ್ತೇನೆ. ಯಾವುದೇ ಚಿಂತೆಯನ್ನು ನನ್ನಲ್ಲಿ ಇಟ್ಟುಕೊಂಡಿರುವುದಿಲ್ಲ. ಪ್ರತಿದಿನವೂ ಉಲ್ಲಾಸದಿಂದ ಎದ್ದು ದಿನವನ್ನು ಸ್ವಾಗತಿಸುತ್ತೇನೆ. ನಾನು ದಿನದಲ್ಲಿ ನಾಲ್ಕರಿಂದ ಆರು ತಾಸು ನಿದ್ದೆ ಮಾಡುತ್ತೇನೆ ಎಂದು ಹೇಳಿದ್ದಾರೆ.

loader