ಪಂಜಾಬ್ ಸಚಿವ ಸಂಪುಟದಲ್ಲಿ ಸಚಿವರಾಗಿ ಆಯ್ಕೆಯಾದ ಬಳಿಕ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಖ್ಯಾತ ಟಿವಿ ಶೋ ಒಂದರಲ್ಲಿ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಇದನ್ನು ನಾನು ಲಾಭದ ಉದ್ದೇಶಕ್ಕಾಗಿ ಮಾಡುತ್ತಿಲ್ಲವೆಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ನವದೆಹಲಿ (ಮಾ.21): ಪಂಜಾಬ್ ಸಚಿವ ಸಂಪುಟದಲ್ಲಿ ಸಚಿವರಾಗಿ ಆಯ್ಕೆಯಾದ ಬಳಿಕ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಖ್ಯಾತ ಟಿವಿ ಶೋ ಒಂದರಲ್ಲಿ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಇದನ್ನು ನಾನು ಲಾಭದ ಉದ್ದೇಶಕ್ಕಾಗಿ ಮಾಡುತ್ತಿಲ್ಲವೆಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಕಚೇರಿ ಕೆಲಸ ಮಾಡುತ್ತೇನೆ. ಸಂಜೆ 6 ರ ನಂತರ ಟಿವಿ ಶೋನಲ್ಲಿ ಭಾಗವಹಿಸುತ್ತೇನೆ. ಇದು ಯಾರು ಪ್ರಶ್ನಿಸುವಂತಿಲ್ಲವೆಂದು ಸಿಧು ಹೇಳಿದ್ದಾರೆ.

ಮಂತ್ರಿಯೊಬ್ಬರು ಟಿವಿ ಶೋ ನಡೆಸಿಕೊಡಬಹುದಾ ಎನ್ನುವುದರ ಬಗ್ಗೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅಡ್ವೋಕೇಟ್ ಜನರಲ್ ಅತುಲ್ ನಂದಾರನ್ನು ಸಂಪರ್ಕಿಸಿದ್ದಾರೆ. ಕಡತಗಳು ನನ್ನ ಕೈಸೇರಿದ ಬಳಿಕ ನಾನು ಉತ್ತರಿಸುತ್ತೇನೆ ಎಂದು ನಂದಾ ಹೇಳಿದ್ದಾರೆ.

ಈ ವಿಚಾರದ ಬಗ್ಗೆ ಸಿಧು ಪತ್ನಿ ನವಜೋತ್ ಕೌರ್ ಸಿಧು ಪತಿಗೆ ಬೆಂಬಲಿಸುತ್ತಾ, ಶತ್ರುಘ್ನ ಸಿನ್ಹಾ ಸಂಸದರಾಗಿಯೂ ಕೂಡಾ ಚಿತ್ರಗಳನ್ನು ಮಾಡಿದ್ದಾರೆ. ಅದೇ ರೀತಿ ಕಿರಣ್ ಖೇರ್ ಕೂಡಾ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಒಂದು ವೇಳೆ ಕಾನೂನಿನ ಆಕ್ಷೇಪ ವ್ಯಕ್ತವಾದರೆ ಸಿಧು ಟಿವಿ ಶೋವನ್ನು ಕೈಬಿಡುತ್ತಾರೆ ಎಂದಿದ್ದಾರೆ.