ನೀವು ಬಳಸಿ ಬಿಸಾಡಿದ ಹೊಟೇಲ್ ಸೋಪ್ ಗತಿ ಏನಾಗುತ್ತೆ?ಚೆಕ್ ಔಟ್ ಆದ ಬಳಿಕ ಸೋಪ್ ನ್ನು ಏನು ಮಾಡುತ್ತಾರೆ?ಏನಿದು ‘ಕ್ಲೀನ್ ದ ವರ್ಲ್ಡ್’ ಅಭಿಯಾನ?ಜಗತ್ತಿನಾದ್ಯಂತ ಸಂಗ್ರಹವಾಗುವ ಹೊಟೇಲ್ ಸೋಪ್ ಎಷ್ಟು?

ಬೆಂಗಳೂರು(ಜೂ.13): ಸಾಮಾನ್ಯವಾಗಿ ನಾವೆಲ್ಲಾ ಹೊಟೇಲ್ ನಲ್ಲಿ ಲಾಡ್ಜ್ ಬುಕ್ ಮಾಡಿರುತ್ತೇವೆ. ನಿರ್ದಿಷ್ಟ ದಿನಕ್ಕಾಗಿ ಕೋಣೆ ಬುಕ್ ಮಾಡಿದ ಕೂಡಲೇ ಹೊಟೇಲ್ ಸಿಬ್ಬಂದಿ ಮೊದಲು ಕೊಡುವುದೇ ಒಂದು ಸೋಪ್ ಮತ್ತು ಟವಲ್ ಕಿಟ್‌ನ್ನು. ಆದರೆ ಒಂದೆರಡು ದಿನಗಳ ಬಳಿಕ ಹೊಟೇಲ್ ಬಿಟ್ಟಾಗ ನಾವು ಆ ಸೋಪ್‌ನ್ನೂ ಕೂಡ ಅಲ್ಲೇ ಬಿಟ್ಟು ಬಂದಿರುತ್ತೇವೆ. ಹಾಗೆ ಬಿಟ್ಟು ಬಂದ ಸೋಪ್‌ನ್ನು ಏನು ಮಾಡಲಾಗುತ್ತದೆ ಎಂದು ತಿಳಿಯುವ ಕುತೂಹಲ ಕೂಡ ಯಾರಿಗೂ ಇರುವುದಿಲ್ಲ.

ಆದರೆ ಅಮೆರಿಕದ ಚಾರಿಟಿ ಸಂಸ್ಥೆಯೊಂದು ಹೊಟೇಲ್ ಗಳಲ್ಲಿ ಬಳಸಿ ಬಿಸಾಕಿದ ಸೋಪ್‌ನ್ನು ಪಡೆದು, ಅದನ್ನು ಮತ್ತೆ ಮರುಬಳಕೆಗೆ ಯೋಗ್ಯ ವಸ್ತುವನ್ನಾಗಿ ಮಾಡುತ್ತಿದೆ. ಓರ್ಲ್ಯಾಂಡೋ ಮೂಲದ ‘ಕ್ಲೀನ್ ದ ವರ್ಲ್ಡ್’ ಎಂಬ ಚಾರಿಟಿ ಸಂಸ್ಥೆ ಜಗತ್ತಿನಾದ್ಯಂತ ಹೊಟೇಲ್‌ಗಳಲ್ಲಿ ಬಳಸಿದ ಸೋಪ್‌ಗಳನ್ನು ಸಂಗ್ರಹಿಸಿ ಅದನ್ನು ಮರುಬಳಕೆಗೆ ಸಿದ್ದ ಮಾಡುತ್ತಿದೆ. ಅಮೆರಿಕ ಒಂದರಲ್ಲೇ ದಿನವೊಂದಕ್ಕೆ 1 ಮಿಲಿಯನ್ ಮತ್ತು ಜಗತ್ತಿನಾದ್ಯಂತ 5 ಮಿಲಿಯನ್ ಸೋಪ್‌ಗಳನ್ನು ಬಳಸಿ ಬಿಸಾಡಲಾಗುತ್ತದೆ.

‘ಕ್ಲೀನ್ ದ ವರ್ಲ್ಡ್’ ಚಾರಿಟಿ ಸಂಸ್ಥೆಯ ಮಾಲೀಕ ಶಾನ್ ಸೈಪ್ಲರ್ ಈ ಕುರಿತು ಮಾತನಾಡಿದ್ದು, ಜಗತ್ತಿನಾದ್ಯಂತ ಇರುವ ಹೊಟೇಲ್‌ಗಳಿಂದ ಬಳಸಿ ಬಿಸಾಡಿದ ಸೋಪ್ ಗಳನ್ನು ಸಂಗ್ರಹಿಸಿ ಅದರನ್ನು ಮರು ಬಳಕೆಗೆ ಯೋಗ್ಯವನ್ನಾಗಿ ಮಾಡವುದೇ ಕಂಪನಿ ಉದ್ದೇಶ ಎಂದು ತಿಳಿಸಿದರು. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ ಜಗತ್ತಿನಾದ್ಯಂತ ದಿನವೊಂದಕ್ಕೆ ಸಾವಿರ ಮಕ್ಕಳು ನೈರ್ಮಲ್ಯ ಸಂಬಂಧಿ ಕಾರಣಕ್ಕೆ ಮರಣ ಹೊಂದುತ್ತಿದ್ದಾರೆ. ಈ ಸೋಪ್‌ಗಳನ್ನು ವಿಶ್ವದ ಎಲ್ಲೆಡೆ ಬಡ ಮಕ್ಕಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಸೈಪ್ಲರ್ ಹೇಳಿದರು.

Scroll to load tweet…

ಈಗಾಗಲೇ ಕ್ಲೀನ್ ದ ವರ್ಲ್ಡ್ ಚಾರಿಟಿ ಸಂಸ್ಥೆ ಅಮೆರಿಕ, ಭಾರತ, ಹಾಂಗ್ ಕಾಂಗ್ ಸೇರಿದಂತೆ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿದ್ದು, ಇದುವರೆಗೂ ಸುಮಾರು 7 ಮಿಲಿಯನ್ ಸೋಪ್‌ಗಳನ್ನು ತಯಾರಿಸಲಾಗಿದೆ ಎಂದು ಸೈಪ್ಲರ್ ಮಾಹಿತಿ ನೀಡಿದ್ದಾರೆ.