ಮಾರಾಟವಾಗದೇ ಉಳಿದಿರುವ ವಾಹನಗಳನ್ನು ವಾಪಾಸು ತೆಗೆದುಕೊಲ್ಳುವಂತೆ ಶೋರೂಂ ಮಾಲಕರು ಕಂಪನಿಗಳನ್ನು ಕೇಳಿಕೊಂಡಿವೆ. ಕಂಪನಿಗಳ ಮುಂದೆ ಎರಡು ಆಯ್ಕೆಗಳಿವೆ.

ಇಂದಿನಿಂದ ಬಿಎಸ್-3 ಮಾದರಿಯ ವಾಹನಗಳು ಮಾರಾಟ ಮಾಡುವ ಹಾಗಿಲ್ಲ. ಬಹಳಷ್ಟು ವಾಹನ ಶೋರೂಂಗಳು ಭರ್ಜರಿ ರಿಯಾಯಿತಿ ನೀಡಿ ಆ ಮಾದರಿ ವಾಹನಗಳನ್ನು ಕಳೆದ ರಡು ದಿನಗಳಲ್ಲಿ ಮಾರಾಟ ಮಾಡಿವೆ. ಅದಾಗ್ಯೂ ಉಳಿದಿರುವ ಬಿಎಸ್-3 ಮಾದರಿಯ ವಾಹನಗಳನ್ನು ಏನು ಮಾಡಬಹುದು?

ಮಾರಾಟವಾಗದೇ ಉಳಿದಿರುವ ವಾಹನಗಳನ್ನು ವಾಪಾಸು ತೆಗೆದುಕೊಲ್ಳುವಂತೆ ಶೋರೂಂ ಮಾಲಕರು ಕಂಪನಿಗಳನ್ನು ಕೇಳಿಕೊಂಡಿವೆ. ಕಂಪನಿಗಳ ಮುಂದೆ ಎರಡು ಆಯ್ಕೆಗಳಿವೆ.

ಒಂದು, ಈಗಲೂ ಮಾನದಂಡ ಪಾಲಿಸುವ ದೇಶಗಳಿಗೆ ಆ ಬಿಎಸ್-3 ವಾಹನಗಳನ್ನು ರಫ್ತು ಮಾಡಬಹುದು.

ಎರಡನೆಯದಾಗಿ, ಮಾರಾಟವಾಗದೆ ಉಳಿದಿರುವ ವಾಹನಗಳನ್ನು ಬಿಎಸ್-4 ಮಾನದಂಡಕ್ಕನುಸಾರವಾಗಿ ಮೇಲ್ದರ್ಜೆಗೇರಿಸಬಹುದಾಗಿದೆ. ಆದರೆ ಅಟೋಮೊಬೈಲ್ ತಜ್ಞರ ಪ್ರಕಾರ ಅದು ಬಹಳ ಕಠಿಣ ಕಾರ್ಯವಾಗಿದೆಯಲ್ಲದೇ, ಬಹಳ ದುಬಾರಿಯೂ ಆಗಲಿದೆ.

(ಸಾಂದರ್ಭಿಕ ಚಿತ್ರ)