ಡಿಕೆಶಿ ಮನೆಯಿಂದ ಹಲವು ದಾಖಲೆಗಳನ್ನು ಐಟಿಯವರು ವಶಕ್ಕೆ ತೆಗೆದುಕೊಂಡಿರಬಹುದು. ಆದರೆ, ಡಿಕೆಶಿ ಮೇಲೆ ಆರೋಪ ದಾಖಲಿಸಲು ಪ್ರತಿಯೊಂದಕ್ಕೂ ಸಾಕ್ಷ್ಯ ಬೇಕಾಗುತ್ತದೆ. ಆ ಆರೋಪಗಳನ್ನು ಪ್ರೂವ್ ಮಾಡುವುದು ಬಹಳ ಕಷ್ಟ. ಡಿಕೆಶಿಗೆ ಕಾನೂನಾತ್ಮಕವಾಗಿ ಹಲವು ದಾರಿಗಳಿವೆ. ಅವರು ಬಚಾವ್ ಆಗುವ ಸಾಧ್ಯತೆಯೇ ಹೆಚ್ಚು ಎಂದು ತಜ್ಞರೂ ಆಗಿರುವ ಮೋಹನ್ ಕುಮಾರ್ ತಿಳಿಸುತ್ತಾರೆ.
ಬೆಂಗಳೂರು(ಆ. 05): ನಾಲ್ಕು ದಿನಗಳ ಹೈಡ್ರಾಮಾ ಅಂತ್ಯಗೊಂಡಿದೆ. ಡಿಕೆಶಿ ಮೇಲಿನ ಐಟಿ ರೇಡ್ ಮುಗಿದಿದೆ. ಒಂದಿಷ್ಟೂ ಉದ್ವಿಗ್ನತೆ ಇಲ್ಲದೇ ಡಿಕೆಶಿ ತಮ್ಮ ಮನೆಯಿಂದ ಹೊರಬಂದಿದ್ದಾರೆ. ಇಷ್ಟದೇವರ ದರ್ಶನ ಮಾಡಿ ಇದೀಗ ರಾಜಕೀಯ ಚದುರಂಗದಾಟದಲ್ಲಿ ತಮ್ಮ ಮುಂದಿನ ನಡೆ ಇಡಲು ಯೋಜಿಸಿದ್ದಾರೆ. ಹಾಗಾದರೆ, 4 ದಿನಗಳ ಕಾಲ ಸತತವಾಗಿ ಆದಾಯ ತೆರಿಗೆ ಇಲಾಖೆಯವರು ರೇಡ್ ಮಾಡಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದು ವ್ಯರ್ಥವಾಗಿ ಹೋಗುತ್ತಾ? ಸುವರ್ಣನ್ಯೂಸ್ ಜೊತೆ ಮಾತನಾಡಿದ ಖ್ಯಾತ ಲೆಕ್ಕಪರಿಶೋಧಕರಾದ ಮೋಹನ್ ಕುಮಾರ್ ಕೂಡ ಇದೇ ಭಾವನೆ ವ್ಯಕ್ತಪಡಿಸಿದ್ದಾರೆ. ನಾಲ್ಕು ದಿನಗಳ ಕಾಲ ನಡೆದ ರೇಡ್ ಮತ್ತು ಅಧಿಕಾರಿಗಳ ಪ್ರಶ್ನೆಗಳನ್ನು ಎದುರಿಸುವಷ್ಟರಲ್ಲಿ ಯಾವುದೇ ವ್ಯಕ್ತಿಯಾದರೂ ಮಾನಸಿಕವಾಗಿ ಕುಸಿದುಹೋಗುತ್ತಾರೆ. ಆದರೆ, ಡಿಕೆಶಿಯವರ ಆತ್ಮವಿಶ್ವಾಸ ನೋಡಿದರೆ ಅವರು ಬಹಳ ಧೈರ್ಯವಾಗಿರುವುದು ಗೊತ್ತಾಗುತ್ತದೆ ಎಂದು ಮೋಹನ್ ಕುಮಾರ್ ಹೇಳುತ್ತಾರೆ.