ಬೆಂಗಳೂರು :  ವೆಸ್ಟ್‌ಸೈಡ್ ಕಂಪೆನಿಯ ಮುಂಗಾರು ಋತುವಿನ ಶೃಂಗಾರ ಸಾಧನಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ‘ಟ್ರೋಪಿಕಲ್ ದಿವಾ ಕಲೆಕ್ಷನ್’ ಹೆಸರಿನ ಈ ಸಂಗ್ರಹದಲ್ಲಿ ನವೀನ ಶೇಡ್‌ಗಳ ಸೌಂದರ್ಯ ಉತ್ಪನ್ನಗಳಿವೆ. ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ಲಾದಲಿಪ್‌ಸ್ಟಿಕ್‌ಗಳಿವೆ. ಮ್ಯಾಟ್ ಫಿನಿಶ್ ಹೊಂದಿರುವ ತುಟಿಯ ರಂಗುಗಳು ಆಧುನಿಕ ವರ್ಣ ವಿನ್ಯಾಸ ಹೊಂದಿವೆ. 

ಋತು ಹಾಗೂ ಮನಸ್ಥಿತಿಗೆ ಅನುಗುಣವಾದ ಬಣ್ಣಗಳನ್ನು ಹಚ್ಚಿಕೊಂಡು ಖುಷಿ ಪಡಬಹುದು. ಕಿತ್ತಳೆ, ನೀಲಿ, ಹಸಿರು ಹಾಗೂ ಪ್ರಕೃತಿಯ ಸಹಜ ಬಣ್ಣಗಳ ನೇಲ್ ಪೆಯಿಂಟ್‌ಗಳು ಈ ಸಂಗ್ರಹದಲ್ಲಿವೆ. ಕಣ್ಣಿನ ಅಂದ ಹೆಚ್ಚಿಸುವ ಐ ಲೈನರ್‌ಗಳಿವೆ. ಕಂದು, ಪಿಂಕ್ ಮೊದಲಾದ ಬಣ್ಣಗಳಲ್ಲಿ ಲಭ್ಯವಿವೆ.3ಡಿ ವರ್ಶನ್‌ನ ಲಿಪ್ ಗ್ಲಾಸ್ ಈ ಸಂಗ್ರಹದ ಇನ್ನೊಂದು ವಿಶೇಷ. ತುಟಿ ತಾಜಾ ಮೃದುವಾಗಿ ಕಾಣುವಂತೆ ಮಾಡುವ ಇವು ಬೋಲ್ಡ್ ಲುಕ್ ನೀಡುತ್ತವೆ.

ಬೆಲೆ: ಲಿಪ್‌ಸ್ಟಿಕ್- 225 ರು. , ನೇಲ್
ಪೆಯಿಂಟ್- 95 ರು.
ಐ ಲೈನರ್- 195, ಲಿಪ್‌ಗ್ಲಾಸ್- 225 ರು.