ಕೋಲ್ಕತ್ತಾ(ಜ.06): 2050ರ ಒಳಗಾಗಿ ಮಹಾರಾಷ್ಟ್ರದಿಂದ ಒಬ್ಬರಾದರೂ ಪ್ರಧಾನಮಂತ್ರಿ ಸ್ಥಾನ ಅಲಂಕರಿಸುತ್ತಾರೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ನಿನ್ನೆಯಷ್ಟೇ ಹೇಳಿಕೆ ನೀಡಿದ್ದರು.

ಫಡ್ನವೀಸ್ ಹೇಳಿಕೆ ದೇಶದಲ್ಲಿ ಹೊಸದೊಂದು ಚರ್ಚೆಯನ್ನು ಹುಟ್ಟು ಹಾಕಿದ್ದು, ಪ್ರಧಾನಮಂತ್ರಿ ಪಟ್ಟಕ್ಕೆ ಯಾವ ರಾಜ್ಯದ ವ್ಯಕ್ತಿ ಸೂಕ್ತ ಎಂಬ ಚರ್ಚೆಗೆ ನಾಂದಿ ಹಾಡಿದೆ. ಒಂದೊಂದು ರಾಜ್ಯದ ನಾಯಕರು ತಮ್ಮ ತಮ್ಮ ರಾಜ್ಯದ ನಾಯಕರೇ ಪ್ರಧಾನಮಂತ್ರಿ ಪಟ್ಟಕ್ಕೆ ಅರ್ಹ ವ್ಯಕ್ತಿ ಎಂದು ವಾದ ಮಂಡಿಸುತ್ತಿದ್ದಾರೆ.

ಆದರೆ ಈ ಚರ್ಚೆ ಆಡಳಿತಾರೂಢ ಬಿಜೆಪಿಗೆ ತಲೆನೋವು ತಂದಿಡುವ ಸಾಧ್ಯತೆ ದಟ್ಟವಾಗಿದೆ. ಕಾರಣ ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿ ಅಥವಾ ತಮ್ಮ ಪಕ್ಷದ ನಾಯಕರ ಹೆಸರನ್ನು ಬಿಟ್ಟು ಬೇರೆ ಪಕ್ಷದ ನಾಯಕರ ಹೆಸರನ್ನು ಉಲ್ಲೇಖಿಸುತ್ತಿದ್ದಾರೆ.

ಅದರಂತೆ ದೇಶದ ಪ್ರಧಾನಮಂತ್ರಿ ಸ್ಥಾನಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉತ್ತಮ ಆಯ್ಕೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷಣ್ ಹೇಳಿದ್ದಾರೆ. 

ಮಮತಾ ಬ್ಯಾನರ್ಜಿ 64ನೇ ಜನ್ಮ ದಿನದಂದು ಶುಭಾಶಯ ತಿಳಿಸಿರುವ ದಿಲೀಪ್, ಪ್ರಧಾನಮಂತ್ರಿ ಆಯ್ಕೆಯನ್ನು ಪಶ್ಚಿಮ ಬಂಗಾಳದಿಂದ ಮಾಡುವುದಾದರೆ ಮಮತಾ ಅವರಿಗೆ ಉತ್ತಮ ಅವಕಾಶವಿದೆ ಎಂದು ಹೇಳಿದ್ದಾರೆ. 

ಮಾಜಿ ಮುಖ್ಯಮಂತ್ರಿ, ದಿವಂಗತ ಜ್ಯೋತಿ ಬಸು ಕೂಡ ಪಶ್ಚಿಮ ಬಂಗಾಳದಿಂದ ಮೊದಲ ಪ್ರಧಾನಮಂತ್ರಿಯಾಗಬಹುದಿತ್ತು. ಆದರೆ, ಅದಕ್ಕೆ ಅವರ ಪಕ್ಷವೇ ಬಿಡಲಿಲ್ಲ. ಈಗ ಪಶ್ಚಿಮ ಬಂಗಾಳದಿಂದ ಯಾರನ್ನಾದರೂ ಆರಿಸಿದರೆ ಮಮತಾ ಅವರೇ ಮೊದಲ ಆಯ್ಕೆಯಾಗಲಿದ್ದಾರೆಂದು ದಿಲೀಪ್ ತಿಳಿಸಿದ್ದಾರೆ.

ಭವಿಷ್ಯದಲ್ಲಿ ಮೋದಿ ಪ್ರಧಾನಿ ಅಭ್ಯರ್ಥಿ ಅಲ್ಲ ಎಂದ ಫಡ್ನವೀಸ್!