ಮಹಾರಾಷ್ಟ್ರದ ವ್ಯಕ್ತಿ ಪ್ರಧಾನಿಯಾಗ್ತಾರೆ ಎಂದ ದೇವೇಂದ್ ಫಡ್ನವೀಸ್| ‘ಮಹಾರಾಷ್ಟ್ರದಿಂದ ಒಬ್ಬರಾದರೂ ದೇಶದ ಪ್ರಧಾನಿಯಾಗಿ ಆಳ್ವಿಕೆ ನಡೆಸುತ್ತಾರೆ’|2050ರಲ್ಲಿ ದೇಶಕ್ಕೆ ಮಹಾರಾಷ್ಟ್ರ ಪ್ರಧಾನಮಂತ್ರಿ ಎಂದ ಫಡ್ನವೀಸ್| ‘ನಾವು ಮಹಾರಾಷ್ಟ್ರಿಗರು ನಮಗೆ ದೇಶ ಆಳುವ ಸಾಮರ್ಥ್ಯ ಇದೆ’|
ನಾಗ್ಪುರ್(ಜ.05): 2050ರಲ್ಲಿ ಮಹಾರಾಷ್ಟ್ರದಿಂದ ಒಬ್ಬರಿಗಿಂತ ಹೆಚ್ಚು ಮಂದಿ ದೇಶದ ಪ್ರಧಾನಿಯಾಗಿ ಆಳ್ವಿಕೆ ನಡೆಸುತ್ತಾರೆ ಎಂದು ಮುಖ್ಯಮಂತ್ರಿ ದೇವೇಂದ್ ಫಡ್ನವೀಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಗ್ಪುರ್‌ದಲ್ಲಿ ನಡೆದ 16ನೇ ಜಾಗತಿಕ ಮರಾಠಿ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಯಾರಾದರೂ ನಿಜವಾದ ಅರ್ಥದಲ್ಲಿ ಭಾರತವನ್ನು ಆಳುತ್ತಾರೆ ಎಂದಾದರೇ ಅದರಲ್ಲಿ ಬಬ್ಬರಿಗಿಂತ ಹೆಚ್ಚುು ಮಹಾರಾಷ್ಟ್ರದವರು ಇರುತ್ತಾರೆ ಎಂದು ನುಡಿದರು.
ನಾವು ಮಹಾರಾಷ್ಟ್ರಿಗರು ನಮಗೆ ದೇಶ ಆಳುವ ಸಾಮರ್ಥ್ಯ ಇದೆ ಎಂದ ಫಡ್ನವೀಸ್, ಭಾರತದಲ್ಲಿ ಮಹಾರಾಷ್ಟ್ರದವರೊಬ್ಬರು ಪ್ರಧಾನಿಯಾಗುವ ಅವಕಾಶವಿದೆ ಎಂದು ಹೇಳಿದರು.
ಇತಿಹಾಸದಲ್ಲಿ ಹಲವು ಮಹಾರಾಷ್ಟ್ರಿಗರು ವಿವಿಧ ಕಾಲಘಟ್ಟದಲ್ಲಿ ದೇಶದಲ್ಲಿ ಆಳ್ವಿಕೆ ನಡೆಸಿರುವ ಉದಾಹರಣೆಯಿದೆ ಎಂದು ಫಡ್ನವೀಸ್ ಈ ವೇಳೆ ಹೇಳಿದರು.
