ಜೀವನದ ಖಾಸಗಿ ವಿಚಾರಗಳಿಂದ ಸಚಿವರೋರ್ವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳದ ವಸತಿ ಖಾತೆ ಸಚಿವ ಸೋವನ್ ಚಟರ್ಜಿ ತಮ್ಮ ಸ್ಥಾನವನ್ನು ತೊರೆದಿದ್ದಾರೆ. 

ಕೋಲ್ಕತಾ:  ಕೋಲ್ಕತಾ ಮುನಿಸಿಪಲ್ ಕಾರ್ಪೊರೇಷನ್ ಮೇಯರ್ ಹಾಗೂ ಪಶ್ಚಿಮ ಬಂಗಾಳ ವಸತಿ ಖಾತೆ ಸಚಿವ ಸೋವನ್ ಚಟರ್ಜಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗಿನ ಮನಸ್ತಾಪವೇ ಈ ರಾಜೀನಾಮೆಗೆ ಕಾರಣ ಎನ್ನಲಾಗಿದೆ. 

ಈಗಾಗಲೇ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದು, ಅದಕ್ಕೆ ಅನುಮೋದನೆಯೂ ಕೂಡ ದೊರಕಿದೆ ಎನ್ನಲಾಗಿದೆ. 

ಇನ್ನು ಇದೇ ವೇಳೆ ಮೇಯರ್ ಸ್ಥಾನಕ್ಕೂ ಕೂಡ ರಾಜೀನಾಮೆ ನೀಡಿದ್ದು ಶೀಘ್ರದಲ್ಲೇ ನೂತನ ಮೇಯರ್ ಆಯ್ಕೆಯೂ ಕೂಡ ನಡೆಯಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

56 ವರ್ಷದ ಸೋವನ್ ಚಟರ್ಜಿ ಅವರ ಖಾಸಗಿ ಜೀವನದ ಕೆಲವು ಘಟನೆಗಳಿಂದ ಅವರ ಖಾತೆ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಈ ನಿಟ್ಟಿನಲ್ಲಿ ಅವರು ತಮ್ಮ ಸ್ಥಾನವನ್ನು ತೊರೆದಿದ್ದಾರೆ ಸೋವನ್ ರಾಜೀನಾಮೆ ಸಂಬಂಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.