ಪೊಲೀಸ್ ಠಾಣೆಯಲ್ಲಿ ಯುವಕನೊಬ್ಬನಿಗೆ ಪಶ್ಚಿಮ ಬಂಗಾಳದ ಜಿಲ್ಲಾಧಿಕಾರಿ ಹಿಗ್ಗಾಮುಗ್ಗಾ ಥಳಿಸುವ ವಿಡಿಯೋ ವೈರಲ್ ಆಗಿದೆ.
ಕೋಲ್ಕತ್ತಾ, [ಜ.07]:ಪೊಲೀಸ್ ಠಾಣೆಯಲ್ಲಿ ಯುವಕನೊಬ್ಬನಿಗೆ ಪಶ್ಚಿಮ ಬಂಗಾಳದ ಜಿಲ್ಲಾಧಿಕಾರಿ ಹಿಗ್ಗಾಮುಗ್ಗಾ ಥಳಿಸುವ ವಿಡಿಯೋ ವೈರಲ್ ಆಗಿದೆ.
ಅಲಿಪುರ್ದ್ವಾರ್ ಜಿಲ್ಲಾಧಿಕಾರಿ ನಿಖಿಲ್ ನಿರ್ಮಾಲ್ ಅವರ ಪತ್ನಿಗೆ ವಿನೋದ್ ಕುಮಾರ್ ಸರ್ಕಾರ್ ಎನ್ನುವ ಯುವಕನೊರ್ವ ಫೇಸ್ಬುಕ್ ಮೂಲಕ ಅಶ್ಲೀಲ ಮೆಸೇಜ್ಗಳನ್ನು ಕಳುಹಿಸಿ ಪೀಡಿಸುತ್ತಿದ್ದನಂತೆ.
ಈ ನಿಟ್ಟಿನಲ್ಲಿ ಯುವಕನನ್ನು ಪೊಲೀಸ್ ಠಾಣೆಗೆ ಕರೆಸಿದ ಜಿಲ್ಲಾಧಿಕಾರಿ, ಯುವಕನ ಕೊರಳಪಟ್ಟಿ ಹಿಡಿದುಕೊಂಡು ಮನಬಂದಂತೆ ಥಳಿಸಿದ್ದಾರೆ. ಬಳಿಕ ಯುವಕನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ.
