ಕೋಲ್ಕತಾ: ಪಶ್ಚಿಮ ಬಂಗಾಳ ಸರ್ಕಾರ ರೈತರಿಗೆ ಹೊಸ ವರ್ಷದ ಗಿಫ್ಟ್ ನೀಡಿದೆ. ರಾಜ್ಯದಲ್ಲಿ 18 - 60 ರ ವಯೋಮಾನದ ಯಾವುದೇ ರೈತ ಸಾವಿಗೀಡಾದರೆ ಆತನ ಕುಟುಂಬಕ್ಕೆ ಕೃಷಿ ಕಿಸಾನ್ ಬಂಧು ಯೋಜನೆಯ ಅಡಿಯಲ್ಲಿ ಸರ್ಕಾರ 8 ಲಕ್ಷ ರು. ನೀಡಲಿದೆ. 

ಅಲ್ಲದೇ ಒಂದು ಎಕರೆಯಲ್ಲಿ ಒಂದು ಬೆಳೆ ಬೆಳೆಯಲು ವರ್ಷಕ್ಕೆ ಎರಡು ಬಾರಿ 2,500 ರು. ನೀಡಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಪ್ರಕಟಿಸಿದ್ದಾರೆ.

ಹೊಸ ವರ್ಷದ  ಮೊದಲ ದಿನದಿಂದಲೇ ಈ ಯೋಜನೆ ಆರಂಭವಾಗಲಿದೆ ಎಂದು ಮಮತಾ ಪ್ರಕಟಿಸಿದ್ದಾರೆ.