Asianet Suvarna News Asianet Suvarna News

ಕರೆದರಷ್ಟೇ ಆದೀತೆ ಗೋಮಾತೆ ಎಂದು?: ಒದ್ದಾಡಿದ್ದಾಳೆ 52 ಕೆಜಿ ಪ್ಲ್ಯಾಸ್ಟಿಕ್ ತಿಂದು!

ಗೋವಿನ ಹೊಟ್ಟೆಯಲ್ಲಿತ್ತು 52 ಕೆಜಿ ಪ್ಲಾಸ್ಟಿಕ್| ಆಪರೇಷನ್ ನಡೆಸಿದ ವೈದ್ಯರಿಗೆ ಶಾಕ್| 5 ಗಂಟೆ ನಡೆದ ಆಪರೇಷನ್, ನಿಟ್ಟುಸಿರು ಬಿಟ್ಟ ಮಾಲೀಕ| ಆಪರೇಷನ್ ನಡೆಸಿದ ತಮಿಳುನಾಡು ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ವೈದ್ಯರು

Tamil Nadu veterinary university surgeons remove 52 kg of plastic from cow in Chennai
Author
Bangalore, First Published Oct 20, 2019, 4:00 PM IST

ಚೆನ್ನೈ[ಅ.20]: ತಮಿಳುನಾಡು ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ವೈದ್ಯರು ಗೋವಿನ ಶಸ್ತ್ರ ಚಿಕಿತ್ಸೆ ನಡೆಸಿದ್ದಾಋಎ. ಸತತ 5 ಗಂಟೆಗಳ ಈ ಶಸ್ತ್ರಚಿಕಿತ್ಸೆಯಲ್ಲಿ ವೈದ್ಯರು ಗೋವಿನ ಹೊಟ್ಟೆಯಿಂದ ಬರೋಬ್ಬರಿ 52 ಕೆಜಿ ಪ್ಲಾಸ್ಟಿಕ್ ಹೊರ ತೆಗೆದಿದ್ದಾರೆ.

ಹೊಟ್ಟೆಯಲ್ಲಿ ಪ್ಲಾಸ್ಟಿಕ್ ತುಂಬಿಕೊಂಡಿದ್ದ ಕಾರಣದಿಂದ ನೋವು ಅನುಭವಿಸುತ್ತಿದ್ದ ಈ ಮೂಕ ಪ್ರಾಣಿ ಕಳೆದ ಹಲವಾರು ದಿನಗಳಿಂದ ಹೊಟ್ಟೆಗೆ ಹೊಡೆದುಕೊಳ್ಳುತ್ತಿತ್ತು ಎಂದು ವರದಿಯೊಂದು ಉಲ್ಲೇಖಿಸಿದೆ. ಇಷ್ಟೇ ಅಲ್ಲದೇ ಈ ಗೋವು ನೀಡುತ್ತಿದ್ದ ಹಾಲಿನ ಪ್ರಮಾಣವೂ ಕಡಿಮೆಯಾಗಿತ್ತು. ಅಕ್ಟೋಬರ್ 18ರಂದು 11 ಗಂಟೆಗೆ ಆರಂಭವಾದ ಆಪರೇಷನ್, ಸಂಜೆ 04.30ಕ್ಕೆ ಮುಗಿದಿದೆ. ಅಂದರೆ ಒಟ್ಟು 5 ಗಂಟೆ 30 ನಿಮಿಷಗಳ ಕಾಲ ಈ ಶಸ್ತ್ರ ಚಿಕಿತ್ಸೆ ನಡೆದಿದೆ.

ಸೂಜಿಗಳೂ ಪತ್ತೆ

ಡಾ. ಎ. ವೇಲವನ್ ಈ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಹಲವಾರು ಪೋಸ್ಟ್ ಗ್ರ್ಯಾಜುಯೇಟ್ಸ್ ವಿದ್ಯಾರ್ಥಿಗಳು ಅವರಿಗೆ ಸಹಾಯ ಮಾಡಿದ್ದಾರೆ. ಈ ಕುರಿತಾಗಿ ಮಾಹಿತಿ ನೀಡಿರುವ ಡಾ. ಎ. ವೇಲವನ್ 'ಗೋವಿನ ಹೊಟ್ಟೆಯೊಳಗೆ ಹಲವಾರು ಸೂಜಿಗಳೂ ಪತ್ತೆಯಾಗಿವೆ. ಹೇದಯದ ಬಳಿ ಕೂಡಾ ಸೂಜಿಗಳು ಪತ್ತೆಯಾಗಿವೆ. ಇದೊಂದು ಕಷ್ಟಕರ ಶಸ್ತ್ರಚಿಕಿತ್ಸೆಯಾಗಿತ್ತು. ಒಂದು ವೇಳೆ ಈ ಸೂಜಿಗಳಲ್ಲಿ ಒಂದಾದರೂ ಗೋವಿನ ಹೃದಯಕ್ಕೆ ತಾಗಿದ್ದರೆ ಇದಕ್ಕೂ ಮೊದಲೇ ಅದು ಸತ್ತು ಹೋಗುತ್ತಿತ್ತು' ಎಂದಿದ್ದಾರೆ.

35 ಸಾವಿರ ವೆಚ್ಚದ ಶಸ್ತ್ರಚಿಕಿತ್ಸೆ ಕೇವಲ 140 ರೂಪಾಯಿಗೆ

ಗೋವಿನ ಮಾಲೀಕ ಮುನಿರತ್ನಂ ಈ ಸಂಬಂಧ ಪ್ರತಿಕ್ರಿಯಿಸಿದ್ದು, 'ಆಪರೇಷನ್ ಗೆ ಒಟ್ಟು 140 ರೂ. ತಗುಲಿದೆ. ಆದರೆ ಯಾವುದಾದರೂ ಖಾಸಗಿ ಆಸ್ಪತ್ರೆಯಲ್ಲಿ ಈ ಆಪರೇಷನ್ ನಡೆದಿದ್ದರೆ, 35 ರಿಂದ 40 ಸಾವಿರ ರೂಪಾಯಿ ವೆಚ್ಚವಾಗುತ್ತಿತ್ತು. ಗೋವು ಮೊದಲಿನಂತಾಗಲು ಇನ್ನೂ ಒಂದು ವಾರವಾಗುತ್ತದೆ' ಎಂದಿದ್ದಾರೆ.

Follow Us:
Download App:
  • android
  • ios