ನಿಷ್ಠಾವಂತ ಕಾರ್ಯಕರ್ತರ ನಿರಂತರ ಓಡಾಟದಿಂದ ನನ್ನನ್ನು ಮೊದಲ ಚುನಾವಣೆಯಲ್ಲಿ ಬಲಿಷ್ಠ ಸ್ಪರ್ಧಿಯ ನಡುವೆ ಗೆಲ್ಲಿಸಿಕೊಟ್ಟಿದ್ದಾರೆ’ ಗೀತಾ ಎಂದು ಹೇಳಿದರು.

ಉಳ್ಳಾಲ[ಸೆ.05]: ಅಂತಾರಾಷ್ಟ್ರೀಯ ಖ್ಯಾತಿಯ ಪವರ್‌ ಲಿಫ್ಟರ್‌ ಗೀತಾ ಬಾಯಿ ಉಳ್ಳಾಲ ನಗರಸಭೆಗೆ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. 

ಕಾಂಗ್ರೆಸ್‌ ಪಕ್ಷದ ಯುವ ನಾಯಕಿ ಅಕ್ಷಯಾ ವಿರುದ್ಧ ಅವರು ಗೆಲುವು ದಾಖಲಿಸಿದ್ದಾರೆ. ‘ನಾನು ಅದೇನು ಸಾಧನೆ ಮಾಡಿದರೂ ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳು ನನ್ನ ಪ್ರತಿಭೆಗೆ ಮನ್ನಣೆ ನೀಡುವ ಕಾರ್ಯ ಮಾಡಲಿಲ್ಲ. ಒಂದು ಉತ್ತಮ ಕೆಲಸದ ನಿರೀಕ್ಷೆಯಲ್ಲಿದ್ದೆ. ಅದು ದೊರಕಲಿಲ್ಲ. ಹಾಗಾಗಿ ಪ್ಲಾಸ್ಟಿಕ್‌ ಚೀಲ ಮಾರಿ ಜೀವನ ಸಾಗಿಸುವುದು ಅನಿವಾರ್ಯವಾಯಿತು. ಜೀವನದಲ್ಲಿ ಏನಾದರೂ ಸಾಧಿಸಬೇಕು, ಅದಕ್ಕೆ ಸೇವೆಯೂ ಆಗಬಹುದಲ್ಲ ಎಂಬ ನೆಲೆಯಲ್ಲಿ ಚಿಂತನೆ ಮಾಡಿಕೊಂಡು ಬಿಜೆಪಿ ಮುಖಂಡರ ಮನವಿ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸಿದೆ. 

(* ಎಡದಿಂದ ಮೊದಲಿನವರು ಗೀತಾ)

ನಿಷ್ಠಾವಂತ ಕಾರ್ಯಕರ್ತರ ನಿರಂತರ ಓಡಾಟದಿಂದ ನನ್ನನ್ನು ಮೊದಲ ಚುನಾವಣೆಯಲ್ಲಿ ಬಲಿಷ್ಠ ಸ್ಪರ್ಧಿಯ ನಡುವೆ ಗೆಲ್ಲಿಸಿಕೊಟ್ಟಿದ್ದಾರೆ’ ಗೀತಾ ಎಂದು ಹೇಳಿದರು.