ಜಾಗತಿಕ ಉತ್ಪಾದನಾ ಸೂಚ್ಯಂಕದಲ್ಲಿ ಭಾರತಕ್ಕೆ 30ನೇ ಸ್ಥಾನ

news | Monday, January 15th, 2018
Suvarna Web Desk
Highlights

ಜಾಗತಿಕ ಆರ್ಥಿಕ ವೇದಿಕೆ (ಡಬ್ಲ್ಯೂಇಎಫ್)ಯ ಜಾಗತಿಕ ಉತ್ಪಾದನಾ ಸೂಚ್ಯಂಕದಲ್ಲಿ ಭಾರತ 30ನೇ ಸ್ಥಾನದಲ್ಲಿದೆ. ಸೂಚ್ಯಂಕ ಪಟ್ಟಿಯಲ್ಲಿ ಜಪಾನ್ ಮೊದಲನೇ ಸ್ಥಾನದಲ್ಲಿದೆ.

ನವದೆಹಲಿ: ಜಾಗತಿಕ ಆರ್ಥಿಕ ವೇದಿಕೆ (ಡಬ್ಲ್ಯೂಇಎಫ್)ಯ ಜಾಗತಿಕ ಉತ್ಪಾದನಾ ಸೂಚ್ಯಂಕದಲ್ಲಿ ಭಾರತ 30ನೇ ಸ್ಥಾನದಲ್ಲಿದೆ. ಸೂಚ್ಯಂಕ ಪಟ್ಟಿಯಲ್ಲಿ ಜಪಾನ್ ಮೊದಲನೇ ಸ್ಥಾನದಲ್ಲಿದೆ. ಜಿನೆವಾ ಮೂಲದ ಎಬ್ಲ್ಯೂಇಎಫ್’ನ ‘ಉತ್ಪಾದನಾ ಭವಿಷ್ಯ ವರದಿ’ಯಲ್ಲಿ ಈ ರ್ಯಾಂಕಿಂಗ್ ನೀಡಲಾಗಿದೆ. ನಂತರದ ಟಾಪ್ 10 ರಾಷ್ಟ್ರಗಳ ಪಟ್ಟಿಯಲ್ಲಿ ದಕ್ಷಿಣ ಕೊರಿಯಾ, ಜರ್ಮನಿ, ಸ್ವಿಜರ್‌ಲೆಂಡ್, ಚೀನಾ ಮತ್ತಿತರ ರಾಷ್ಟ್ರಗಳಿವೆ.

ನೆರೆಯ ಚೀನಾ ಐದನೇ ಸ್ಥಾನ ದಲ್ಲಿದ್ದರೆ, ಬ್ರಿಕ್ಸ್ ರಾಷ್ಟ್ರಗಳಾದ ರಷ್ಯಾ (35), ಬ್ರೆಜಿಲ್ (41), ದಕ್ಷಿಣ ಆಫ್ರಿಕಾ (45) ಭಾರತದ ನಂತರದ ಸ್ಥಾನಗಳಲ್ಲಿವೆ. 100 ರಾಷ್ಟ್ರಗಳ ಪಟ್ಟಿಯಲ್ಲಿ 4 ವಿಭಾಗಗಳನ್ನು ಮಾಡಲಾಗಿದೆ.

Comments 0
Add Comment