ಕಳೆದ 22 ವರ್ಷಗಳಿಂದ ಪ್ರತಿವಾರ ಓದುಗರ ಕೈ ಸೇರುತ್ತಿದ್ದ ಹಾಯ್ ಬೆಂಗಳೂರು ಇನ್ನು ಕೆಲವು ದಿನಗಳಲ್ಲಿ ನೆನಪಾಗಿ ಮಾತ್ರ ಉಳಿಯಲಿದೆ.

ಬೆಂಗಳೂರು(ಸೆ.27): ವಿಶಿಷ್ಟ ಬರವಣಿಗೆಯ ಮೂಲಕ ತಮ್ಮದೆ ಓದುಗ ಅಭಿಮಾನಿಗಳನ್ನು ಹೊಂದಿದ ಪತ್ರಕರ್ತ ರವಿಬೆಳಗೆರೆ ತಮ್ಮ ವಾರಪತ್ರಿಕೆ ಹಾಯ್ ಬೆಂಗಳೂರನ್ನು ಮುಚ್ಚುವ ನಿರ್ಧಾರ ಕೈಗೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ 22 ವರ್ಷಗಳಿಂದ ಪ್ರತಿವಾರ ಓದುಗರ ಕೈ ಸೇರುತ್ತಿದ್ದ ಹಾಯ್ ಬೆಂಗಳೂರು ಇನ್ನು ಕೆಲವು ದಿನಗಳಲ್ಲಿ ನೆನಪಾಗಿ ಮಾತ್ರ ಉಳಿಯಲಿದೆ. 'ಒನ್ ಇಂಡಿಯಾ' ವೆಬ್'ಸೈಟ್'ಗೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿ ತಿಳಿಸಿದ್ದಾರೆ.

ಪತ್ರಿಕೆ ಮುಚ್ಚುವುದಕ್ಕೆ ವಯಸ್ಸು, ಕುಟುಂಬಸ್ಥರೊಂದಿಗೆ ಕಾಲ ಕಳೆಯುವಿಕೆ ಹಾಗೂ ಮನಮುಟ್ಟುವ ಬರವಣೆಗೆಯ ಕಾರಣಗಳನ್ನು ನೀಡಿದ್ದು, 'ಓ ಮನಸೆ' ಮೂಲಕ ತಮ್ಮ ಬರವಣಿಗೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.