ಕೇರಳ ರಾಜ್ಯದ ಸಚಿವ ಸಿಪಿಐ ಶಾಸಕ ಗೀತ ಗೋಪಿ ಎಂಬವರ ಮಗಳ ಮದುವೆ ಸ್ಯ ಚರ್ಚೆಯಲ್ಲಿದ್ದು, ಮಗಳ ಮದುವೆಯ ಫೋಟೋ ಒಂದು ಸಾಮಾಜಿ ಜಾಲಾತಾನಗಳಲ್ಲಿ ವೈರಲ್ ಆಗಿದೆ. ಈ ಮದುವೆಯ ಫೋಟೋದಲ್ಲಿ ಮದುಮಗಳೂ ಮೇಲಿಂದ ಕೆಳಗಿನವರೆಗೂ ಚಿನ್ನದಲ್ಲೇ ಸಿಂಗರಿಸಿಕೊಂಡಿರುವುದೇ ವಿವಾದಕ್ಕೆ ಕಾರಣವಾಗಿದೆ.

ಕೇರಳ(ಜೂ.07): ಕೇರಳ ರಾಜ್ಯದ ಸಚಿವ ಸಿಪಿಐ ಶಾಸಕ ಗೀತ ಗೋಪಿ ಎಂಬವರ ಮಗಳ ಮದುವೆ ಸ್ಯ ಚರ್ಚೆಯಲ್ಲಿದ್ದು, ಮಗಳ ಮದುವೆಯ ಫೋಟೋ ಒಂದು ಸಾಮಾಜಿ ಜಾಲಾತಾನಗಳಲ್ಲಿ ವೈರಲ್ ಆಗಿದೆ. ಈ ಮದುವೆಯ ಫೋಟೋದಲ್ಲಿ ಮದುಮಗಳೂ ಮೇಲಿಂದ ಕೆಳಗಿನವರೆಗೂ ಚಿನ್ನದಲ್ಲೇ ಸಿಂಗರಿಸಿಕೊಂಡಿರುವುದೇ ವಿವಾದಕ್ಕೆ ಕಾರಣವಾಗಿದೆ.

ವಾಸ್ತವವಾಗಿ ಸಿಪಿಐ ಪಕ್ಷದ ನಾಯಕ ಹಾಗೂ ಕೇರಳದ ಮಾಜಿ ಕೃಪಿ ಮಂತ್ರಿ ಮುಲ್ಲಾಕಾರ ರತ್ನಾಕರ ಏಪ್ರಿಲ್'ಲ್ನಷ್ಟೇ ಆಡಂಬರದ ಮದುವೆಯ ವಿಚಾರವಾಗಿ ಮಾತ್ತೆತ್ತಿದ್ದರು. ವಿಧಾನಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದ ಶಾಸಕ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಳಿ ಭವ್ಯ ಹಾಗೂ ಆಡಂಭರದ ಮದುವೆಗೆಗಳಿಗೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿಗಿಳಿಸಬೇಕಾಗಿ ವಿನಂತಿಸಿಕೊಂಡಿದ್ದರು.

ಮದುವೆಯ ಈ ಫೋಟೋಗಳಲ್ಲಿ ಮದುಮಗಳು ಅಪಾರ ಪ್ರಮಾಣದ ಚಿನ್ನ ಧರಿಸಿರುವುದು ಕಂಡು ಬರುತ್ತದೆ. ಈ ಫೋಟೋಗಳು ಬಹಿರಂಗವಾಗುತ್ತಿದ್ದಂತೆಯೇ ಮಾತೆತ್ತಿರುವ ಪಕ್ಷದ ಇತರ ಸದಸ್ಯರು ಇದರಿಂದ ನಮ್ಮ ಪಕ್ಷಕ್ಕೆ ಕೆಟ್ಟ ಹೆಸರು ಬರಲಿದೆ ಎಂದು ಎಚ್ಚರಿಸಿದ್ದಾರೆ. ಇನ್ನು ಈ ಕುರಿತಾಗಿ ಮಾತನಾಡಿರುವ ಗೀತಾ ಗೋಪಿ 'ಮದುವೆ ಬಹಳ ಸರಳವಾಗಿ ನಡೆದಿದೆ, ಸಮಾಜದಲ್ಲಿ ಓರ್ವ ತಂದೆ ತನ್ನ ಮಗಳಿಗಾಗಿ ಏನು ಮಾಡುತ್ತಾರೋ ಅದನ್ನೇ ನಾನೂ ಮಾಡಿದ್ದೇನೆ' ಎಂದಿದ್ದಾರೆ.