ಪ್ರಧಾನಿ ನರೇಂದ್ರ ಮೋದಿಯನ್ನು ಕಾಂಗ್ರೆಸ್  ಟೀಕಿಸುತ್ತದೆಯೇ ಹೊರತು ಅವರಿಗೆ ಅಗೌರವ ತೋರಿಸುವುದಿಲ್ಲ ಎಂದು ರಾಹುಲ್ ಗಾಂಧಿ ಗುಜರಾತ್'ನಲ್ಲಿ ಚುನಾವಣಾ ಭಾಷಣದಲ್ಲಿ ಹೇಳಿದ್ದಾರೆ.

ನವದೆಹಲಿ (ನ.12):ಪ್ರಧಾನಿ ನರೇಂದ್ರ ಮೋದಿಯನ್ನು ಕಾಂಗ್ರೆಸ್ ಟೀಕಿಸುತ್ತದೆಯೇ ಹೊರತು ಅವರಿಗೆ ಅಗೌರವ ತೋರಿಸುವುದಿಲ್ಲ ಎಂದು ರಾಹುಲ್ ಗಾಂಧಿ ಗುಜರಾತ್'ನಲ್ಲಿ ಚುನಾವಣಾ ಭಾಷಣದಲ್ಲಿ ಹೇಳಿದ್ದಾರೆ.

ನಾವು ಏನೇ ಮಾಡಿದರೂ ಅದು ನರೇಂದ್ರ ಮೋದಿ ಹಾಗೂ ಬಿಜೆಪಿಯವರ ತಪ್ಪನ್ನು ಹೇಳುತ್ತೇವೆಯೇ ಹೊರತು ಪ್ರಧಾನ ಮಂತ್ರಿ ಸ್ಥಾನವನ್ನು ಅಗೌರವಿಸುವುದಿಲ್ಲ. ಮೋದಿಯವರು ವಿರೋಧಪಕ್ಷದಲ್ಲಿದ್ದಾಗ ಅಂದಿನ ಪ್ರಧಾನಿಯವರ ಬಗ್ಗೆ ಲಘುವಾಗಿ ಮಾತನಾಡಿದ್ದರು. ಅಗೌರವ ತೋರಿಸಿದ್ದರು. ಇದು ನಮಗೆ ಅವರಿಗೆ ಇರುವ ವ್ಯತ್ಯಾಸ. ಅವರು ನಮ್ಮ ಬಗ್ಗೆ ಮಾತಾನಾಡಿದ್ದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಅವರ ಸ್ಥಾನಕ್ಕೆ ನಾವು ಗೌರವ ಕೊಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಗುಜರಾತ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಗುಜರಾತ್'ನಲ್ಲಿ ಬಿಜೆಪಿ ಅಭಿವೃದ್ದಿ ಮಂತ್ರ ಹಳ್ಳ ಹಿಡಿದಿದೆ ಎಂದು ಆರೋಪಿಸಿದ್ದಾರೆ.