ಈ ಸರ್ಕಾರದ ಅವಧಿಯಲ್ಲಿ ಬೆಳಗಾವಿಯಲ್ಲಿ ನಡೆಯುವ ಕೊ‌ನೆಯ ಅಧಿವೇಶನ ಇದಾಗಿದೆ. ಸುವರ್ಣಸೌಧದ ನಿರ್ಮಾಣದ ಉದ್ದೇಶವೇ ಈ ಭಾಗದ ಸಮಸ್ಯೆಗಳ ಮೇಲೆ ಚರ್ಚೆ ಆಗಲಿ ಎನ್ನುವ ಉದ್ದೇಶದಿಂದ. ಈ ಭಾಗದ ಸಮಸ್ಯೆಗಳ ಬಗ್ಗೆ ಜಗದೀಶ ಶೆಟ್ಟರ್, ದತ್ತ, ಕೋನರೆಡ್ಡಿ ಹಾಗೂ ನಡಹಳ್ಳಿ ಮಾತನಾಡಿದ್ದಾರೆ. 5.15 ಗಂಟೆ ಚರ್ಚೆ ನಡೆದಿದೆ. ಇನ್ನೂ ಹೆಚ್ಚು ಶಾಸಕರು ಚರ್ಚೆಯಲ್ಲಿ ಪಾಲ್ಗೊಳ್ಳಬೇಕಿತ್ತು ಎಂದು ಸಿಎಂ ಹೇಳಿದ್ದಾರೆ.
ಬೆಂಗಳೂರು (ನ.23): ಈ ಸರ್ಕಾರದ ಅವಧಿಯಲ್ಲಿ ಬೆಳಗಾವಿಯಲ್ಲಿ ನಡೆಯುವ ಕೊನೆಯ ಅಧಿವೇಶನ ಇದಾಗಿದೆ. ಸುವರ್ಣಸೌಧದ ನಿರ್ಮಾಣದ ಉದ್ದೇಶವೇ ಈ ಭಾಗದ ಸಮಸ್ಯೆಗಳ ಮೇಲೆ ಚರ್ಚೆ ಆಗಲಿ ಎನ್ನುವ ಉದ್ದೇಶದಿಂದ. ಈ ಭಾಗದ ಸಮಸ್ಯೆಗಳ ಬಗ್ಗೆ ಜಗದೀಶ ಶೆಟ್ಟರ್, ದತ್ತ, ಕೋನರೆಡ್ಡಿ ಹಾಗೂ ನಡಹಳ್ಳಿ ಮಾತನಾಡಿದ್ದಾರೆ. 5.15 ಗಂಟೆ ಚರ್ಚೆ ನಡೆದಿದೆ. ಇನ್ನೂ ಹೆಚ್ಚು ಶಾಸಕರು ಚರ್ಚೆಯಲ್ಲಿ ಪಾಲ್ಗೊಳ್ಳಬೇಕಿತ್ತು ಎಂದು ಸಿಎಂ ಹೇಳಿದ್ದಾರೆ.
ನಮ್ಮ ಸರ್ಕಾರದ ಆರಂಭದಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳು, ಹೋರಾಟ ಈಗ ನಡೆಯುತ್ತಿಲ್ಲ. ಅಂದರೆ ಸರ್ಕಾರದ ಆಡಳಿತ , ಜನಪರ ಯೋಜನೆಗಳು ಜನರಿಗೆ ಮನವರಿಕೆಯಾದ ಹಿನ್ನಲೆಯಲ್ಲಿ ಹೋರಾಟ ಮಾಡುತ್ತಿಲ್ಲ. ಜೊತೆಗೆ ಜನತೆಗೂ ಸರ್ಕಾರದ ಮೇಲೆ ವಿಶ್ವಾಸ ಮೂಡಿರುವುದನ್ನು ತೋರಿಸುತ್ತದೆ. ಆರಂಭದಲ್ಲಿ ವೈದ್ಯರ ಪ್ರತಿಭಟನೆ ನಡೆಯಿತು. ಅದು ಅವರ ತಪ್ಪುಗ್ರಹಿಕೆಯಿಂದ ನಡೆದದ್ದು ಎಂದಿದ್ದಾರೆ.
ಸಿಎಂ ಉತ್ತರದ ವೇಳೆ ಪ್ರತಿಪಕ್ಷ ಸದಸ್ಯರ ಕುರ್ಚಿ ಖಾಲಿ ಖಾಲಿಯಾಗಿದೆ. ಪ್ರತಿಪಕ್ಷ ಮುಖಂಡ ಜಗದೀಶ ಶೆಟ್ಟರ್ ಕೂಡಾ ಗೈರು ಹಾಜರಾಗಿದ್ದಾರೆ. ಬಿಜೆಪಿಯವರು ಗೋರಂಟಿ ಬಿಡೋದು ಬೇಡ. ಜನ ನಮಗೆ ಮತ್ತೇ ನಮಗೆ ಆಶೀರ್ವಾದ ಮಾಡುತ್ತಾರೆ ಅನ್ನುವ ವಿಶ್ವಾಸವಿದೆ. ನಾವೇ ಮುಂದೆ ಅಧಿಕಾರಕ್ಕೆ ಬರುತ್ತೇವೆ ಅನ್ನೋ ಸಿಟಿ ರವಿ ಮಾತಿಗೆ ಸಿಎಂ ಟಾಂಗ್ ನೀಡಿದ್ದಾರೆ.
