ಹಂತಕನಿಗೆ ಜೊತೆಗಾರನ ಹೆಸರು ಗೊತ್ತಿಲ್ಲವಂತೆ

We Know Him, Say Right Wing Leaders Named By Gauri Lankesh Murder-Accused
Highlights

  • ಆರೋಪಿಗಳ ಹರೇ ಕೃಷ್ಣ.. ಹರೇ ರಾಮ ಜಪ..! 
  • SIT ಅಧಿಕಾರಿಗಳಿಂದ ತನಿಖೆ ಮತ್ತಷ್ಟು ಚುರುಕು

ಗೌರಿ ಲಂಕೇಶ್ ಹತ್ಯೆಗೆ ಹಂತಕನ ವಿಚಾರಣೆ ವೇಳೆ ಹಲವು ರೋಚಕ ವಿಷಯಗಳು ಹೊರಬೀಳುತ್ತಿವೆ. ಗೌರಿಗೆ ಗುಂಡು ಹಾರಿಸಿದ್ದು ನಾನೇ ಎನ್ನುತ್ತಿರುವ ಪರಶುರಾಮ್, ಸಹ ಆರೋಪಿಗಳ ಬಗ್ಗೆ ಮಾತ್ರ ಬಾಯ್ಬಿಡುತ್ತಿಲ್ಲ. ಆದರೂ. ಸಾಕ್ಷ್ಯಗಳನ್ನ ಕಲೆ ಹಾಕಿರುವ ಎಸ್ಐಟಿ ಅಧಿಕಾರಿಗಳು ಹತ್ಯೆಗೆ ಬಳಸಿದ ಪಿಸ್ತೂಲ್ ಹಾಗೂ ಬೈಕ್ ರೈಡರ್'ಗಾಗಿ ತೀವ್ರ ಹುಡುಕಾಟ ಮುಂದುವರೆಸಿದೆ.

ಪರಶುರಾಮ್, ನಾನೇ ಗುಂಡು ಹಾರಿಸಿದ್ದು ಎಂದು ಹೇಳುತ್ತಿದ್ದರೂ, ಕೋರ್ಟ್ನಲ್ಲಿ ಕೇಸ್ ನಿಲ್ಲಲು ಸಾಕ್ಷಿಗಳು ಬೇಕು. ಹಾಗೂ ಗುಂಡು ಹಾರಿಸಿದ ಗನ್ ಹಾಗೂ ಪರಶುರಾಮ್ ಜೊತೆ ಬಂದಿದ್ದ ಮತ್ತೊಬ್ಬ ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಗೌರಿಗೆ ಗುಂಡು ಹಾರಿಸಿರುವ ಪರಶುರಾಮನಿಗೆ ತನ್ನ ಜೊತೆ ಬಂದವನ ಹೆಸರೇ ಗೊತ್ತಿಲ್ಲವಂತೆ. ಹೆಸರು ಕೇಳಿದ್ರೆ, ಶೂಟ್ ಮಾಡೋದಷ್ಟೆ ನಿನ್ನ ಕೆಲಸ. ನನ್ನನ್ನು ಅಣ್ಣ ಅಂತ ಮಾತ್ರ ಕರಿ ಎಂದು ಹೇಳಿದ್ದನಂತೆ. ಹೀಗಾಗಿ ಬೈಕ್ ಯಾರ್ ಅನ್ನೋದು ನನಗೆ ಗೊತ್ತಿಲ್ಲ ಎಂದು ಹಂತಕ ಕಥೆ ಕಟ್ಟುತ್ತಿದ್ದಾನಂತೆ ಅಂತ ಎಸ್ಐಟಿ ಮೂಲಗಳು ತಿಳಿಸಿವೆ.

ಆರೋಪಿಗಳ ಹರೇ ಕೃಷ್ಣ.. ಹರೇ ರಾಮ ಜಪ..! 
ವಿಚಾರಣೆ ವೇಳೆ ಯಾವುದೇ ಮಾಹಿತಿ ಬಾಯ್ಬಿಡದ ಆರೋಪಿಗಳು ಕೇವಲ ಹರೇ ರಾಮ, ಹರೇ ಕೃಷ್ಣ ಜಪ ಮಾಡ್ತಿದ್ದಾರೆ. ಸಾಕ್ಷಿಗಳನ್ನು ಮುಂದಿಟ್ಟರೂ ನಮಗೇನೂ ಗೊತ್ತೇ ಇಲ್ಲ ಅಂತ ಜಪ ಮಾಡುತ್ತಿದ್ದಾರೆ. ಹೀಗಾಗಿ ಸಾಕ್ಷ್ಯಾಧಾರಗಳ ಕಲೆ ಹಾಕುವ ನಿಟ್ಟಿನಲ್ಲಿ ಎಸ್ಐಟಿ ಹೆಚ್ಚು ಗಮನ ಹರಿಸಿದೆ.

ಇದೇ ವೇಳೆ ಗೌರಿ ಹತ್ಯೆಯ ಆರೋಪ ಹೊಟ್ಟೆ ಮಂಜ ಅಲಿಯಾಸ್ ಕೆ.ಟಿ.ನವೀನ್ ಕುಮಾರ್ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ನವೀನ್ ಪರ ವಕೀಲ ವೇದಮೂರ್ತಿ ಅರ್ಜಿ ಸಲ್ಲಿಸಿದ್ದು, ಯಾವುದೇ ತಪ್ಪು ಮಾಡಿಲ್ಲ ಎಂದು ನಮೂದಿಸಿದ್ದಾರೆ. ನಾಳೆ ಸೆಷನ್ಸ್ ಕೋರ್ಟಿನಲ್ಲಿ  ಜಾಮೀನು ಅರ್ಜಿಯ ವಿಚಾರಣೆ ಬರುವ ಸಾಧ್ಯತೆ ಇದೆ.
 

loader