ಯಡಿಯೂರಪ್ಪ ಸವಾಲು ಎದುರಿಸಲು ನಾವು ಸಿದ್ಧ : ಪರಮೇಶ್ವರ್

First Published 26, May 2018, 11:51 AM IST
We Face BS Yeddyurappa Challenge Says G. Parameshwar
Highlights

ಇಂದು ಸಂಜೆ ದೆಹಲಿಗೆ ತೆರಳಿ ಅಲ್ಲಿ ಸಚಿವರ ಆಯ್ಕೆ, ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಹೈ ಕಮಾಂಡ್ ಜೊತೆಗೆ ಚರ್ಚೆ ನಡೆಸುವುದಾಗಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದ್ದಾರೆ.  
 


ಬೆಂಗಳೂರು [ಮೇ 26] : ಇಂದು ಸಂಜೆ ದೆಹಲಿಗೆ ತೆರಳಿ ಅಲ್ಲಿ ಸಚಿವರ ಆಯ್ಕೆ, ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಹೈ ಕಮಾಂಡ್ ಜೊತೆಗೆ ಚರ್ಚೆ ನಡೆಸುವುದಾಗಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದ್ದಾರೆ.  

ಅಲ್ಲದೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೆಹಲಿಗೆ ಬರುವುದಿಲ್ಲ.  ಆದರೆ ಜೆಡಿಎಸ್ ನಲ್ಲಿ ಯಾರು ಸಚಿವರಾಗಬೇಕು ಎನ್ನುವುದನ್ನು ಅವರೇ ಪಟ್ಟಿ ಮಾಡಲಿದ್ದಾರೆ ಎಂದಿದ್ದಾರೆ.  

ಇನ್ನು ಸಚಿವರ ಆಯ್ಕೆಯಲ್ಲಿ ಯಾವ ಮಾನದಂಡ ಅನುಸರಿಸಬೇಕು ಅನ್ನೋದು ಹೈಕಮಾಂಡ್ ನಿರ್ಧರಿಸಲಿದೆ. ಅಲ್ಲದೇ  ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ದೆಹಲಿಯಲ್ಲಿ ಚರ್ಚೆಯಾಗಬಹುದು ಎಂದು ಪರಮೇಶ್ವರ್ ಹೇಳಿದ್ದಾರೆ. 

ಇನ್ನು ರೈತರ ಸಾಲ ಮನ್ನಾ ಮಾಡದಿದ್ದಲ್ಲಿ ರಾಜ್ಯದಲ್ಲಿ ಬಂದ್ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ. ಅವರ ಎಚ್ಚರಿಕೆಯನ್ನು ನಾವು ಎದುರಿಸಲಿದ್ದೇವೆ ಎಂದು ಇದೇ ವೇಳೆ ಪರಮೇಶ್ವರ್ ಅವರು ಸವಾಲು ಹಾಕಿದ್ದಾರೆ.

loader