ಲಕ್ನೋ (ಸೆ.17): ಉತ್ತರ ಪ್ರದೇಶದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಎನ್ನುವುದು ಹುಡುಗಾಟವಲ್ಲ ಗಂಭೀರವಾದ ವಿಚಾರ ಎಂದು ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷರಾಗಿ ತಮ್ಮ ಚಿಕ್ಕಪ್ಪ ಶಿವಪಾಲ್ ಯಾದವ್ ರನ್ನು ನೇಮಕ ಮಾಡಲು ನಿರ್ಧರಿಸಿದ ಬಳಿಕ ಅಖಿಲೇಶ್ ಹೀಗೆಂದು ಹೇಳಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕವಾದ ಶಿವಪಾಲ್ ರನ್ನು ಅಭಿನಂದಿಸುತ್ತೇನೆ. ನಮ್ಮ ತಂದೆಯೂ ಚಿಕ್ಕಪ್ಪನಿಗೆ ಬೆಂಬಲ ನೀಡುತ್ತಾರೆ. ನಮ್ಮಲ್ಲಿ ಒಗ್ಗಟ್ಟಿದೆ. ನಮ್ಮ ಪಕ್ಷದಲ್ಲಿ ಬಿರುಕಿಲ್ಲ ಎಂದು ಅಖಿಲೇಶ್ ಸುದ್ಧಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಅಖಿಲೇಶ್ ಯಾದವ್ ರನ್ನು ಮುಲಾಯಂ ಸಿಂಗ್ ಆ ಸ್ಥಾನದಿಂದ ತೆಗೆದು ಹಾಕಿದ್ದರು. ಆ ಸ್ಥಾನಕ್ಕೆ ಸಹೋದರ ಶಿವಪಾಲರನ್ನು ನೇಮಿಸಿದ್ದರು. ಈ ವಿಚಾರವಾಗಿ ಪಕ್ಷದಲ್ಲಿ ಆಂತರಿಕವಾಗಿ ಭಿನ್ನಾಭಿಪ್ರಾಯ ತಲೆದೂರಿತ್ತು.