ಬಿಜೆಪಿ ನಾಯಕರು ಹ್ಯಾರಿಸ್ ಪುತ್ರ ನಲಪಾಡ್ ಪ್ರಕರಣ ಪ್ರಸ್ತಾಪಿಸಿ ಟೀಕಿಸುತ್ತಿದ್ದಾರೆ. ಹ್ಯಾರಿಸ್ ನಮ್ಮ ಪಕ್ಷದ ಶಾಸಕ ಅಂತ ಮುಲಾಜು ನೋಡಿಲ್ಲ. ಸರ್ಕಾರ‌ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಕೈಗೊಂಡಿದ್ದೇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬೆಂಗಳೂರು (ಫೆ.26): ಬಿಜೆಪಿ ನಾಯಕರು ಹ್ಯಾರಿಸ್ ಪುತ್ರ ನಲಪಾಡ್ ಪ್ರಕರಣ ಪ್ರಸ್ತಾಪಿಸಿ ಟೀಕಿಸುತ್ತಿದ್ದಾರೆ. ಹ್ಯಾರಿಸ್ ನಮ್ಮ ಪಕ್ಷದ ಶಾಸಕ ಅಂತ ಮುಲಾಜು ನೋಡಿಲ್ಲ. ಸರ್ಕಾರ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಕೈಗೊಂಡಿದ್ದೇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ನಲಪಾಡ್ ಬಳಿ ಗನ್ ಇರಲಿಲ್ಲ, ಅವರ ತಂದೆ ಬಳಿ ಲೈಸೆನ್ಸ್ ಇದೆ ಆದರೆ ನಲಪಾಡ್ ಬಳಿ ಗನ್ ಇಲ್ಲ ಯಾರು ತಪ್ಪು ಮಾಡಿದರೂ ತಪ್ಪೇ ಗನ್’ಗಳಿರುವ ಬಗ್ಗೆ ಸರ್ಚ್ ಮಾಡಿದಾಗ ಸಿಕ್ಕಿಲ್ಲ. ಈ ಬಗ್ಗೆ ತನಿಖೆ ಮಾಡಿಸುವೆ ಎಂದಿದ್ದಾರೆ.
ನಾನು ಹ್ಯಾರಿಸ್ ಜತೆ ಈ ಸಂಬಂಧ ಸಭೆ ನಡೆಸಿದ್ದೇನೆ ಅಂತ ಶೋಭಾ ಕರಂದ್ಲಾಜೆ ಆಪಾದಿಸಿದ್ದಾರೆ ಅವರಿಗೆ ದಿವ್ಯ ದೃಷ್ಟಿ ಇರಬೇಕು. ಹೀಗಾಗಿಯೇ ಈ ರೀತಿಯ ಆರೋಪ ಮಾಡ್ತಿದ್ದಾರೆ. ರಾಹುಲ್ ಗಾಂಧಿ ನಲಪಾಡ್ ಪ್ರಕರಣದ ಬಗ್ಗೆ ಮಾತನಾಡಲಿ ಅಂತ ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದಾರೆ. ರಾಹುಲ್ ಗಾಂಧಿ ಸಮಯ ಬಂದಾಗ ಮಾತಾಡ್ತಾರೆ ಎಂದಿದ್ದಾರೆ.
ಈಶ್ವರಪ್ಪ ಪಿಎ ವಿನಯ್ ಕಿಡ್ನಾಪ್ ಹಾಗೂ ಕೈಮುರಿದ ಪ್ರಕರಣದಲ್ಲಿ ಯಡಿಯೂರಪ್ಪ ಪಿಎ ಸಂತೋಷ್ ಇದ್ದಾರೆ. ಆದರೆ ಈ ಪ್ರಕರಣದ ಬಗ್ಗೆ ಬಿಜೆಪಿ ನಾಯಕರು ಮಾತಾಡಲ್ಲ. ಸಂತೋಷ್’ಗೆ ಬಿಜೆಪಿ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ಕೊಟ್ಟಿದ್ದಾರೆ. ಸಂತೋಷ್ ಯಡಿಯೂರಪ್ಪ ಹಾಗೂ ಶೋಭಾ ಅವರಂತಹ ನಾಯಕರ ಜತೆಯೇ ಇರ್ತಾನೆ ಅವರ ಪಕ್ಷದವರು ಮಾಡಿದರೆ ಬಿಜೆಪಿಯವರು ಖಂಡಿಸಲ್ಲ.ಬಿಜೆಪಿಯವರು ಹೇಳೋದೊಂದು ಮಾಡೋದೊಂದು ಯೋಗಿ ಆದಿತ್ಯನಾಥ್ ಮೇಲೆ ಮರ್ಡರ್ ಕೇಸ್ ಇದೆ ಮರ್ಡರ್ ಕೇಸ್ ಇರುವವರನ್ನೇ ಇವರು ಸಿಎಂ ಮಾಡಿದ್ದಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.
