Asianet Suvarna News Asianet Suvarna News

ನಮಗೆ ಸರ್ಕಾರ ರಚಿಸುವುದು ಗೊತ್ತು, ಉರುಳಿಸುವುದೂ ಗೊತ್ತು : BJP ನಾಯಕ

ನಮಗೆ ಸರ್ಕಾರ ರಚಿಸುವುದೂ ಗೊತ್ತು. ಉರುಳಿಸುವುದೂ ಗೊತ್ತು ಎಂದು ಬಿಜೆಪಿ ನಾಯಕರೋರ್ವರು ಹೇಳಿದ್ದು, ತಮ್ಮ ಜಿಲ್ಲೆಗೆ ಹೆಚ್ಚಿನ ಮಂತ್ರಿ ಸ್ಥಾನದ ಬೇಡಿಕೆಯನ್ನೂ ಇರಿಸಿದ್ದಾರೆ. 

We Are Not The Aspirant Of DCM Post Says BJP Leader Prabhakar Kore
Author
Bengaluru, First Published Jul 28, 2019, 10:07 AM IST
  • Facebook
  • Twitter
  • Whatsapp

ಬೆಳಗಾವಿ[ಜು.28] : ಬೆಳಗಾವಿ ರಾಜಕಾರಣದಲ್ಲಿ ಮುಖ್ಯಮಂತ್ರಿಯಾಗುವಂತವರು ಇದ್ದಾರೆ. ಆದರೆ, ಈವರೆಗೆ ಯಾರೊಬ್ಬರೂ ಮುಖ್ಯಮಂತ್ರಿ ಯಾಗದಿರುವುದು ದುರ್ದೈವದ ಸಂಗತಿಯಾಗಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ರಾಜಕಾರಣಿಗಳು ಮುಖ್ಯಮಂತ್ರಿಯಾಗುತ್ತಾರೆ ಹೊರತು, ಉಪಮುಖ್ಯಮಂತ್ರಿ ಪಟ್ಟಕ್ಕೆ ಆಸೆಪಡುವವರಲ್ಲ. 

ನಮಗೆ ಡಿಸಿಎಂ ಹುದ್ದೆ ಬೇಡವೇ ಬೇಡ ಎಂದರು. ಬೆಳಗಾವಿ ಜಿಲ್ಲೆಯ ರಾಜಕಾರಣಿಗಳಿಗೆ ಸರ್ಕಾರ ರಚಿಸುವುದು ಗೊತ್ತು, ಉರುಳಿಸುವುದು ಗೊತ್ತಿದೆ. ಮೈತ್ರಿ ಸರ್ಕಾರವಷ್ಟೇ ಅಲ್ಲದೇ, ಎಸ್‌.ನಿಜಲಿಂಗಪ್ಪ ಅವರ ಕಾಲದಿಂದಲೂ ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ರಾಜಕೀಯ ಪ್ರಾಬಲ್ಯವಿದೆ ಎಂದು ಹೇಳಿದರು.

ಬಿಜೆಪಿ ಮಹಾಸಾಗರವಿದ್ದಂತೆ. ಯಾರೇ ಆಗಲಿ ಪಕ್ಷಕ್ಕೆ ಬಂದರೂ ಅವರನ್ನು ಮುಕ್ತವಾಗಿ ಸ್ವಾಗತಿಸುತ್ತೇವೆ. ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯದ ಜನತೆಯ ನಿರೀಕ್ಷೆಯಂತೆಯೇ ಮುಖ್ಯಮಂತ್ರಿಯಾಗಿದ್ದಾರೆ. ಈ ಭಾಗದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ. ಜಿಲ್ಲೆಗೆ ಐದು ಮಂತ್ರಿಸ್ಥಾನ ಕೊಟ್ಟರೂ ನಮಗೆ ಸಂತಸವಿದೆ ಎಂದು ಹೇಳಿದರು.

Follow Us:
Download App:
  • android
  • ios