ತರಹೆವಾರಿ ತರಕಾರಿ ಗಿಡಗಳು, ಮನೆ, ಕಾವಲಿಗೊಂದು ನಾಯಿ. ಇದೆಲ್ಲಾ ಇರುವುದು ಸಾರ್ವಜನಿಕರ ಉಪಯೋಗಕ್ಕೆ ಅಂತಾ ಇರುವ ತುಮಕೂರಿನ ಜಯನಗರ ದಕ್ಷಿಣ ಬಡಾವಣೆಯ ಪಾರ್ಕ್. ಇದೇ ಪಾರ್ಕ್ನೊಳಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ವಾಟರ್ ಮ್ಯಾನ್ ಹನುಮಂತಪ್ಪ ಎಂಬಾತ ಮನೆ ಕಟ್ಟಿಕೊಂಡು ಸಂಸಾರ ಹೂಡಿ ದರ್ಬಾರ್ ಮಾಡುತ್ತಿದ್ದಾನೆ. ಸುಮಾರು ಮುಕ್ಕಾಲು ಎಕರೆ ಪ್ರದೇಶದ ಈ ಪಾರ್ಕ್ ಜಾಗ ಕೋಟ್ಯಾಂತರ ರೂಪಾಯಿ ಬೆಲೆ ಬಾಳುತ್ತೆ. ರಿಯಲ್ ಎಸ್ಟೆಟ್ ಕುಳಗಳ ಸಂಪರ್ಕದಲ್ಲಿರುವ ಹನುಂತರಾಯಪ್ಪ ಈ ಜಾಗ ಕಬಳಿಸುವ ಹುನ್ನಾರ ನಡೆಸಿದ್ದಾರೆ ಎನ್ನುವ ಆರೋಪ ಸ್ಥಳೀಯರದ್ದು.
ತುಮಕೂರು(ಅ.16): ಇದು ಹೆಸರಿಗೆ ಮಾತ್ರ ಸಾರ್ವಜನಿಕ ಪಾರ್ಕ್. ಆದರೆ ಆ ಪಾರ್ಕ್ನಲ್ಲಿರುವುದು ಮಾತ್ರ ವಾಸದ ಮನೆ, ಮತ್ತು ಆತನ ಸಂಸಾರ. ಇದು ಸಾರ್ವಜನಿಕರ ಉದ್ಯಾನವನವನ್ನೇ ಮನೆಯನ್ನಾಗಿಸಿಕೊಂಡ ವಾಟರ್ ಮ್ಯಾನ್ ದರ್ಬಾರ್ ಸ್ಟೋರಿ.
ತರಹೆವಾರಿ ತರಕಾರಿ ಗಿಡಗಳು, ಮನೆ, ಕಾವಲಿಗೊಂದು ನಾಯಿ. ಇದೆಲ್ಲಾ ಇರುವುದು ಸಾರ್ವಜನಿಕರ ಉಪಯೋಗಕ್ಕೆ ಅಂತಾ ಇರುವ ತುಮಕೂರಿನ ಜಯನಗರ ದಕ್ಷಿಣ ಬಡಾವಣೆಯ ಪಾರ್ಕ್. ಇದೇ ಪಾರ್ಕ್ನೊಳಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ವಾಟರ್ ಮ್ಯಾನ್ ಹನುಮಂತಪ್ಪ ಎಂಬಾತ ಮನೆ ಕಟ್ಟಿಕೊಂಡು ಸಂಸಾರ ಹೂಡಿ ದರ್ಬಾರ್ ಮಾಡುತ್ತಿದ್ದಾನೆ.
ಸುಮಾರು ಮುಕ್ಕಾಲು ಎಕರೆ ಪ್ರದೇಶದ ಈ ಪಾರ್ಕ್ ಜಾಗ ಕೋಟ್ಯಾಂತರ ರೂಪಾಯಿ ಬೆಲೆ ಬಾಳುತ್ತೆ. ರಿಯಲ್ ಎಸ್ಟೆಟ್ ಕುಳಗಳ ಸಂಪರ್ಕದಲ್ಲಿರುವ ಹನುಂತರಾಯಪ್ಪ ಈ ಜಾಗ ಕಬಳಿಸುವ ಹುನ್ನಾರ ನಡೆಸಿದ್ದಾರೆ ಎನ್ನುವ ಆರೋಪ ಸ್ಥಳೀಯರದ್ದು.
ಕಳೆದ 20 ವರ್ಷದಿಂದ ಇದೇ ಬಡಾವಣೆಯಲ್ಲಿ ವಾಟರ್ ಮ್ಯಾನ್ ಆಗಿರುವ ಹನುಮಂತರಾಯಪ್ಪ ಪಾರ್ಕ್ನಲ್ಲೇ ಸಂಸಾರ ಹೂಡಿದರೂ ಈ ವಾರ್ಡನ್ ಸದ್ಯರಾಗಲಿ. ಪಾಲಿಕೆ ಆಯುಕ್ತರಾಗಲಿ ಕ್ರಮಕ್ಕೆ ಮುಂದಾಗಿಲ್ಲ. ಇನ್ನು ಸಾರ್ವಜನಿಕರಿಂದ ದೂರುಗಳು ಹೋದ್ರೂ ಅಧಿಕಾರಿಗಳು ದಿವ್ಯಮೌನ ವಹಿಸಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಪಾರ್ಕ್ನ್ನ ಸಾರ್ವಜನಿಕರ ಅನುಕೂಲಕ್ಕೆ ಸಿಗುವಂತೆ ಮಾಡಲಿ.
