ಅಮಚವಾಡಿ ಗ್ರಾಮವೇನೂ ತುಂಬಾ ದೂರವಿಲ್ಲ. ಜಿಲ್ಲಾ ಕೇಂದ್ರಕ್ಕೆ ಕೇವಲ 10 ಕಿ.ಮೀ. ದೂರ. ಊರಿಗೆ 4 ಕೊಳವೆ ಬಾವಿಗಳಿವೆ. ಮೂರು ಕೆಟ್ಟಿದ್ದರೆ, ಒಂದು ಮಾತ್ರ ಕೆಲಸ ಮಾಡುತ್ತಿದೆ. ಕೆಟ್ಟಿರುವ ಮೋಟರ್'ಗಳನ್ನು ರಿಪೇರಿ ಮಾಡಿಸಲೂ ಪಂಚಾಯ್ತಿಯಲ್ಲಿ ದುಡ್ಡಿಲ್ಲವಂತೆ.
ಚಾಮರಾಜನಗರ, ಅದು ಬರದ ಜಿಲ್ಲೆಯೂ ಹೌದು, ಹಸಿರು ಜಿಲ್ಲೆಯೂ ಹೌದು. ಆದರೆ ಈಗ ಅಲ್ಲಿ ಚಳಿಗಾಲ ಮುಗಿಯೋಕೆ ಮುಂಚೇನೇ ಹಾಹಾಕಾರ ಎದ್ದಿದೆ. ಅಲ್ಲಿನ ಜನರ ಕಷ್ಟ ಕೇಳಬೇಕು. ಕಣ್ಣಲ್ಲಿ ನೀರು ಬರುತ್ತೆ. ಅದು ನೀರು ಕಣ್ಣೀರು.
ಇಲ್ಲಿ ಕುಡಿಯೋಕೆ ಬಿಡಿ, ಇಲ್ಲಿ ತೊಳೆದುಕೊಳ್ಳೋಕೂ ನೀರಿಲ್ಲದೆ ಪರದಾಡುತ್ತಿದ್ದಾರೆ ಜನ. ಅನುಭವಿಸುತ್ತಿರುವ ಸಂಕಟಗಳು ಇವರ ಸಂಕೋಚವನ್ನು ದೂರ ಮಾಡಿವೆ.ಇದು ಚಾಮರಾಜ ನಗರ ಜಿಲ್ಲೆಯ ಅಮಚವಾಡಿ ಗ್ರಾಮ.
ಇಲ್ಲಿನ ಜನಕ್ಕೆ ನೀರಿನ ಸಂಕಟ ಎಷ್ಟರಮಟ್ಟಿಗೆ ಆಗಿದೆಯೆಂದರೆ ನೀರಿಗಾಗಿ ಮಕ್ಕಳನ್ನು ಸ್ಕೂಲು ಬಿಡಿಸಲೂ ಸಿದ್ಧ ಎನ್ನುತ್ತಿದ್ದಾರೆ ಜನರು.
ಇಲ್ಲಿ ಸ್ನಾನಕ್ಕೂ ನೀರಿಲ್ಲ, ಇದೆಲ್ಲದರ ಜೊತೆಗೆ ಇಲ್ಲಿ ರಾಜಕೀಯವೂ ಬೆರೆತುಕೊಂಡಿದೆ. ನೀರಿಗಾಗಿ ಅರ್ಧರಾತ್ರಿ ಕ್ಯೂನಲ್ಲಿ ನಿಲ್ಲುವ ಪರಿಸ್ಥಿತಿ ಈ ಗ್ರಾಮದಲ್ಲಿದೆ.
ಅಮಚವಾಡಿ ಗ್ರಾಮವೇನೂ ತುಂಬಾ ದೂರವಿಲ್ಲ. ಜಿಲ್ಲಾ ಕೇಂದ್ರಕ್ಕೆ ಕೇವಲ 10 ಕಿ.ಮೀ. ದೂರ. ಊರಿಗೆ 4 ಕೊಳವೆ ಬಾವಿಗಳಿವೆ. ಮೂರು ಕೆಟ್ಟಿದ್ದರೆ, ಒಂದು ಮಾತ್ರ ಕೆಲಸ ಮಾಡುತ್ತಿದೆ. ಕೆಟ್ಟಿರುವ ಮೋಟರ್'ಗಳನ್ನು ರಿಪೇರಿ ಮಾಡಿಸಲೂ ಪಂಚಾಯ್ತಿಯಲ್ಲಿ ದುಡ್ಡಿಲ್ಲವಂತೆ.
ಈ ಊರಿಗೆ ನೀರು ಬಂದು ಎರಡು ತಿಂಗಳಾಗಿದೆ. ಕಾರ್ಮಿಕರು ಕೂಲಿ ಕೆಲಸ ಬಿಟ್ಟಿದ್ದಾರೆ. ಮಕ್ಕಳು ಸ್ಕೂಲು ಬಿಟ್ಟಿದ್ದಾರೆ. ಹೆಂಗಸರು ನಿದ್ದೆ ಬಿಟ್ಟಿದ್ದಾರೆ. ನೀರಿಗಾಗಿ ಸುತ್ತಾಡುವುದೇ ಇವರ ಉದ್ಯೋಗವಾಗಿದೆ! ದುರಂತವೆಂದರೆ ಈ ಊರಿಗಾಗಿ ಪಂಚಾಯ್ತಿಯವರು ಕೊರೆಸಿರುವ ಬಾವಿಗಳ ಸಂಖ್ಯೆ 50ಕ್ಕೂ ಹೆಚ್ಚು. ಆದರೆ, ಶಿವರಾತ್ರಿ ಹತ್ತಿರದಲ್ಲದ್ದಾಗಲೇ ನೀರಿಲ್ಲದೆ ಕಣ್ಣೀರಲ್ಲಿ ಕೈತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ವರದಿ: ಶಶಿಧರ ಕೆ.ವಿ.