ಕರ್ನಾಟಕ, ಹಿಮಾಚಲ ಪ್ರದೇಶ, ತ್ರಿಪುರಾ, ಆಂಧ್ರ ಪ್ರದೇಶ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ, ಈ ವರ್ಷ ನೀರಿನ ಸಂಗ್ರಹ ಕಡಿಮೆಯಿದೆ
ನವದೆಹಲಿ(ಮಾ.10): ದೇಶದ ಸುಮಾರು 91 ಜಲಾಶಯಗಳ ನೀರಿನ ಪ್ರಮಾಣ, ಒಟ್ಟು ಸಾಮರ್ಥ್ಯದಿಂದ ಶೇ. 39ಕ್ಕೆ ಇಳಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.
ಮಾ.9ರ ವಾರಾಂತ್ಯದ ವೇಳೆ ಈ ಜಲಾಶಯಗಳಲ್ಲಿ ಕೇವಲ 60.906 ಬಿಲಿಯನ್ ಕ್ಯೂಬಿಕ್ ಮೀಟರ್ (ಬಿಸಿಎಂ) ನೀರು ಮಾತ್ರ ಲಭ್ಯವಿದೆ ಎಂದು ಕೇಂದ್ರ ನೀರಾವರಿ ಸಂಪನ್ಮೂಲ ಸಚಿವಾಲಯ ತಿಳಿಸಿದೆ. ಈ ಜಲಾಶಯಗಳ ಒಟ್ಟು ಸಾಮರ್ಥ್ಯ 157.799 ಬಿಸಿಎಂ ಆಗಿದ್ದು, ಮಾ. 2ರಂದು ಅದು ಶೇ. 41 (64.55 ಬಿಸಿಎಂ)ಕ್ಕೆ ಇಳಿಕೆಯಾಗಿತ್ತು. ಕಳೆದ ವರ್ಷ ಇದೇ ಅವಯಲ್ಲಿ ಶೇ. 132ರಷ್ಟು ನೀರು ಕ್ರೋಢೀಕರಣವಾಗಿತ್ತು ಎಂದು ಸಚಿವಾಲಯ ತಿಳಿಸಿದೆ. ಕರ್ನಾಟಕ, ಹಿಮಾಚಲ ಪ್ರದೇಶ, ತ್ರಿಪುರಾ, ಆಂಧ್ರ ಪ್ರದೇಶ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ, ಈ ವರ್ಷ ನೀರಿನ ಸಂಗ್ರಹ ಕಡಿಮೆಯಿದೆ. ಪಂಜಾಬ್, ರಾಜಸ್ಥಾನ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ, ಈ ವರ್ಷ ನೀರಿನ ಸಂಗ್ರಹ ಉತ್ತಮವಾಗಿದೆ.
