ಸೇಂಟ್ ಲೂಯಿಸ್[ಸೆ.06]: ಅಮೆರಿಕದ ಸೇಂಟ್‌ ಲೂಯಿಸ್‌ನ ಬಾರ್‌ವೊಂದಕ್ಕೆ ನುಗ್ಗಿದ ದರೋಡೆಕೋರರು ಗನ್‌ ತೋರಿಸಿ ಬಾರ್‌ ಅನ್ನು ದೋಚಿದ್ದಾರೆ. ದರೋಡೆಕೋರರು ಬಂದಾಗ ಕೆಲವರು ಹೆದರಿ ತಮ್ಮ ಬಳಿ ಇದ್ದಬಿದ್ದ ವಸ್ತುಗಳನ್ನೆಲ್ಲಾ ಕಳ್ಳರಿಗೆ ನೀಡಿದ್ದಾರೆ. ಇನ್ನು ಕೆಲವರು ಕುರ್ಚಿ ಅಡಿಯಲ್ಲಿ ಅಡಗಿ ಕುಳಿತಿದ್ದರು.

ಆದರೆ, ಬಾರಿನಲ್ಲಿ ಕುಡಿಯುತ್ತಿದ್ದ ಟೋನಿ ಟೋವರ್‌ ಎಂಬಾತ ಏನೂ ಆಗಲೇ ಇಲ್ಲ ಎಂಬಂತೆ ತನ್ನ ಪಾಡಿಗೆ ತಾನು ಮೊಬೈಲ್‌ ಅನ್ನು ನೋಡುತ್ತಿದ್ದ. ದರೋಡೆಕೋರರು ಮೊಬೈಲ್‌ ನೀಡುವಂತೆ ಕೇಳಿದರೂ ಅತ್ತ ತಿರುಗಿಯೂ ನೋಡಿಲ್ಲ. ಬದಲಾಗಿ ಇನ್ನೊಂದು ಸಿಗರೇಟ್‌ ತರಿಸಿಕೊಂಡು ಸೇದಿದ್ದಾನೆ. ಈತನ ಸಹವಾಸವೇ ಬೇಡ ಎಂದು ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಸಿಸಿ ಟೀವಿಯಲ್ಲಿ ಈ ವಿಡಿಯೋ ಸೆರೆಯಾಗಿದ್ದು, ವೈರಲ್‌ ಆಗಿದೆ.