ಅಮೆರಿಕಾದ ಪ್ರಮುಖ ಪತ್ರಿಕೆಯಾದ ವಾಷಿಂಗ್ಟನ್ ಪೋಸ್ಟ್ ತನ್ನ ಪೋರ್ಟಲ್’ನಲ್ಲಿ ಮುಖ್ಯ ಶೀರ್ಷಿಕೆಯನ್ನು ‘Democracy Dies in Darkness’ ( ಪ್ರಜಾತಂತ್ರವು ಕತ್ತಲೆಯಲ್ಲಿ ಸಾವನಪ್ಪುತ್ತದೆ) ಎಂದು ಪ್ರಕಟಿಸುವ ಮೂಲಕ ಟ್ರಂಪ್’ಗೆ ತಿರುಗೇಟು ನೀಡಿದೆ.
ವಾಷಿಂಗ್ಟನ್ (ಫೆ.22): ಅಮೆರಿಕಾದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಮಾದ್ಯಮಗಳ ನಡುವಿನ ‘ಸಮರ’ವು ಹೊಸ ತಿರುವನ್ನು ಪಡೆದುಕೊಂಡಿದೆ.
ಅಮೆರಿಕಾದ ಪ್ರಮುಖ ಪತ್ರಿಕೆಯಾದ ವಾಷಿಂಗ್ಟನ್ ಪೋಸ್ಟ್ ತನ್ನ ಪೋರ್ಟಲ್’ನಲ್ಲಿ ಮುಖ್ಯ ಶೀರ್ಷಿಕೆಯನ್ನು ‘Democracy Dies in Darkness’ ( ಪ್ರಜಾತಂತ್ರವು ಕತ್ತಲೆಯಲ್ಲಿ ಸಾವನಪ್ಪುತ್ತದೆ) ಎಂದು ಪ್ರಕಟಿಸುವ ಮೂಲಕ ಟ್ರಂಪ್’ಗೆ ತಿರುಗೇಟು ನೀಡಿದೆ.

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಟ್ರಂಪ್, ಮಾದ್ಯಮಗಳ ವಿರುದ್ಧ ಹರಿಹಾಯುತ್ತಾ ಬಂದಿದ್ದಾರೆ. ಸರ್ಕಾರದ ನೀತಿಗಳನ್ನು ಟೀಕಿಸಿದ್ದ ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ಇನ್ನಿತರ ಪತ್ರಿಕೆಗಳನ್ನು ಟ್ರಂಪ್ ಅಮೆರಿಕಾದ ಶತ್ರುಗಳೆಂದು ಕರೆದಿದ್ದರು.
ಶ್ವೇತ ಭವನದ ವಕ್ತಾರರು ಕೂಡಾ ಟ್ರಂಪ್ ನಡೆಯನ್ನು ಸಮರ್ಥಿಸಿಕೊಂಡಿದ್ದು, ಕೆಲವು ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಟ್ರಂಪ್ ವಿರುದ್ಧ ಸುಳ್ಳು ಹಾಗೂ ಪೂರ್ವಾಗ್ರಹ ಪೀಡಿತ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆಯೆಂದಿದ್ದರು.